ರಾಜ್ಯ ಯುವ ಕ್ರಿಕೆಟಿಗರ ಆಯ್ಕೆಗೆ ಲಂಚ?

Published : Dec 06, 2018, 12:17 PM IST
ರಾಜ್ಯ ಯುವ ಕ್ರಿಕೆಟಿಗರ ಆಯ್ಕೆಗೆ ಲಂಚ?

ಸಾರಾಂಶ

ಹಿರಿಯ ಕ್ರೀಡಾ ಪತ್ರಕರ್ತ ಜೋಸೆಫ್‌ ರಾಜ್ಯ ಯುವ ಕ್ರಿಕೆಟಿಗರ ಆಯ್ಕೆಗೆ ಲಂಚ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದು, ಸದ್ಯ ಕೆಎಸ್‌ಸಿಎ ಈ ಆರೋಪ ತಳ್ಳಿಹಾಕಿದೆ.

ಬೆಂಗಳೂರು[ಡಿ.06] ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಹೊಸದೊಂದು ವಿವಾದಕ್ಕೆ ಗುರಿಯಾಗಿದೆ. ವಿವಿಧ ವಯೋಮಿತಿಯ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲು ಕೆಎಸ್‌ಸಿಎ ಆಯ್ಕೆ ಸಮಿತಿ, ಹಿರಿಯ ಅಧಿಕಾರಿಗಳು .50 ಸಾವಿರದಿಂದ .3 ಲಕ್ಷದ ವರೆಗೂ ಲಂಚ ಪಡೆಯುತ್ತಿದ್ದಾರೆ ಎಂದು ಹಿರಿಯ ಕ್ರೀಡಾಪರ್ತ ಜೋಸೆಫ್‌ ಹೂವರ್‌ ಫೇಸ್‌ಬುಕ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಕೆಎಸ್‌ಸಿಎ ತಳ್ಳಿ ಹಾಕಿದೆ.

ಲೀಗ್‌ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಬಿಟ್ಟು ಪ್ರದರ್ಶನ ತೋರದ ಕೆಲ ಆಟಗಾರರಿಗೆ ರಾಜ್ಯ ಅಂಡರ್‌-14 ಸೇರಿದಂತೆ ಇನ್ನೂ ಕೆಲ ವಯೋಮಿತಿಯ ತಂಡಗಳಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ಜೋಸೆಫ್‌ ಆರೋಪಿಸಿದ್ದಾರೆ. ಹಣ ನೀಡಿ ತಂಡದಲ್ಲಿ ಸ್ಥಾನ ಪಡೆಯಿರಿ ಎನ್ನುವ ನಿಯಮವನ್ನು ಕೆಎಸ್‌ಸಿಎ ಪೋಷಕರ ಮೇಲೆ ಹೇರಿದೆ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಈ ಬಗ್ಗೆ ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್‌ ರಾವ್‌ರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ‘ಜೋಸೆಫ್‌ ಹೂವರ್‌ಗೆ ಕೆಎಸ್‌ಸಿಎ ಮೇಲೆ ಯಾಕಿಷ್ಟುಅಸೂಯೆ ಎಂದು ತಿಳಿದಿಲ್ಲ. ಆರೋಪಗಳನ್ನು ಅವರು ಸಾಬೀತು ಪಡಿಸಲಿ. ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಆರೋಪಗಳೇನು?

* ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ 780 ರನ್‌ ಬಾರಿಸಿದ ಆಟಗಾರನಿಗೆ ಅಂಡರ್‌-14 ತಂಡದಲ್ಲಿ ಸ್ಥಾನ ನೀಡಿಲ್ಲ. ಬದಲಿಗೆ 9 ರನ್‌ ಗಳಿಸಿದವರಿಗೆ ಸ್ಥಾನ ಸಿಕ್ಕಿದೆ.

* ಈ ಋುತುವಿನಲ್ಲಿ ಒಂದೂ ಪಂದ್ಯವಾಡದಿದ್ದರೂ, ಕೆಎಸ್‌ಸಿಎ ಸಿಬ್ಬಂದಿ ಪುತ್ರ ಎನ್ನುವ ಕಾರಣಕ್ಕೆ ಸ್ಥಾನ ಸಿಕ್ಕಿದೆ.

* 5 ಪಂದ್ಯಗಳಲ್ಲಿ 18 ವಿಕೆಟ್‌ ಕಿತ್ತವನಿಗೆ ಸ್ಥಾನವಿಲ್ಲ, 7 ಪಂದ್ಯಗಳಲ್ಲಿ 4 ವಿಕೆಟ್‌ ಪಡೆದವನಿಗೆ ಸ್ಥಾನ ನೀಡಲಾಗಿದೆ.

* ಪೋಷಕರಿಂದ ಕೆಎಸ್‌ಸಿಎ .50 ಸಾವಿರದಿಂದ .3 ಲಕ್ಷದ ವರೆಗೂ ಬೇಡಿಕೆಯಿಡುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?