
ಮಾಸ್ಕೋ: ಫುಟ್ಬಾಲ್ ಜಗತ್ತಿನಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಇಬ್ಬರಲ್ಲಿ ಯಾರು ಶ್ರೇಷ್ಠರು ಎನ್ನುವ ಚರ್ಚೆ ಹಲವು ವರ್ಷಗಳಿಂದ ಇದೆ. ಇಬ್ಬರು ದಿಗ್ಗಜ ಆಟಗಾರರ ಅಭಿಮಾನಿಗಳು ಆಗ್ಗಾಗೆ ಪರಸ್ಪರ ಕಿತ್ತಾಡಿಕೊಳ್ಳುವ ಪ್ರಸಂಗ ನಡೆಯುತ್ತಲೇ ಇರುತ್ತದೆ.
ಆದರೆ ಮೆಸ್ಸಿ-ರೊನಾಲ್ಡೋ ಹೆಸರಲ್ಲಿ ಕಿತ್ತಾಟವೊಂದು ವಿಚ್ಛೇದನದಲ್ಲಿ ಅಂತ್ಯಗೊಂಡ ಘಟನೆ ರಷ್ಯಾದಲ್ಲಿ ನಡೆದಿದೆ. ಮೆಸ್ಸಿ ಅಭಿಮಾನಿಯಾಗಿರುವ ಪತಿ, ತಮ್ಮ ನೆಚ್ಚಿನ ಆಟಗಾರನ ಬಗ್ಗೆ ಪತ್ನಿ ಟೀಕಿಸಿದ್ದನ್ನು ಸಹಿಸದೆ ಆಕೆಗೆ ವಿಚ್ಛೇದನ ನೀಡಿದ್ದಾನೆ.
ಪತ್ನಿ ರೊನಾಲ್ಡೋರ ಅಪ್ಪಟ ಅಭಿಮಾನಿ. ಐಸ್‌ಲ್ಯಾಂಡ್ ವಿರುದ್ಧ ಪಂದ್ಯದ ವೇಳೆ ಮೆಸ್ಸಿ ಪೆನಾಲ್ಟಿವ್ಯರ್ಥಗೊಳಿಸಿದ್ದನ್ನು ಮುಂದಿಟ್ಟುಕೊಂಡು ಪತ್ನಿ ಹೀಯಾಳಿಸಿದ್ದೇ ತಮ್ಮ ನಿರ್ಧಾರಕ್ಕೆ ಕಾರಣ ಎಂದು ಪತಿ ಹೇಳಿಕೊಂಡಿದ್ದಾನೆ.
ಈ ಇಬ್ಬರು 2002ರ ವಿಶ್ವಕಪ್ ವೇಳೆ ಪಬ್‌ವೊಂದಲ್ಲಿ ಭೇಟಿಯಾಗಿ, ಬಳಿಕ ವಿವಾಹವಾಗಿದ್ದರಂತೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.