
ನವದೆಹಲಿ (ಆ. 26): ಜಸ್ಟ್ರೀತ್ ಬುಮ್ರಾ[7/5] ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 100 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಟೀಂ ಇಂಡಿಯಾ 318 ರನ್ ಗಳ ಬಾರೀ ಜಯ ದಾಖಲಿಸಿದೆ. ಜೊತೆಗೆ ವಿರಾಟ್ ಪಡೆ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಬುಮ್ರಾ ಏಷ್ಯಾ ಸಾಮ್ರಾಟ: ದಿಗ್ಗಜರು ಮಾಡಲಾಗದ ಸಾಧನೆ ಇದೀಗ ಬುಮ್ರಾ ತೆಕ್ಕೆಗೆ
185 ರನ್ ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತಾದರೂ ಆ ಬಳಿಕ ರಹಾನೆ-ವಿಹಾರಿ ಉತ್ತಮ ಜತೆಯಾಟ ನಿಭಾಯಿಸಿದರು. ಅಜಿಂಕ್ಯ ರಹಾನೆ ಭರ್ಜರಿ ಶತಕ ಹಾಗೂ ಹನುಮ ವಿಹಾರಿಯ 93 ರನ್ ಗಳ ಬ್ಯಾಟಿಂಗ್ ನೆರವಿನಿಂದ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಕಳೆದುಕೊಂಡು ಭಾರತ 343 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ವೆಸ್ಟ್ ಇಂಡಿಸ್ ಗೆ ಗೆಲ್ಲಲು 418 ರನ್ ಗಳ ಗುರಿ ನೀಡಿತ್ತು.
ವಿಂಡೀಸ್ ಟೆಸ್ಟ್: ರಹಾನೆ ಶತಕ, ಭಾರತದ ಬಿಗಿಹಿಡಿತದಲ್ಲಿ ಕೆರಬಿಯನ್ನರು
ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಆಘಾತ ನೀಡಿದರು. ಕೇವಲ 15 ರನ್ ಗಳಿಸುವಷ್ಟರಲ್ಲೇ ವೆಸ್ಟ್ ಇಂಡೀಸ್ 5 ಆಟಗಾರರು ಪೆವಿಲಿಯನ್ ಸೇರಿದ್ದರು. ಬುಮ್ರಾ 7 ರನ್ ನೀಡಿ 5 ವಿಕೆಟ್ ಪಡೆದರೆ ಶಮಿ 2 ಹಾಗೂ ಇಶಾಂತ್ ಶರ್ಮಾ 3 ವಿಕೆಟ್ ಪಡೆದರು. ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲೇ ಭಾರತ ಪರ ಶತಕ ಸಿಡಿಸಿದ ಅಜಿಂಕ್ಯ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.