
ಬೆಂಗಳೂರು(ಮಾ. 31): ರಾಯಲ್ ಚಾಲೆಂಜರ್ಸ್ ತಂಡಕ್ಕೆ ಜೀರ್ಣಿಸಿಕೊಳ್ಳಲು ಕಷ್ಟಕರವಾದ ಸುದ್ದಿ ಇದು. ದೊಡ್ಡ ಬ್ಯಾಟಿಂಗ್ ಸ್ಟಾರ್'ಗಳಿಂದ ಕಂಗೊಳಿಸುತ್ತಿದ್ದ ಆರ್'ಸಿಬಿ ತನ್ನ ಶೈನಿಂಗ್ ಕಳೆದುಕೊಳ್ಳುತ್ತಿದೆ. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಬಳಿಕ ಆರ್'ಸಿಬಿಯ ಗಾಯಾಳುಗಳ ಪಟ್ಟಿಗೆ ಎಬಿ ಡೀವಿಲಿಯರ್ಸ್ ಕೂಡ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್'ಮ್ಯಾನ್ ಎಬಿಡಿ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದು, ಐಪಿಎಲ್'ನಲ್ಲಿ ಆಡೋದು ಅನುಮಾನ ಎಂಬಂತಹ ಸುದ್ದಿ ಕೇಳಿಬರುತ್ತಿದೆ. ಆದರೆ, ಇದು ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ.
ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇಬ್ಬರೂ ಗಾಯಗೊಂಡಿದ್ದರು. ಕೊಹ್ಲಿ ಕೊನೆಯ ಪಂದ್ಯದಲ್ಲಿ ಆಡಿರಲಿಲ್ಲ. ರಾಹುಲ್ ಗಾಯದ ನಡುವೆಯೂ ಎಲ್ಲಾ ಪಂದ್ಯಗಳಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. ಕೆಎಲ್ ರಾಹುಲ್ ಐಪಿಎಲ್'ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಇನ್ನು, ಕೊಹ್ಲಿ ಐಪಿಎಲ್'ನ ಆರಂಭದ ಕೆಲ ಪಂದ್ಯಗಳಲ್ಲಿ ಆಡುವುದು ಅನುಮಾನ. ಅವರ ಅನುಪ್ಥಿತಿಯಲ್ಲಿ ಎಬಿಡಿ ಅವರೇ ಆರ್'ಸಿಬಿಯ ನಾಯಕತ್ವ ವಹಿಸುವುದಿತ್ತು. ಈಗ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್'ಮ್ಯಾನ್ ಎಬಿಡಿಯೇ ಇಂಜುರಿಗೊಂಡಿರುವುದು ಆರ್'ಸಿಬಿ ತಂಡಕ್ಕೆ ದೊಡ್ಡ ಶಾಕ್ ಸಿಕ್ಕಂತಾಗಿದೆ.
ಕೊಹ್ಲಿ, ರಾಹುಲ್ ಮತ್ತು ಎಬಿಡಿ ಬಿಟ್ಟರೆ ಆರ್'ಸಿಬಿಯಲ್ಲಿ ಉಳಿದಿರುವ ಸ್ಟಾರ್'ಗಳೆಂದರೆ ಕ್ರಿಸ್ ಗೇಲ್ ಮತ್ತು ಶೇನ್ ವ್ಯಾಟ್ಸನ್ ಮಾತ್ರವೇ. ಹೀಗಾಗಿ, ಆರ್'ಸಿಬಿ ತನ್ನ ಸ್ಟಾರ್ ಶೈನಿಂಗ್'ನ್ನು ಬಹುತೇಕ ಕಳೆದುಕೊಳ್ಳುವಂತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.