ದ್ರಾವಿಡ್, ತೆಂಡೂಲ್ಕರ್ ದಾಖಲೆ ಅಳಿಸಿಹಾಕಿದ ಕುಕ್

By Suvarna Web DeskFirst Published Dec 14, 2017, 10:59 PM IST
Highlights

ಇದರ ಜೊತೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 150 ಟೆಸ್ಟ್ ಪಂದ್ಯವನ್ನಾಡಿದ 8ನೇ ಕ್ರಿಕೆಟಿಗ ಎಂಬ ಗೌರವಕ್ಕೂ ಕುಕ್ ಪಾತ್ರವಾಗಿದ್ದಾರೆ.

ಪರ್ತ್(ಡಿ.14): ಆಸೀಸ್ ವಿರುದ್ಧದ ಮೂರನೇ ಆ್ಯಷಸ್ ಟೆಸ್ಟ್'ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಆಲಿಸ್ಟರ್ ಕುಕ್ ಟೀಂ ಇಂಡಿಯಾ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.

ಹೌದು, ಕುಕ್ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿ ಅತಿ ವೇಗವಾಗಿ 150 ಟೆಸ್ಟ್ ಪಂದ್ಯ ಆಡಿದ ಆಟಗಾರ ಎನ್ನುವ ಖ್ಯಾತಿಗೆ ಆಂಗ್ಲರ ಮಾಜಿ ನಾಯಕ ಪಾತ್ರರಾಗಿದ್ದಾರೆ. ಕುಕ್ ಕೇವಲ 11 ವರ್ಷ 288 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ರಾಹುಲ್ ದ್ರಾವಿಡ್ 14 ವರ್ಷ 200 ದಿನಗಳಲ್ಲಿ 150 ಟೆಸ್ಟ್ ಪಂದ್ಯವಾಡಿ ದಾಖಲೆ ನಿರ್ಮಿಸಿದ್ದರು.

ಇನ್ನು ಕುಕ್ 150 ಟೆಸ್ಟ್ ಪಂದ್ಯವನ್ನಾಡಿದ ಅತ್ಯಂತ ಕಿರಿಯ ಆಟಗಾರ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ. 32 ವರ್ಷ 154 ದಿನಗಳಲ್ಲಿ ಕುಕ್ 150 ಪಂದ್ಯವನ್ನಾಡಿದರು. 150 ಪಂದ್ಯವನ್ನಾಡುವಾಗ ಸಚಿನ್'ಗೆ 35 ವರ್ಷ 106 ದಿನಗಳಾಗಿದ್ದವು.

ಇದರ ಜೊತೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 150 ಟೆಸ್ಟ್ ಪಂದ್ಯವನ್ನಾಡಿದ 8ನೇ ಕ್ರಿಕೆಟಿಗ ಎಂಬ ಗೌರವಕ್ಕೂ ಕುಕ್ ಪಾತ್ರವಾಗಿದ್ದಾರೆ.

click me!