
ಬೆಂಗಳೂರು(ಏ.22): ಆಧುನಿಕ ಕ್ರಿಕೆಟ್'ನ ಸೂಪರ್ ಹೀರೋ, ಆರ್'ಸಿಬಿ ಪಾಲಿನ ನಂಬಿಕಸ್ಥ ಬ್ಯಾಟ್ಸ್'ಮನ್ ಎಬಿ. ಡಿವಿಲಿಯರ್ಸ್ 10ನೇ ಆವೃತ್ತಿಯ ಐಪಿಎಲ್'ನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ಈಗ ಎಬಿ ಡಿವಿಲಿಯರ್ಸ್ ಮಗ ಅಬ್ರಹಾಂ ಕೂಡಾ ತಂದೆ ಹಾದಿಯನ್ನೇ ತುಳಿಯಲು ತೀರ್ಮಾನಿಸಿದಂತಿದೆ.
ಎಲ್ಲೆಲ್ಲೂ 'ಗೋ ಆರ್'ಸಿಬಿ' ಸ್ಲೋಗನ್ ಅನ್ನು ಅಬ್ರಾಹಂ ಮುದ್ದಾಗಿ ಹೇಳುವ ವಿಡಿಯೋವನ್ನು ಯೂಟ್ಯೂಬ್'ನಲ್ಲಿ ಈಗಾಗಲೇ ಒಂದು ಮಿಲಿಯನ್ ಜನ ವೀಕ್ಷಿಸಿದ್ದಾರೆ. ಪುಟ್ಟ ಕೈಯಲ್ಲಿ ಅಬ್ರಾಹಂ ಬ್ಯಾಟ್ ಬೀಸುವುದನ್ನು ನೋಡಿದರೆ, ಮುಂದೊಂದು ದಿನ ಅಬ್ರಾಹಂ ಕೂಡಾ ಮತ್ತೊಬ್ಬ ಸೂಪರ್ ಸ್ಟಾರ್ ಬ್ಯಾಟ್ಸ್'ಮನ್ ಆಗಲಿದ್ದಾನೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡುವಂತೆ ಮಾಡಿದ್ದಾನೆ.
ನೀವೂ ಒಮ್ಮೆ ನೋಡಿ ಎಂಜಾಯ್ ಮಾಡಿ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.