
ಮೆಲ್ಬರ್ನ್(ಡಿ.27): ಈಗಾಗಲೇ 3-0 ಅಂತರದಲ್ಲಿ ಆ್ಯಷಸ್ ಟ್ರೋಫಿ ಕೈಚೆಲ್ಲಿರುವ ಇಂಗ್ಲೆಂಡ್ ನಾಲ್ಕನೇ ಟೆಸ್ಟ್'ನಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.
ಅಲಿಸ್ಟೈರ್ ಕುಕ್(104*) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದೆ. ಮೊದಲ ದಿನದ್ಯಂತಕ್ಕೆ 3 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಎರಡನೇ ದಿನ 83 ರನ್ ಕೂಡಿ ಹಾಕುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಂಡಿತು. ಸ್ಟುವರ್ಟ್ ಬ್ರಾಡ್ ಮಾರಕ ದಾಳಿಗೆ ತತ್ತರಿಸಿದ ಆಸೀಸ್ ದಿಢೀರ್ ಕುಸಿತ ಕಂಡಿತು.
ಇನ್ನು ಆರಂಭಿಕ ಆಘಾತದ ಬಳಿಕ ಇಂಗ್ಲೆಂಡ್'ಗೆ ಕುಕ್ (104*) ಹಾಗೂ ನಾಯಕ ಜೋ ರೂಟ್ (49*) ಆಸರೆಯಾಗಿದ್ದಾರೆ. ಕಳಪೆಯಾಟದಿಂದ ಕಂಗೆಟ್ಟಿದ್ದ ಕುಕ್ ಕೊನೆಗೂ ಫಾರ್ಮ್'ಗೆ ಮರಳಲು ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಇನ್ನೂ 135 ರನ್'ಗಳ ಹಿನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 327/10 (ಡೇವಿಡ್ ವಾರ್ನರ್: 103 , ಬ್ರಾಡ್ 51/4)
ಇಂಗ್ಲೆಂಡ್ 192/2 (ಕುಕ್ 104*, ಲಯನ್ 44/1)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.