ವಿಶ್ವದ ಟಾಪ್ 5 ಶ್ರೀಮಂತ ಕ್ರಿಕೆಟಿಗರಲ್ಲಿ ಭಾರತೀಯರದ್ದೇ ಮೇಲುಗೈ

First Published Jun 25, 2018, 3:10 PM IST
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಟಾಪ್ 5 ಶ್ರೀಮಂತ ಕ್ರಿಕೆಟಿಗರ ಪೈಕಿ ಯಾವೆಲ್ಲಾ ಭಾರತೀಯ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಇಲ್ಲಿದೆ ವಿವರ. 
 

ಮುಂಬೈ(ಜೂ.25): ಕ್ರಿಕೆಟ್ ಭಾರತ ಜನಪ್ರೀಯ ಕ್ರೀಡೆ. ಇತರ ಕ್ರೀಡೆಗಳು ಇತ್ತೀಚೆಗೆ ಅಭಿವೃದ್ಧಿ ಕಾಣುತ್ತಿದೆ. ಆದರೆ ಕ್ರಿಕೆಟ್‌ನಲ್ಲಿ ಭಾರತ ಉತ್ತುಂಗದಲ್ಲಿದೆ. ಹೀಗಾಗಿಯೇ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ.  

ಟಾಪ್ 5 ಶ್ರೀಮಂತ ಕ್ರಿಕೆಟಿಗರ ಪೈಕಿ ಮೂವರು ಭಾರತೀಯರು ಅನ್ನೋದೇ ವಿಶೇಷ. ಎಂದಿನಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಮಂತ ಕ್ರಿಕೆಟಿಗರ ಪೈಕಿ ಮೊದಲ ಸ್ಥಾನದಲ್ಲಿದ್ದರೆ, ಎಮ್ ಎಸ್ ಧೋನಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ನಂ.1
ವಿರಾಟ್ ಕೊಹ್ಲಿ
ವಾರ್ಷಿಕ ಆದಾಯ: 162.87 ಕೋಟಿ

ಟೀಂ ಇಂಡಿಯಾ ನಾಯಕ, ಯೂತ್ ಐಕಾನ್ ವಿರಾಟ್ ಕೊಹ್ಲಿ ವಿಶ್ವದಲ್ಲೇ ಹೆಚ್ಚು ಜನಪ್ರೀಯ ಕ್ರೀಡಾಪಟು. ಟ್ವಿಟರ್‌ನಲ್ಲಿ 25 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ಕೊಹ್ಲಿ, ಇತ್ತೀಚೆಗೆ ಬಿಡುಗಡೆಯಾದ ಫೋರ್ಬ್ಸ್ ಪಟ್ಟಿಯಲ್ಲೂ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ. ಕೊಹ್ಲಿ ಒಟ್ಟು ವಾರ್ಷಿಕ ಆದಾಯ ಬರೋಬ್ಬರಿ 162.87ಕೋಟಿ ರೂಪಾಯಿ. 

ನಂ.2
ಎಂ ಎಸ್ ಧೋನಿ
ವಾರ್ಷಿಕ ಆದಾಯ: 147.26 ಕೋಟಿ

ಏಕದಿನ ಕ್ರಿಕೆಟ್ ನಾಯಕತ್ವಕ್ಕೆ ಗುಡ್ ಬೈ, ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಎಂ ಎಸ್ ಧೋನಿ ಜನಪ್ರೀಯತೆ ಕಡಿಮೆಯಾಗಿಲ್ಲ. ಭಾರತಕ್ಕೆ ವಿಶ್ವಕಪ್, ಟಿ-ಟ್ವೆಂಟಿ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಎಂ ಎಸ್ ಧೋನಿ ಒಟ್ಟು ವಾರ್ಷಿಕ ಆದಾಯ 147.26 ಕೋಟಿ ರೂಪಾಯಿ.

ನಂ.3
ಕ್ರಿಸ್ ಗೇಲ್
ವಾರ್ಷಿಕ ಆದಾಯ: 50.89 ಕೋಟಿ

ವೆಸ್ಟ್ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್, ಭಾರತೀಯರ ನೆಚ್ಚಿನ ಕ್ರಿಕೆಟಿಗ. ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆ ಬರೆದಿರುವ ಗೇಲ್, ಬಹುತೇಕ ಎಲ್ಲಾ ಲೀಗ್ ಟೂರ್ನಿಗಳಲ್ಲಿ ಸಕ್ರೀಯರಾಗಿದ್ದಾರೆ. ವೆಸ್ಟ್ಇಂಡೀಸ್ ಕ್ರಿಕೆಟ್ ಮಂಡಳಿ ನೀಡೋ ವೇತನಕ್ಕಿಂತ ಹೆಚ್ಚು ಐಪಿಎಲ್ ಹಾಗೂ ಇತರ ಲೀಗ್ ಟೂರ್ನಿಗಳಲ್ಲಿ ಗೇಲ್ ಸಂಪದಾಸುತ್ತಿದ್ದಾರೆ. ಗೇಲ್ ಒಟ್ಟು ವಾರ್ಷಿಕ ಆದಾಯ 50.89 ಕೋಟಿ ರೂಪಾಯಿ.

ನಂ.4
ಎಬಿ ಡಿವಿಲಿಯರ್ಸ್
ವಾರ್ಷಿಕ ಆದಾಯ: 43.43 ಕೋಟಿ

ಸೌತ್ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಎಬಿಡಿ ಆದಾಯ ಅಲ್ಪಮಟ್ಟಿಗೆ ಕುಸಿದಿದೆ. ಸೌತ್ಆಫ್ರಿಕಾ ಮಂಡಳಿ ವೇತನ, ಎಂಡೋರ್ಸ್‌ಮೆಂಟ್, ಜಾಹೀರಾತು, ಐಪಿಎಲ್ ಸೇರಿದಂತೆ ಇತರ ಮೂಲಗಳಿಂದ ಬರೋ ಒಟ್ಟು ಆದಾಯ 43.43 ಕೋಟಿ ರೂಪಾಯಿ.

ನಂ.5
ವಿರೇಂದ್ರ ಸೆಹ್ವಾಗ್ 
ವಾರ್ಷಿಕ ಆದಾಯ: 41.39 ಕೋಟಿ

ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್‌ನಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಅವರ ಒಪ್ಪಂದವನ್ನ ರದ್ದುಗೊಳಿಸಿದೆ. ಹೀಗಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ 5ನೇ ಸ್ಥಾನಕ್ಕೆ ಜಿಗಿದ್ದಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರೂ, ಸೆಹ್ವಾಗ್ ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬೌಂಡರಿ ಸಿಕ್ಸರ್ ಬಾರಿಸಿತ್ತಿರುವ ವೀರೂ ಭಾರತೀಯರ ನೆಚ್ಚಿನ ಕ್ರಿಕೆಟಿಗ. ಪಂಜಾಬ್ ತಂಡ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸೆಹ್ವಾಗ್ 1 ಕೋಟಿ ವಾರ್ಷಿಕ ಆದಾಯ ಗಳಿಸುತ್ತಿದ್ದಾರೆ. ತಮ್ಮ ಇಂಟರ್‌ನ್ಯಾಷನ್ ಸ್ಕೂಲ್, ಎಂಡೋರ್ಸ್‌ಮೆಂಟ್, ಜಾಹೀರಾತು ಹಾಗೂ ವೀಕ್ಷಕ ವಿವರಣೆಯಿಂದ ಸೆಹ್ವಾಗ್ ವಾರ್ಷಿಕವಾಗಿ 41.39 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.

click me!