
ಬೆಂಗಳೂರು(ಜೂ.16): ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡೋ ಮೂಲಕ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಇತಿಹಾಸ ರಚಿಸಿದೆ. ಅಫ್ಘಾನ್ ಕ್ರಿಕೆಟ್ ಬೆಳವಣಿಗೆಯಲ್ಲಿ ಭಾರತದ ಪಾತ್ರ ಪ್ರಮುಖವಾಗಿದೆ. ಅತ್ತ ಅಫ್ಘಾನ್ ಕ್ರಿಕೆಟಿಗರಿಗೂ ಭಾರತ ಅಂದ್ರೆ ಅಷ್ಟೇ ಪ್ರೀತಿ. ಅದರಲ್ಲೂ ಹೈದರಾಬಾದ್ ಬಿರಿಯಾನಿ ಅಂದರೆ ತುಂಬಾ ಇಷ್ಟ.
ಅಫ್ಘಾನಿಸ್ತಾನ ಹಿರಿಯ ಕ್ರಿಕೆಟಿಗ ಮೊಹಮ್ಮದ್ ನಬಿಗೆ ಹೈದರಾಬಾದ್ ಬಿರಿಯಾನಿ ತುಂಬಾ ಇಷ್ಟ. ಆದರೆ ಈ ಬಾರಿ ರಂಜಾನ್ ಉಪವಾಸದ ಕಾರಣ ಹೈದರಾಬಾದ್ ಬಿರಿಯಾನಿ ತಿನ್ನಲು ಸಾಧ್ಯವಾಗಿಲ್ಲ ಎಂದು ಮೊಹಮ್ಮದ್ ನಬಿ ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅಫ್ಘಾನ್ ತಂಡದ ಯುವ ಕ್ರಿಕೆಟಿಗ ಜಹೀರ್ ಖಾನ್‌ಗೆ ಭಾರತದಲ್ಲಿ ಸಿಗೋ ಚಿಕನ್ ಬಿರಿಯಾನಿ ಫೇವರಿಟ್. ಭಾರತದ ತಿನಿಸುಗಳನ್ನ ಇಷ್ಟಪಡೋ ಮೊಹಮ್ಮದ್ ಶೆಹಝಾದ್‌ಗೆ ಅಫ್ಘಾನಿಸ್ತಾನ್ ಪುಲಾವ್ ಇಷ್ಟದ ತಿನಿಸು ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.