
ಬೆಂಗಳೂರು[ಆ.13]: ಲಾರ್ಡ್ಸ್ ಟೆಸ್ಟ್’ನಲ್ಲಿ ಇಂಗ್ಲೆಂಡ್’ನ ಸ್ಪಿನ್ನರ್ ಆದಿಲ್ ರಶೀದ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ಒಂದು ಎಸೆತವೂ ಹಾಕದೇ, ಬ್ಯಾಟಿಂಗ್ ಕೂಡಾ ಮಾಡದೇ, ಒಂದೇ ಒಂದು ಕ್ಯಾಚ್ ಕೂಡಾ ಹಿಡಿಯದೇ ಹಾಗೆಯೇ ರನೌಟ್ ಕೂಡಾ ಮಾಡದೇ ಟೆಸ್ಟ್ ಆಡಿದ ವಿಶ್ವದ 14ನೇ ಆಟಗಾರ ಎನ್ನುವ ಅಪಖ್ಯಾತಿಗೆ ರಶೀದ್ ಪಾತ್ರರಾಗಿದ್ದಾರೆ.
ಭಾರತ ವಿರುದ್ಧದ ಲಾರ್ಡ್ಸ್ ಟೆಸ್ಟ್’ನಲ್ಲಿ ಇಂಗ್ಲೆಂಡ್ ತಂಡವು ಇನ್ನಿಂಗ್ಸ್ 159 ರನ್’ಗಳ ಭರ್ಜರಿ ಜಯ ದಾಖಲಿಸಿತ್ತು. ಕ್ರಿಸ್ ವೋಕ್ಸ್, ಆ್ಯಂಡರ್’ಸನ್ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ತಂಡಕ್ಕೆ ಶೂನ್ಯ ಕೊಡುಗೆ ನೀಡಿದರೂ ರಶೀದ್ ಸುಮಾರು 11 ಲಕ್ಷ ರುಪಾಯಿಗಳನ್ನು ಜೇಬಿಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೊದಲು 2005ರಲ್ಲಿ ಇಂಗ್ಲೆಂಡ್’ನ ಸ್ಪಿನ್ನರ್ ಗ್ಯಾರೆತ್ ಬ್ಯಾಟಿ ಬಾಂಗ್ಲಾದೇಶ ವಿರುದ್ಧ ಇಂತಹದ್ದೇ ಅಪಖ್ಯಾತಿಗೆ ಪಾತ್ರರಾಗಿದ್ದರು.
ಇನ್ನು 141 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಈ ರೀತಿಯ ಅಪಖ್ಯಾತಿಗೆ ಗುರಿಯಾದ ಜಗತ್ತಿನ 14ನೇ ಕ್ರಿಕೆಟಿಗ ಎನ್ನುವ ದಾಖಲೆಗೆ ರಶೀದ್ ಪಾತ್ರರಾಗಿದ್ದಾರೆ.
ಯಾರೂ ಬಯಸದ ದಾಖಲೆಗೆ ಪಾತ್ರರಾಗಿರುವ ರಶೀದ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಜೋಕ್’ಗಳಿವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.