ಫಿಫಾ ವಿಶ್ವಕಪ್ ಟೂರ್ನಿ ಗ್ರೂಪ್ ಸ್ಟೇಜ್ ಪಂದ್ಯಗಳೇ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸುತ್ತಿದೆ. ಅರ್ಜೆಂಟೀನಾ ಹಾಗೂ ಐಸ್‌ಲೆಂಡ್ ನಡುವಿನ ರೋಚಕ ಪಂದ್ಯದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಹೇಗಿತ್ತು ಈ ಪಂದ್ಯ? ಇಲ್ಲಿದೆ ವಿವರ
ರಷ್ಯಾ(ಜೂ.16): ಸ್ಟಾರ್ ಫುಟ್ಬಾಲ್ ಪಟು ಲಿಯೋನಲ್ ಮೆಸ್ಸಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ, ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಐಸ್‌ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 1-1 ಅಂತರದಲ್ಲಿ ಡ್ರಾ ಸಾಧಿಸಿದೆ.
ಪಂದ್ಯ ಆರಂಭಕ್ಕೂ ಅರ್ಜೆಂಟೀನಾ ಗೆಲ್ಲಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಐಸ್‌ಲೆಂಡ್ ಹೋರಾಟಕ್ಕೆ ಅರ್ಜೆಂಟೀನಾ ಸುಸ್ತಾಗಿದೆ. ಮೊದಲಾರ್ಧಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿದ್ರೆ, ದ್ವಿತಿಯಾರ್ಧದಲ್ಲಿ ಐಸ್‌ಲೆಂಡ್ ಪ್ರಾಬಲ್ಯ ಸಾಧಿಸಿತು.
undefined
ಫಸ್ಟ್ ಹಾಫ್‌ನ 19ನೇ ನಿಮಿಷದಲ್ಲಿ ಅರ್ಜೆಂಟೀನಾದ ಸರ್ಜಿಯೋ ಆಗೆರೋ ಗೋಲು ಬಾರಿಸೋ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿದ್ದ ಅರ್ಜೆಂಟೀನಾ ದ್ವಿತಿಯಾರ್ಧದಲ್ಲಿ ಅವಕಾಶಗಳನ್ನ ಕೈಚೆಲ್ಲಿತು. ಲಿಯೋನಲ್ ಮೆಸ್ಸಿ ಅನೇಕ ಪ್ರಯತ್ನ ಮಾಡಿದರೂ ಗೋಲು ದಾಖಲಾಗಲಿಲ್ಲ. 23ನೇ ನಿಮಿಷದಲ್ಲಿ ಐಸ್‌ಲೆಂಡ್ ತಂಡದ ಅಲ್ಫೆರೋ ಫಿನ್‌ಬೋಗಾಸನ್ ಗೋಲು ಬಾರಿಸಿ ಸಮಭಲ ಸಾಧಿಸಿತು.
ಗೆಲುವಿಗಾಗಿ ಅರ್ಜೆಂಟೀನಾ ಪ್ರಯತ್ನ ಮಾಡಿದರೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಡ್ರಾನಲ್ಲಿ ತೃಪ್ತಿಪಟ್ಟುಕೊಂಡಿತು. ಇತ್ತ ಐಸ್‌ಲೆಂಡ್ ಅತ್ಯುತ್ತಮ ಹೋರಾಟದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.