
ನವದೆಹಲಿ(ಡಿ.12): ಇದೇ ವರ್ಷ ಜೂನ್'ನಲ್ಲಿ ಟೆಸ್ಟ್ ಮಾನ್ಯತೆ ಪಡೆದ ಆಫ್ಘಾನಿಸ್ತಾನ ಕ್ರಿಕೆಟ್ ತಂಡ ತನ್ನ ಚೊಚ್ಚಲ ಪಂದ್ಯವನ್ನು ಭಾರತ ವಿರುದ್ಧ 2019-20ರ ಋತುವಿನಲ್ಲಿ ಭಾರತದಲ್ಲಿ ಆಡಲಿದೆ.
ಬಿಸಿಸಿಐ ತನ್ನ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ವಿಷಯ ತಿಳಿಸಿತು. ‘ಆಫ್ಘಾನಿಸ್ತಾನ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಆಡಬೇಕಿತ್ತು. ಆದರೆ ಭಾರತ-ಆಫ್ಘಾನಿಸ್ತಾನದ ನಡುವಿನ ಬಾಂಧವ್ಯದ ಸಂಕೇತವಾಗಿ ತಂಡಕ್ಕೆ ಮೊದಲು ಆತಿಥ್ಯ ನೀಡಲು ನಾವು ನಿರ್ಧರಿಸಿದೆವು’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದರು.
ಜೂನ್'ನಲ್ಲಿ ಐಸಿಸಿ ಸಭೆ ವೇಳೆ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು 11 ಹಾಗೂ 12ನೇ ಟೆಸ್ಟ್ ಆಡುವ ರಾಷ್ಟ್ರಗಳಾಗಿ ಮಾನ್ಯತೆ ಪಡೆದುಕೊಂಡಿದ್ದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.