ಪದಕ ವಿಜೇತ ಸ್ವಪ್ನ ಬರ್ಮನ್‌ಗೆ 6 ಬೆರಳಿನ ಶೂ ನೀಡಲಿದೆ ಅಡಿಡಾಸ್!

Published : Sep 15, 2018, 06:13 PM ISTUpdated : Sep 19, 2018, 09:26 AM IST
ಪದಕ ವಿಜೇತ ಸ್ವಪ್ನ ಬರ್ಮನ್‌ಗೆ 6 ಬೆರಳಿನ ಶೂ ನೀಡಲಿದೆ ಅಡಿಡಾಸ್!

ಸಾರಾಂಶ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪಶ್ಚಿಮ ಬಂಗಾಳದ ಸ್ವಪ್ನ ಬರ್ಮನ್ ನೋವಿನಲ್ಲೂ ಸಾಧನೆ ಮಾಡಿದ ಸಾಧಕಿ. ಚಿನ್ನದ ಪದಕ ಗೆದ್ದ ಬೆನ್ನಲ್ಲೇ,  ತನ್ನ ಬಹುದೊಡ್ಡ ಸಮಸ್ಯೆಗೆ ಪರಿಹಾರ ಕೂಡ ಸಿಕ್ಕಿದೆ.

ನವದೆಹಲಿ(ಸೆ.15): 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹೆಪ್ಟಥ್ಲಾನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸ್ಪಪ್ನ ಬರ್ಮನ್ ಐತಿಹಾಸಿಕ ಸಾಧನೆ ಮಾಡಿದ್ದರು. ಗಾಯದ ಸಮಸ್ಯೆ, ಸರಿಯಾದ ಶೂ ಇಲ್ಲದೆ ಓಡಿದ ಸ್ವಪ್ನ ಬರ್ಮನ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಸ್ಪಪ್ನ ಬರ್ಮನ್ ಸಾಮಾನ್ಯ ಶೂ ಸರಿಹೊಂದುವುದಿಲ್ಲ. ಕಾರಣ ಸ್ಪಪ್ನ ಕಾಲಿನಲ್ಲಿ 6 ಬೆರಳುಗಳಿವೆ. ಹೀಗಾಗಿ ಸ್ಪಪ್ನ ಇಲ್ಲೀವರೆಗೂ ಸರಿಯಾದ ಶೂ ಇಲ್ಲದೆ ಓಡಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲೋ ಮೂಲಕ ಸ್ವಪ್ನ ಶೂ ಸಮಸ್ಯೆ ಬಹಿರಂಗವಾಗಿತ್ತು.

ಸಪ್ನ ಸಮಸ್ಯೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ) ಪರಿಹಾರ ಹುಡುಕಿದೆ. ಸ್ಪೋರ್ಟ್ಸ್ ಶೂ ತಯಾರಿಕಾ ಕಂಪೆನಿ ಅಡಿಡಾಸ್ ಜೊತೆ ಸಾಯಿ ಮಾತುಕತೆ ನಡೆಸಿದೆ. ಸ್ವಪ್ನ ಬರ್ಮನ್‌ಗೆ ವಿಶೇಷ ಶೂ ನೀಡುವುದಾಗಿ ಅಡಿಡಾಸ್ ಒಪ್ಪಿಕೊಂಡಿದೆ. 

ಪಶ್ಚಿಮ ಬಂಗಾಳದ ಈ  ಚಿನ್ನದ ಸಾಧಕಯ ಬಹುದೊಡ್ಡ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ. ಇಷ್ಟೇ ಅಲ್ಲ ಮುಂದಿನ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಂತಾಗಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Lionel Messi India visit: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ನೀಡಿದ ಮೆಸ್ಸಿ!
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?