ರಾಯುಡುಗೆ 2 ಪಂದ್ಯ ನಿಷೇಧ ಹೇರಿದ ಬಿಸಿಸಿಐ

By Suvarna Web DeskFirst Published Feb 1, 2018, 10:34 AM IST
Highlights

ರಾಯುಡು ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು 2012ರ ಐಪಿಎಲ್ ಆವೃತ್ತಿಯಲ್ಲಿ ಅವಾಚ್ಯ ಪದ ಬಳಸಿದ್ದಕ್ಕಾಗಿ ಶೇ.100 ದಂಡವನ್ನು ಬಿಸಿಸಿಐ ವಿಧಿಸಿತ್ತು. ಆರ್'ಸಿಬಿ ತಂಡದ ಹರ್ಷಲ್ ಪಟೇಲ್'ರನ್ನು ಕೆಣಕುವ ಬರದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ಶಿಕ್ಷೆಗೆ ಗುರಿಯಾಗಿದ್ದರು. ಪ್ರಸಕ್ತ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್'ಕಿಂಗ್ಸ್ ತಂಡ 2.20 ಕೋಟಿ ರುಪಾಯಿ ನೀಡಿ ಅಂಬಟಿ ರಾಯುಡು ಅವರನ್ನು ಖರೀದಿಸಿದೆ.

ನವದೆಹಲಿ(ಫೆ.01): ಕರ್ನಾಟಕ ವಿರುದ್ಧ ಜ.11ರಂದು ನಡೆದಿದ್ದ ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ, ಹೈದರಾಬಾದ್ ತಂಡದ ನಾಯಕ ಅಂಬಟಿ ರಾಯುಡುಗೆ ಬಿಸಿಸಿಐ 2 ಪಂದ್ಯಗಳ ನಿಷೇಧ ಹೇರಿದೆ.

ಮುಂಬರುವ ವಿಜಯ್ ಹಜಾರೆ ಟ್ರೋಫಿಯ ಮೊದಲ 2 ಪಂದ್ಯಗಳಲ್ಲಿ ಅವರು ಆಡುವಂತಿಲ್ಲ. ಹೈದರಾಬಾದ್ ಕ್ಷೇತ್ರರಕ್ಷಕ ಬೌಂಡರಿ ಬಳಿ ಕ್ಷೇತ್ರರಕ್ಷಣೆ ಮಾಡುವಾಗ ಗೆರೆ ದಾಟಿದ್ದರು. ಅಂಪೈರ್'ಗಳು 2 ರನ್ ನೀಡಿದ್ದರು. ಈ ಇನ್ನಿಂಗ್ಸ್ ಮುಗಿದ ಬಳಿಕ 2 ಹೆಚ್ಚುವರಿ ರನ್‌'ಗಳನ್ನು ಕರ್ನಾಟಕದ ಮೊತ್ತಕ್ಕೆ ಸೇರ್ಪಡೆಗೊಳಿಸಲಾಗಿತ್ತು.

click me!