
ಬೆಂಗಳೂರು(ಡಿ.12): 2017-18ರ ರಣಜಿ ಟ್ರೋಫಿಯಲ್ಲಿ ಪ್ರಚಂಡ ಲಯದಲ್ಲಿರುವ ಕರ್ನಾಟಕ, ಸೆಮಿಫೈನಲ್'ನಲ್ಲಿ ವಿದರ್ಭ ಸವಾಲನ್ನು ಸ್ವೀಕರಿಸಲಿದೆ. ಡಿ.17ರಿಂದ ಕೋಲ್ಕತಾದಲ್ಲಿ ಪಂದ್ಯ ನಡೆಯಲಿದೆ. ಕರ್ನಾಟಕ, ಭಾನುವಾರವೇ ಮುಂಬೈ ವಿರುದ್ಧದ ತನ್ನ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 20 ರನ್'ಗಳ ಗೆಲುವು ಸಾಧಿಸಿ, ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿತ್ತು. 8 ಬಾರಿ ಚಾಂಪಿಯನ್ ಕರ್ನಾಟಕ, ಈ ಋತುವಿನಲ್ಲಿ ಅದ್ಭುತ ಆಟ ಪ್ರದರ್ಶಿಸುತ್ತಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.
ವಿದರ್ಭ ವಿರುದ್ಧ ಉತ್ತಮ ದಾಖಲೆ: 2016-17ರ ಆವೃತ್ತಿಯಲ್ಲಿ ಕರ್ನಾಟಕ ಹಾಗೂ ವಿದರ್ಭ ತಂಡಗಳು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ಬರೋಡಾದಲ್ಲಿ ನಡೆದಿದ್ದ ಗುಂಪು ಹಂತದ ಪಂದ್ಯದಲ್ಲಿ ಕರ್ನಾಟಕ, 189 ರನ್'ಗಳ ಭರ್ಜರಿ ಗೆಲುವು ಸಾಧಿಸಿತ್ತು. ವಿದರ್ಭ ಕಳೆದ ಋತುವಿನಲ್ಲಿ ನಾಕೌಟ್ ಪ್ರವೇಶಿಸಲು ಸಹ ವಿಫಲವಾಗಿತ್ತು. ಇನ್ನು 2015-16ರ ಆವೃತ್ತಿಯಲ್ಲೂ ಉಭಯ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ಬೆಂಗಳೂರಲ್ಲಿ ನಡೆದಿದ್ದ ಗುಂಪು ಹಂತದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.
ಕ್ವಾರ್ಟರ್ ಫೈನಲ್ ಫಲಿತಾಂಶ
* ಮ.ಪ್ರದೇಶ ವಿರುದ್ಧ ದೆಹಲಿಗೆ 7 ವಿಕೆಟ್ ಜಯ
* ಕೇರಳ ವಿರುದ್ಧ ವಿದರ್ಭಕ್ಕೆ 412 ರನ್ ಜಯ
* ಗುಜರಾತ್-ಬಂಗಾಳ ಪಂದ್ಯ ಡ್ರಾ
(ಬಂಗಾಳಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.