2011ರ ವಿಶ್ವಕಪ್ ಫೈನಲ್ ಪಿಕ್ಸಿಂಗ್ ಎಂದು ಅರ್ಜುನ ರಣತುಂಗಾ ಆರೋಪಿಸಿದ್ದೇಕೆ? ಬಯಲಾಯ್ತು ರಹಸ್ಯ!

By Suvarna Web DeskFirst Published Jul 16, 2017, 1:37 PM IST
Highlights

ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗಾ ಎರಡು ದಿನಗಳ ಹಿಂದಷ್ಟೇ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದರು. ಆದರೆ ಈ ಪಂದ್ಯ ನಡೆದು ಬರೋಬ್ಬರಿ 6 ವರ್ಷಗಳಾದ ಬಳಿಕ ಅವರು ಇಂತಹುದ್ದೊಂದು ಆರೋಪ ಏಕೆ ಮಾಡಿದ್ದಾರೆ ಎಂಬುವುದೇ ಸದ್ಯಕ್ಕಿರುವ ಪ್ರಶ್ನೆ, ಒಂದು ವೇಳೆ ಈ ಪಂದ್ಯ ಪಿಕ್ಸಿಂಗ್ ಆಗಿತ್ತು ಎಂಬ ಅನುಮಾನ ಅವರಲ್ಲಿತ್ತಾದರೆ 6 ವರ್ಷಗಳ ಹಿಂದೆಯೇ ಈ ಕುರಿತಾಗಿ ತನಿಖೆ ನಡೆಸಬೇಕೆಂದು ಯಾಕೆ ಆಗ್ರಹಿಸಿಲ್ಲ? ಈ ಎಲ್ಲಾ ಪ್ರಶ್ನೆಗಳ ಹಿಂದಿನ ನಿಗೂಢ ಕಾರಣ ಇಲ್ಲಿದೆ.

ನವದೆಹಲಿ(ಜು.16): ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗಾ ಎರಡು ದಿನಗಳ ಹಿಂದಷ್ಟೇ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದರು. ಆದರೆ ಈ ಪಂದ್ಯ ನಡೆದು ಬರೋಬ್ಬರಿ 6 ವರ್ಷಗಳಾದ ಬಳಿಕ ಅವರು ಇಂತಹುದ್ದೊಂದು ಆರೋಪ ಏಕೆ ಮಾಡಿದ್ದಾರೆ ಎಂಬುವುದೇ ಸದ್ಯಕ್ಕಿರುವ ಪ್ರಶ್ನೆ, ಒಂದು ವೇಳೆ ಈ ಪಂದ್ಯ ಪಿಕ್ಸಿಂಗ್ ಆಗಿತ್ತು ಎಂಬ ಅನುಮಾನ ಅವರಲ್ಲಿತ್ತಾದರೆ 6 ವರ್ಷಗಳ ಹಿಂದೆಯೇ ಈ ಕುರಿತಾಗಿ ತನಿಖೆ ನಡೆಸಬೇಕೆಂದು ಯಾಕೆ ಆಗ್ರಹಿಸಿಲ್ಲ? ಈ ಎಲ್ಲಾ ಪ್ರಶ್ನೆಗಳ ಹಿಂದಿನ ನಿಗೂಢ ಕಾರಣ ಇಲ್ಲಿದೆ.

ಇಷ್ಟು ವರ್ಷಗಳ ಬಳಿಕ ರಣತುಂಗಾ ಇಂತಹುದ್ದೊಂದು ಆರೋಪ ಮಾಡಿರುವುದರ ಹಿಂದೆ ಇಬ್ಬರು ನಾಯಕರ ನಡುವಿನ ವೈಯುಕ್ತಿಕ ಜಗಳವೆಂದು ಈಗ ತಿಳಿದು ಬಂದಿದೆ.

ಸೋಲಿನಿಂದ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಬಿರುಗಾಳಿ

ವಾಸ್ತವವಾಗಿ ಶ್ರೀಲಂಕಾ ಜಿಂಬಾಬ್ವೆ ತಂಡದಿಂದ ಏಕದಿನ ಪಂದ್ಯಗಳ ಸೀರೀಸ್'ನಲ್ಲಿ ಸೋಲನುಭವಿಸಿತ್ತು. ಇದಾದ ಬಳಿಕ ದೇಶದಲ್ಲಿ ಆರೋಪ ಪ್ರತ್ಯಾರೋಪಗಳ ಮಾತುಗಳು ಕೇಳಿ ಬರುತ್ತಲೇ ಇವೆ. ರಣತುಂಗಾ ಮಾಡಿದ ಈ ಆರೋಪ 2009ರಲ್ಲಿ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ಪಾಕಿಸ್ತಾನ ಪ್ರವಾಸದಲ್ಲಿ ನೀಡಿದ ಹೇಳಿಕೆಯ ಬಳಿಕ ಕೇಳಿ ಬಂದಿದೆ. ಈ ಪ್ರವಾಸದಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ಈ ಕುರಿತಾಗಿ ಮಾತನಾಡಿದ್ದ ಸಂಗಕ್ಕರ 'ಈ ದಾಳಿ ಯಾರ ಮಾತಿನಿಂದಾಗಿತ್ತು ಎಂಬ ಕುರಿತಾಗಿ ತನಿಖೆ ನಡೆಯಬೇಕು' ಎಂದಿದ್ದರು.

ತನಿಖೆಯ ಮಾತೆತ್ತಿದ ಬಳಿಕ ಎದ್ದು ನಿಂತಿವೆ ಸವಾಲುಗಳು

2011ರ ವಿಶ್ವಕಪ್'ನಲ್ಲಿ ಶ್ರೀಲಂಕಾದ ನಾಯಕ ಕುಮಾರ ಸಂಗಕ್ಕರ ಆಗಿದ್ದರು. ಈ ವೇಳೆ ಅವರು 'ಪಾಕಿಸ್ತಾನದಲ್ಲಿ ಸುರಕ್ಷತೆ ಸರಿಯಾಗಿಲ್ಲವೆಂದಾದರೆ ಅಲ್ಲಿ ತಂಡವನ್ನು ಯಾಕೆ ಕಳುಹಿಸಿದ್ದರು?' ಎಂಬುವುದಾಗಿ ಪ್ರಶ್ನಿಸಿದ್ದರು. ಇದಾದ ಬಳಿಕ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದ ರಣತುಂಗಾ 'ಸಂಗಕ್ಕರ ಈ ದಾಳಿಯ ಕುರಿತಾಗಿ ತನಿಖೆ ನಡೆಸಬೇಕೆಂಬ ಇಚ್ಛೆ ಹೊಂದಿದ್ದಾರೆಂದಾದರೆ ತನಿಖೆ ನಡೆಯಲೇಬೇಕು. ಇದರೊಂದಿಗೆ 2011ರ ವಿಶ್ವಕಪ್'ನಲ್ಲಿ ಶ್ರೀಲಂಕಾಗೆ ಏನಾಗಿತ್ತೋ ಅದರ ಕುರಿತಾಗಿಯೂ ತನಿಖೆ ನಡೆಯಬೇಕು' ಎಂದಿದ್ದರು.

ಫಿಕ್ಸಿಂಗ್ ಕುರಿತಾದ ತನಿಖೆ ನಡೆಯಲೇಬೇಕು

ಈ ಕುರಿತಾಗಿ ಮಾತನಾಡಿರುವ ರಣತುಂಗಾ 'ನಾನು ಆ ಸಂದರ್ಭದಲ್ಲಿ ಭಾರತದಲ್ಲಿ ಕಮೆಂಟ್ರಿ ಮಾಡುತ್ತಿದ್ದೆ. ನಾವು ಸೋತಾಗ ನನಗೆ ಸುಃಖವಾಗಿತ್ತು, ಜೊತೆಗೆ ಅನುಮಾನವೂ ಹುಟ್ಟಿಕೊಂಡಿತ್ತು. ಹೀಗಾಗಿ 2011ರ ವಿಶ್ವಕಪ್'ನಲ್ಲಿ ಶ್ರೀಲಂಕಾ ತಂಡಕ್ಕೆ ಏನಾಗಿತ್ತು ಎಂಬ ತನಿಖೆ ನಡೆಯಲೇಬೇಕು. ನಾನು ಎಲ್ಲಾ ವಿಚಾರವನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಆದರೆ ಒಂದಿಲ್ಲೊಂದು ದಿನ ಇದನ್ನು ಬಹಿರಂಗಗೊಳಿಸುತ್ತೇವೆ. ಹೀಗಾಗಿ ತನಿಖೆ ನಡೆಯಲೇಬೇಕು ಎಂದಿದ್ದರು. ಅಲ್ಲದೇ ಇಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿದ್ದ ರಣತುಂಗಾ ಯಾವೊಬ್ಬ ಆಟಗಾರನ ಹೆಸರನ್ನೂ ಎತ್ತದೆ 'ಆಟಗಾರರು ಏನನ್ನೂ ಮುಚ್ಚಿಡಬಾರದು' ಎಂದಿದ್ದಾರೆ.

ಸ್ಥಳೀಯ ಮಾಧ್ಯಮಗಳಲ್ಲಿ ಈ ಮೊದಲೇ ಸದ್ದು ಮಾಡಿತ್ತು ಈ ಸುದ್ದಿ

ವಿಶ್ವಕಪ್'ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್'ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿತ್ತು. ಬಳಿಕ ಬೌಲಿಂಗ್ ಮಾಡಿದ ತಂಡ ಟೀಂ ಇಂಡಿಯಾದ ಆಟಗಾರರಾದ ಸೆಹ್ವಾಗ್ ಹಾಗೂ ಸಚಿನ್'ರನ್ನು ಬಹುಬೇಗನೆ ಪೆವಿಲಿಯನ್'ಗೆ ಕಳುಹಿಸಿ ಪಂದ್ಯದ ಮೇಲೆ ಹಿಡಿತವಿಟ್ಟಿದ್ದರು. ಆದರೆ ಕೆಲವೇ ಸಮಯದಲ್ಲಿ ಭಾರತ ಈ ಪಂದ್ಯದಲ್ಲಿ ತಮ್ಮ ಹಿಡಿತ ಸಾಧಿಸಿತ್ತು. ಇದಕ್ಕೆ ಶ್ರೀಲಂಕಾದ ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರಮುಖ ಕಾರಣವಾಗಿತ್ತು. ಗೌತಮ್ ಗಂಭೀರ್ ಹಾಗೂ ಮಹೇಂದ್ರ ಸಿಂಗ್ ಧೋನಿಯ ಅದ್ಭುತ ಇನ್ನಿಂಗ್ಸ್'ನಿಂದಾಗಿ ಟೀಂ ಇಂಡಿಯಾ ಜಯಶಾಲಿಯಾಗಿತ್ತು. ಆದರೆ ಈ ರೀತಿ ಶ್ರೀಲಂಕಾ ಹೀನಾಯ ಸೋಲನುಭವಿದ್ದರಿಂದ ಅಲ್ಲಿನ ಸ್ಥಳೀಯ ಮಾಧ್ಯಮಗಳು ತಂಡದ ಆಟಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದವು. ಆದರೆ ಈ ಕುರಿತಾಗಿ ತನಿಖೆ ನಡೆಸಲು ಆಗ್ರಹಿಸಿದವರಲ್ಲಿ ರಣತುಂಗಾ ಮೊದಲ ವ್ಯಕ್ತಿ.

click me!