ಟೆಸ್ಟ್'ನಲ್ಲಿ ಹೊಸ ದಾಖಲೆ ಬರೆದ ಕುಕ್; ಸಚಿನ್ ಮತ್ತೊಂದು ದಾಖಲೆ ಉಡೀಸ್

Published : Jan 08, 2018, 08:56 AM ISTUpdated : Apr 11, 2018, 12:39 PM IST
ಟೆಸ್ಟ್'ನಲ್ಲಿ ಹೊಸ ದಾಖಲೆ ಬರೆದ ಕುಕ್; ಸಚಿನ್ ಮತ್ತೊಂದು ದಾಖಲೆ ಉಡೀಸ್

ಸಾರಾಂಶ

ಮೊದಲ ಇನ್ನಿಂಗ್ಸ್‌'ನಲ್ಲಿ 39 ರನ್ ಗಳಿಸಿದ್ದ ಕುಕ್‌'ಗೆ 12,000 ರನ್ ಮೈಲಿಗಲ್ಲು ತಲುಪಲು 5 ರನ್‌'ಗಳ ಅಗತ್ಯವಿತ್ತು. ಸ್ಟಾರ್ಕ್ ಬೌಲಿಂಗ್‌'ನಲ್ಲಿ ಒಂಟಿ ರನ್ ಪಡೆದ ಕುಕ್, ದಿಗ್ಗಜ ಬ್ಯಾಟ್ಸ್‌'ಮನ್‌'ಗಳ ಸಾಲಿಗೆ ಸೇರ್ಪಡೆಗೊಂಡರು.

ಸಿಡ್ನಿ(ಜ.08): ಇಂಗ್ಲೆಂಡ್ ತಂಡದ ರನ್ ಮಷಿನ್ ಅಲಿಸ್ಟರ್ ಕುಕ್, ಟೆಸ್ಟ್ ಕ್ರಿಕೆಟ್‌'ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ 5ನೇ ಟೆಸ್ಟ್‌'ನ 2ನೇ ಇನ್ನಿಂಗ್ಸ್‌'ನಲ್ಲಿ 10 ರನ್ ಗಳಿಸಿದ ಕುಕ್, ಟೆಸ್ಟ್‌'ನಲ್ಲಿ 12,000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 6ನೇ ಹಾಗೂ ಇಂಗ್ಲೆಂಡ್‌'ನ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಗೆ ಕುಕ್ ಪಾತ್ರರಾಗಿದ್ದಾರೆ.

ಮೊದಲ ಇನ್ನಿಂಗ್ಸ್‌'ನಲ್ಲಿ 39 ರನ್ ಗಳಿಸಿದ್ದ ಕುಕ್‌'ಗೆ 12,000 ರನ್ ಮೈಲಿಗಲ್ಲು ತಲುಪಲು 5 ರನ್‌'ಗಳ ಅಗತ್ಯವಿತ್ತು. ಸ್ಟಾರ್ಕ್ ಬೌಲಿಂಗ್‌'ನಲ್ಲಿ ಒಂಟಿ ರನ್ ಪಡೆದ ಕುಕ್, ದಿಗ್ಗಜ ಬ್ಯಾಟ್ಸ್‌'ಮನ್‌'ಗಳ ಸಾಲಿಗೆ ಸೇರ್ಪಡೆಗೊಂಡರು.

ಅತಿ ಕಿರಿಯ: 12 ಸಾವಿರ ರನ್ ಪೂರೈಸಿದ ಅತಿ ಕಿರಿಯ ಆಟಗಾರ ಎನ್ನುವ ದಾಖಲೆಯನ್ನು ಕುಕ್ (33 ವರ್ಷ, 12 ದಿನ) ಬರೆದಿದ್ದಾರೆ. ಈ ಮೊದಲು ಈ ದಾಖಲೆ ಸಚಿನ್ ತೆಂಡುಲ್ಕರ್ (35 ವರ್ಷ, 176 ದಿನ) ಹೆಸರಿನಲ್ಲಿತ್ತು. ಅಲ್ಲದೇ ಅತಿ ಕಡಿಮೆ ಸಮಯದಲ್ಲಿ ಈ ಸಾಧನೆ ಮಾಡಿದ ಕೀರ್ತಿಗೂ ಕುಕ್ ಪಾತ್ರರಾಗಿದ್ದಾರೆ. ಪದಾರ್ಪಣೆ ಮಾಡಿ 11 ವರ್ಷ, 312 ದಿನಗಳಲ್ಲಿ ಕುಕ್ 12 ಸಾವಿರ ರನ್ ತಲುಪಿದ್ದಾರೆ. ಈ ಮೊದಲು 14 ವರ್ಷ 167 ದಿನಗಳಲ್ಲಿ ಈ ಸಾಧನೆ ಮಾಡಿದ್ದ ಸಂಗಕ್ಕಾರ ಹೆಸರಿನಲ್ಲಿ ಅತಿ ವೇಗದ ದಾಖಲೆ ಇತ್ತು. ಆದರೆ ಕುಕ್, 275 ಇನ್ನಿಂಗ್ಸ್‌'ಗಳಲ್ಲಿ 12 ಸಾವಿರ ರನ್ ಗಳಿಸಿ 6 ಆಟಗಾರರ ಪೈಕಿ ಅತಿ ಹೆಚ್ಚು ಇನ್ನಿಂಗ್ಸ್‌'ಗಳನ್ನು ತೆಗೆದುಕೊಂಡ ಆಟಗಾರ ಎನಿಸಿಕೊಂಡಿದ್ದಾರೆ.

12,000+ ರನ್ ಕ್ಲಬ್:

ಆಟಗಾರ      ಟೆಸ್ಟ್           ರನ್

ಸಚಿನ್         200           15921

ಪಾಂಟಿಂಗ್    168            13378

ಕಾಲಿಸ್        166            13289

ದ್ರಾವಿಡ್       164            13288

ಸಂಗಕ್ಕಾರ    134            12400

ಕುಕ್           152            12005

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!