ತ್ರಿಕೋನ ಸರಣಿ: ಆಸೀಸ್ ಬದಲಿಗೆ ಆಫ್ಘನ್ ಎ ತಂಡಕ್ಕೆ ಅವಕಾಶ

By Suvarna Web DeskFirst Published Jul 17, 2017, 9:07 PM IST
Highlights

ತ್ರಿಕೋನ ಏಕದಿನ ಸರಣಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ(ಜು.26) ಭಾರತ 'ಎ' ಹಾಗೂ ಆಫ್ಘಾನಿಸ್ತಾನ ‘ಎ’ ತಂಡಗಳು ಮುಖಾಮುಖಿಯಾಗಲಿವೆ.

ಜೊಹಾನ್ಸ್‌ಬರ್ಗ್(ಜು.17): ಇದೇ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ಆಸ್ಟ್ರೇಲಿಯಾ ‘ಎ’ ತಂಡದ ಬದಲಿಗೆ, ಆಫ್ಘಾನಿಸ್ತಾನ ‘ಎ’ ತಂಡ ಪಾಲ್ಗೊಳ್ಳಲಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಆಟಗಾರರ ನಡುವಿನ ವೇತನ ಬಿಕ್ಕಟ್ಟು ಬಗೆಹರಿಯದ ಕಾರಣ ಆಸ್ಟ್ರೇಲಿಯಾ ‘ಎ’ ತಂಡದ ಆಟಗಾರರು ಸರಣಿಯನ್ನು ಬಹಿಷ್ಕರಿಸಿದ್ದರು. ಈ ಸಂದರ್ಭದಲ್ಲಿ ದ.ಆಫ್ರಿಕಾ ಕ್ರಿಕೆಟ್ ಸಂಸ್ಥೆ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಆಫ್ಘಾನಿಸ್ತಾನ ತಂಡಕ್ಕೆ ಆಹ್ವಾನ ನೀಡಿತ್ತು. ದ.ಆಫ್ರಿಕಾದ ಆಹ್ವಾನಕ್ಕೆ ಆಫ್ಘನ್ ಸಹಮತ ಸೂಚಿಸಿದ್ದು, ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ.

ಇತ್ತೀಚೆಗಷ್ಟೇ ಆಫ್ಘನ್ ತಂಡಕ್ಕೆ ಟೆಸ್ಟ್ ಮಾನ್ಯತೆ ಲಭಿಸಿತು. ತಮ್ಮ ಆಹ್ವಾನಕ್ಕೆ ಮನ್ನಣೆ ನೀಡಿ ಆಗಮಿಸುತ್ತಿರುವ ಆಫ್ಘಾನಿಸ್ತಾನ ತಂಡವನ್ನು ಬರ ಮಾಡಿಕೊಳ್ಳಲು ಹರ್ಷದಿಂದ ಕಾಯುತ್ತಿದ್ದೇವೆ ಎಂದು ಆಫ್ರಿಕಾ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಭಾರತ ‘ಎ’ ತಂಡ ಸರಣಿಯಲ್ಲಿರುವ ಮತ್ತೊಂದು ತಂಡವಾಗಿದೆ.

ತ್ರಿಕೋನ ಏಕದಿನ ಸರಣಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ(ಜು.26) ಭಾರತ 'ಎ' ಹಾಗೂ ಆಫ್ಘಾನಿಸ್ತಾನ ‘ಎ’ ತಂಡಗಳು ಮುಖಾಮುಖಿಯಾಗಲಿವೆ.

click me!