ಚಿನ್ನಮ್ಮನ ವಿಷಯಕ್ಕೆ ಹೋಗಿ ಛೀಮಾರಿ ಹಾಕಿಸಿಕೊಂಡ ಅಶ್ವಿನ್: ಮಾಡಿದ ಆ ಎಡವಟ್ಟಾದರೂ ಏನು ಗೊತ್ತಾ.?

Published : Feb 07, 2017, 09:27 AM ISTUpdated : Apr 11, 2018, 01:11 PM IST
ಚಿನ್ನಮ್ಮನ ವಿಷಯಕ್ಕೆ ಹೋಗಿ ಛೀಮಾರಿ ಹಾಕಿಸಿಕೊಂಡ ಅಶ್ವಿನ್: ಮಾಡಿದ ಆ ಎಡವಟ್ಟಾದರೂ ಏನು ಗೊತ್ತಾ.?

ಸಾರಾಂಶ

ಸದ್ಯ ಭಾರತದಲ್ಲಿ ಹಾಟ್​​ ನ್ಯೂಸ್​​ ಅಂದರೆ ತಮಿಳುನಾಡಿನ ಚಿನ್ನಮ್ಮ. ಶಶಿಕಲಾ ನಟರಾಜನ್​​ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಿರುವುದು ಯಾರಿಗೆ ಇಷ್ಟ ಇದೆಯೋ ಇಲ್ಲವೋ. ಆದರೆ ಟೀಂ ಇಂಡಿಯಾದ ಸ್ಪಿನ್​​ ಮಾಂತ್ರಿಕಾ ಅಶ್ವಿನ್​​ ಮಾತ್ರ ಅವರ ಅನಿಸಿಕೆಯನ್ನು ತಿಳಿಸಲು ಹೋಗಿ ಇಂಗು ತಿಂದ ಮಂಗನಾಗಿಬಿಟ್ಟಿದ್ದಾರೆ. ಅಶ್ವಿನ್​​ ಮಾಡಿದ ಎಡವಟ್ಏನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಚೆನ್ನೈ(ಫೆ.07): ಸದ್ಯ ಭಾರತದಲ್ಲಿ ಹಾಟ್​​ ನ್ಯೂಸ್​​ ಅಂದರೆ ತಮಿಳುನಾಡಿನ ಚಿನ್ನಮ್ಮ. ಶಶಿಕಲಾ ನಟರಾಜನ್​​ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಿರುವುದು ಯಾರಿಗೆ ಇಷ್ಟ ಇದೆಯೋ ಇಲ್ಲವೋ. ಆದರೆ ಟೀಂ ಇಂಡಿಯಾದ ಸ್ಪಿನ್​​ ಮಾಂತ್ರಿಕಾ ಅಶ್ವಿನ್​​ ಮಾತ್ರ ಅವರ ಅನಿಸಿಕೆಯನ್ನು ತಿಳಿಸಲು ಹೋಗಿ ಇಂಗು ತಿಂದ ಮಂಗನಾಗಿಬಿಟ್ಟಿದ್ದಾರೆ. ಅಶ್ವಿನ್​​ ಮಾಡಿದ ಎಡವಟ್ಏನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ತಮಿಳು ನಾಡಿನ ಚಿನ್ನಮ್ಮ ಮುಂದಿನ ಸಿಎಂ​​..?

ತಮಿಳುನಾಡಿನ ಅಮ್ಮ ಜಯಲಲಿತಾ ನಿಧನರಾದ ಮೇಲೆ ತಮಿಳುನಾಡಿನ ರಾಜಕೀಯ ಅಲ್ಲೋಲ ಕಲ್ಲೋಲವಾಗಿಬಿಟ್ಟಿದೆ. ಯಾವಾಗ ಏನಾಗುತ್ತದೋ ಎಂಬ ಕುತೂಹಲ ತಮಿಳು ಮಕ್ಕಳನ್ನು ಕಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ಸದ್ಯ ತಮಿಳುನಾಡಿನ ಚಿನ್ನಮ್ಮ ಮುಖ್ಯಮಂತ್ರಿ ಗಾದಿಗೇರುತ್ತಿರುವುದು. ಆದರೆ ಇವರು ಮುಖ್ಯಮಂತ್ರಿಯಾಗುತ್ತಿರುವುದು ಕೆಲವರಿಗೆ ಇಷ್ಟವಾದರೆ ಕೆಲವರಿಗೆ ಇದು ಚಿನ್ನಮ್ಮನ ಷಡ್ಯಂತ್ರ ಎಂದೇ ಭಾವಿಸಿದ್ದಾರೆ.

ತಮಿಳ್​​ ಮಗನಿಗೆ ಚಿನ್ನಮ್ಮನ ಮಕ್ಕಳಿಂದ ಛೀಮಾರಿ..?

ತಮಿಳುನಾಡಲ್ಲಿ ಏನೇ ನಡೆದರೂ, ಅದರ ಬಗ್ಗೆ ತನ್ನದೇ ನಿಲುವು ನೀಡುತ್ತಿದ್ದಿದ್ದು ಟೀಂ ಇಂಡಿಯಾದ ಆಲ್​ರೌಂಡರ್​​​ ರವಿಚಂದ್ರನ್​ ಅಶ್ವಿನ್​​. ಕ್ರಿಕೆಟ್​​ ಆಡಲು ವಿಶ್ವದ ಯಾವುದೇ ಮೂಲೆಲಿದ್ರೂ ಅವರ ನಿಲುವನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಶ್ವಿನ್​​ ಹೊರಹಾಕುತ್ತಿದ್ದರು. ಆದರೆ ಚಿನ್ನಮ್ಮ ಮುಖ್ಯಮಂತ್ರಿಯಾಗುತ್ತಿರುವ ವಿಶ್ಯಕ್ಕೆ ತಲೆಹಾಕಿ ಅಶ್ವಿನ್​ ಮುಜುಗರಕ್ಕೊಳಗಾಗಿದ್ದಾರೆ.

ಅಷ್ಟಕ್ಕೂ ಅಶ್ವಿನ್​ ಮಾಡಿದ ಎಡವಟ್ಟಾದ್ರೂ ಏನ್​ ಗೊತ್ತಾ.? ನಿನ್ನೆ ಬೆಳಗ್ಗೆ ಟ್ವೀಟರ್'​​​​ನಲ್ಲಿ ಒಂದು ಪೋಸ್ಟ್​​ ಹಾಕಿದ್ದರು. ಅದು ‘ತಮಿಳುನಾಡಿನ ಎಲ್ಲ ಯುವಕ-ಯುವತಿಯರಿಗೆ 234 ಉದ್ಯೋಗ ಅವಕಾಶಗಳು ಶೀಘ್ರವೇ ತೆರೆದುಕೊಳ್ಳಲಿವೆ' ಎಂದು . ಆದರೆ ಇದೇ ಟ್ವೀಟ್‌ ಕೆಲವೇ ಕ್ಷಣಗಳಲ್ಲಿ ರಾಜಕೀಯಕ್ಕೆ ತಳುಕು ಹಾಕಲಾರಂಭಿಸಿತು. ಚಿನ್ನಮ್ಮನ ಮಕ್ಕಳು ಅಶ್ವಿನ್​ರನ್ನ ತರಾಟೆಗೆ ತಗೆದುಕೊಳ್ಳಲಾರಂಭಿಸಿದರು.

ತಮಿಳುನಾಡು ವಿಧಾಸಭೆಯ ಒಟ್ಟು ಸ್ಥಾನಗಳು 234. ಭಾನುವಾರ ಎಐಎಡಿಎಂಕೆ ಪಕ್ಷದ ಶಾಸಕರು ವಿ.ಕೆ. ಶಶಿಕಲಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು. ಇದಾದ ಬಳಿಕ ಅಶ್ವಿನ್‌ ಟ್ವೀಟ್‌ ಬಂದಿದ್ದರಿಂದ ಎಐಎಡಿಎಂಕೆ ಪಕ್ಷದಲ್ಲಿ ಭುಗಿಲೆದ್ದು ಶೀಘ್ರವೇ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬೆಲ್ಲಾ ಸುದ್ದಿಗಳು ಹರಿಡಿಕೊಂಡಿದ್ದವು. ಇದು ಅಶ್ವಿನ್​ರನ್ನ ಖೆಡ್ಡಕ್ಕೆ ತಳ್ಳಲು ಗುಂಡಿ ರೆಡಿ ಮಾಡಿದಂತಾಗಿತ್ತು.

ಇದಾದ ಕೆಲವೇ ನಿಮಿಷಗಳಲ್ಲಿ ಅಶ್ವಿನ್‌ ಮತ್ತೆ ಟ್ವಿಟರ್​​ನಲ್ಲಿ ಕಾಣಿಸಿಕೊಂಡ್ರು. ತಾವು ಮಾಡಿದ ಎಡವಟ್ಟನ್ನ ಸರಿಮಾಡಲು ಚಿಂತಿಸಿದ್ರು. ಕೊನೆಗೆ ಬೆಳಗ್ಗೆ ತಾವು ಮಾಡಿದ್ದ 'ಉದ್ಯೋಗ ಅವಕಾಶಗಳ' ಕುರಿತ ಟ್ವೀಟ್‌ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ತಾವು ಮಾಡಿದ ಟ್ವೀಟ್‌ಗೂ ತಮಿಳುನಾಡಿನ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಶ್ವಿನ್‌ ಪೋಸ್ಟ್​​ ಮಾಡಿದ್ರು.

ಒಟ್ಟಿನಲ್ಲಿ ಸದಾ ತಮಿಳುನಾಡಿನ ಹಾಟ್​​ ವಿಷ್ಯಗಳ ಬಗ್ಗೆ ತಮ್ಮದೇ ಅಭಿಪ್ರಾಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತಮಿಳು ಮಕ್ಕಳನ್ನ ರಂಜಿಸುತ್ತಿದ್ದ ಅಶ್ವಿನ್​​ ಸದ್ಯ ತಮ್ಮದೇ ಒಂದು ಟ್ವೀಟ್​​​ನಿಂದ ಈಗ ಪೇಚಿಗೆ ಸಿಲುಕುವಂತಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!