ಕೊಟ್ಟಿದ್ದನ್ನ ಹಿಂದಿರಿಗಿಸೋ ಕಾಲ ಬಂದಿದೆ..!: ಮತ್ತೆ ಬಾಸ್ ಆಗಲಿದ್ದಾರೆ ಮಹೇಂದ್ರ ಸಿಂಗ್ ಧೋನಿ..!

Published : Jul 16, 2017, 12:08 PM ISTUpdated : Apr 11, 2018, 12:58 PM IST
ಕೊಟ್ಟಿದ್ದನ್ನ ಹಿಂದಿರಿಗಿಸೋ ಕಾಲ ಬಂದಿದೆ..!: ಮತ್ತೆ ಬಾಸ್ ಆಗಲಿದ್ದಾರೆ ಮಹೇಂದ್ರ ಸಿಂಗ್ ಧೋನಿ..!

ಸಾರಾಂಶ

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​​ ಧೋನಿ ನಾಯಕತ್ವಕ್ಕೆ ಗುಡ್​ ಬೈ ಹೇಳಿದ ಮೇಲೆ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅದರಲ್ಲೂ IPLನಲ್ಲಿ ಪುಣೆ ತಂಡ ಧೋನಿಯನ್ನು ನಡೆಸಿಕೊಂಡ ರೀತಿ ಅಂತೂ ನಿಜಕ್ಕೂ ಶೋಚನೀಯ. ಆದ್ರೆ ಅದಲ್ಲೆದ್ದಕ್ಕೂ ಉತ್ತರ ಕೊಡೋ ಕಾಲ ಬಂದಿದೆ. ತಮಗೆ ಅವಮಾನ ಮಾಡಿದವರಿಗೆಲ್ಲಾ ಬಡ್ಡಿ ಸಮೇತವಾಗಿ ವಾಪಸ್​​ ಕೊಡೋದಕ್ಕೆ ಧೋನಿ ರೆಡಿಯಾಗುತ್ತಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​​ ಧೋನಿ ನಾಯಕತ್ವಕ್ಕೆ ಗುಡ್​ ಬೈ ಹೇಳಿದ ಮೇಲೆ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅದರಲ್ಲೂ IPLನಲ್ಲಿ ಪುಣೆ ತಂಡ ಧೋನಿಯನ್ನು ನಡೆಸಿಕೊಂಡ ರೀತಿ ಅಂತೂ ನಿಜಕ್ಕೂ ಶೋಚನೀಯ. ಆದ್ರೆ ಅದಲ್ಲೆದ್ದಕ್ಕೂ ಉತ್ತರ ಕೊಡೋ ಕಾಲ ಬಂದಿದೆ. ತಮಗೆ ಅವಮಾನ ಮಾಡಿದವರಿಗೆಲ್ಲಾ ಬಡ್ಡಿ ಸಮೇತವಾಗಿ ವಾಪಸ್​​ ಕೊಡೋದಕ್ಕೆ ಧೋನಿ ರೆಡಿಯಾಗುತ್ತಿದ್ದಾರೆ.

ಮತ್ತೆ ಬಾಸ್​​​ ಆಗಲಿದ್ದಾರೆ ಮಹೇಂದ್ರ ಸಿಂಗ್​ ಧೋನಿ..!

ಮತ್ತೆ ಧೋನಿ ಯುಗ ಆರಂಭವಾಗುತ್ತಿದೆ. ಧೋನಿ ಮತ್ತೆ ನಾನೇ ಬಾಸ್​​​ ಎನ್ನುವ ಕಾಲ ಬಂದಿದೆ. ತಮ್ಮನ್ನು ನಿಷ್ಠುರವಾಗಿ ಕಂಡವರಿಗೆಲ್ಲಾ ತಕ್ಕ ಪಾಠ ಕಲಿಸುವ ಸಮಯ ಇಷ್ಟರಲ್ಲೇ ಬರಲಿದೆ. ಧೋನಿ ತಂಡದಲ್ಲಿರುವುದೇ ವೇಸ್ಟ್​​​ ಅಂದವರಿಗೆ ತಾನೇನು ಅನ್ನೋದನ್ನ ತೋರಿಸುವ ಅವಕಾಶ ಮತ್ತೆ ಬರುತ್ತಿದೆ. ತಮ್ಮ ವಿರುದ್ಧ ಕತ್ತಿ ಮಸೆಯುತ್ತಿದ್ದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಧೋನಿ ರೆಡಿಯಾಗುತ್ತಿದ್ದಾರೆ.

ಧೋನಿ ಬಾಳಲ್ಲಿ ಮೂಡಿದೆ ಆಶಾಕಿರಣ..!

ನಿಮಗೆ ನೆನಪಿರಬಹುದು 8 ವರ್ಷಗಳ ಕಾಲ ಚೆನ್ನೈ ಸೂಪರ್​​​ ಕಿಂಗ್ಸ್​​ನಲ್ಲಿ ದೊರೆಯಂತೆ ಮೆರದಿದ್ದ ಧೋನಿ ಚೆನ್ನೈ ಟೀಂ 2 ವರ್ಷ ನಿಷೇಧಕ್ಕೆ ಓಳಗಾದ ಮೇಲೆ ಪುಣೆ ಸೂಪರ್​​​ ಜೈಂಟ್​​ ತಂಡ ಸೇರಿಕೊಂಡ್ರು. ಬೇಕು ಬೇಕು ಅಂತ ಧೋನಿಯನ್ನ ತಮ್ಮ ತಂಡಕ್ಕೆ ಖರೀದಿಸಿದ ಪುಣೆ ಫ್ರಾಂಚೈಸಿ ಅವರನ್ನ ಕೀಳಾಗಿ ಕಂಡರು. ಮೊದಲಿಗೆ ನಾಯಕತ್ವವನ್ನ ಕಿತ್ತುಕೊಂಡರು. ನಂತರ ಅವರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಇದು ಧೋನಿ ಇಮೇಜ್'ನ್ನು ಹಾಳು ಮಾಡಿತು.

ಇಷ್ಟೆಲ್ಲಾ ತಮ್ಮ ವಿರುದ್ಧ ಬೆಳವಣಿಗೆಗಳು ನಡೆದರೂ ಧೋನಿ ತೆಪ್ಪಗಿದ್ದರು. ಯಾರ ವಿರುದ್ಧವೂ ತುಟಿ ಬಿಚ್ಚದೆ ತಮ್ಮ ಅವಕಾಶಕ್ಕಾಗಿ ಕಾದು ಕುಳಿತ್ರು. ನನಗೂ ಒಂದು ದಿನ ಬರುತ್ತೆ ಅಂತ ತಮ್ಮ ದಿನಕ್ಕಾಗಿ ಕಾಯುತ್ತಿದ್ದರು. ಆದರೆ ಕೊನೆಗೂ ಆ ದಿನ ಬಂದುಬಿಟ್ಟಿದೆ.

2 ವರ್ಷದ ವನವಾಸದಿಂದ ಹಿಂದಿರುಗಿದ ಚೆನ್ನೈ ಸೂಪರ್​​ ಕಿಂಗ್ಸ್​​

ಹೌದು 2014 ರಲ್ಲಿ 2 ವರ್ಷದ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್​​​ ಕಿಂಗ್ಸ್​​ ಮತ್ತು ರಾಜಸ್ಥಾನ್​ ರಾಯಲ್ಸ್​​​ ತಂಡಗಳು ತಮ್ಮ ನಿಷೇಧದ ಅವಧಿಯನ್ನ ಪೂರ್ಣಗೊಳಿಸಿ ಮತ್ತೆ IPLಗೆ ಕಮ್​ಬ್ಯಾಕ್​​ ಮಾಡಿವೆ. ಇದು ಎರಡೂ ತಂಡದ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಆದರೆ ಚೆನ್ನೈ ಸೂಪರ್​​ ಕಿಂಗ್ಸ್​​ ಅನ್ನು 8 ವರ್ಷಗಳ ಕಾಲ ಆಳಿದ್ದ ಧೋನಿಗೆ ಮಾತ್ರ ಫುಲ್​​ ಖುಷಿಯಾಗಿದೆ. ಈ ಖುಷಿಯಲ್ಲಿ ಧೋನಿ ತಮ್ಮ ತಂಡವನ್ನು ವಿಭಿನ್ನವಾಗಿ ವೆಲ್​​ಕಮ್​ ಮಾಡಿದ್ದಾರೆ.

ತಾವು 8 ವರ್ಷಗಳ ಕಾಲ ಮುನ್ನಡೆಸಿದ್ದ ತಂಡದ ವೆಲ್​ಕಮ್​ಗಾಗಿ ಧೋನಿ ಹಳದಿ ಬಣ್ಣದ ಜರ್ಸಿ ತೊಟ್ಟು, ಅದರ ಹಿಂದೆ ತಲಾ ಅಂತ ಬರೆದುಕೊಂಡಿದ್ದರೆ. ತಲಾ ಅಂದರೆ ಲೀಡರ್​​ ಎಂದರ್ಥ. ಇಂತಹ ಒಂದು ಜರ್ಸಿ ತೊಟ್ಟು ಫೋಸ್​​​ ಕೊಟ್ಟಿದ್ದ ಫೋಟೋವನ್ನು ಮಹಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಇನ್​ಡೈರೆಕ್ಟಾಗಿ ತಮ್ಮ ಶತ್ರುಗಳಿಗೆ ಮುಂದೈತೆ ಮಾರಿ ಹಬ್ಬ ಎನ್ನುವ ಸಂದೇಶ ರವಾನಿಸಿದ್ದಾರೆ.  

ಸದ್ಯ ಪುಣೆ ತಂಡದಲ್ಲಿರುವ ಧೋನಿ ಮುಂದಿನ ವರ್ಷದ IPLನಲ್ಲಿ ಚೆನ್ನೈ ತಂಡವನ್ನು ಸೇರಿಕೊಳ್ಳುವುದು ಬಹುತೇಕ ಖಚಿತ. ಹಾಗೇನಾದರೂ ಆದರೆ ಮತ್ತೆ ಧೋನಿ ಯುಗ ಶುರುವಾಗಲಿದೆ. ಅವರ ವಿರುದ್ಧ ಕತ್ತಿ ಮಸಿದವರಿಗೆಲ್ಲಾ ತಕ್ಕ ಪಾಠ ಕಲಿಸಲಿದ್ದಾರೆ. ಇವೆಲ್ಲದರ ಮಧ್ಯೆ ಮಹಿ ಅಭಿಮಾನಿಗಳಿಗೆ ಧೋನಿಯ ನಾಯಕತ್ವವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈನಲ್ಲಿ ಸಚಿನ್, ಛೆಟ್ರಿ ಭೇಟಿಯಾಗಲಿರುವ ಮೆಸ್ಸಿ; ಈ ಲಿಸ್ಟ್‌ನಲ್ಲಿದ್ದಾರೆ ಹಲವು ಸೆಲಿಬ್ರಿಟೀಸ್!
U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು