10 ಸಾವಿರ ರನ್ ಸನಿಹದಲ್ಲಿ ಪಂಚ ಪಾಂಡವರು: ರೇಸ್'ನಲ್ಲಿ ಇಬ್ಬರು ಭಾರತೀಯರು!

Published : Oct 08, 2017, 02:03 PM ISTUpdated : Apr 11, 2018, 12:36 PM IST
10 ಸಾವಿರ ರನ್ ಸನಿಹದಲ್ಲಿ ಪಂಚ ಪಾಂಡವರು: ರೇಸ್'ನಲ್ಲಿ ಇಬ್ಬರು ಭಾರತೀಯರು!

ಸಾರಾಂಶ

ಏಕದಿನ ಕ್ರಿಕೆಟ್​'ನಲ್ಲಿ 10 ಸಾವಿರ ರನ್ ಹೊಡೆಯುವುದೆಂದ್ರೆ ಅದು ಸಾಧನೆಯೇ ಸರಿ. ಈ ಸಾಧನೆಯನ್ನ 11 ಆಟಗಾರರು ಮಾಡಿದ್ದಾರೆ. ಆದ್ರೆ ಇನ್ನೂ ಐವರು ಈ ರೇಸ್​​​​​'ನಲ್ಲಿದ್ದಾರೆ. ಇನ್ನೊಂದು ವರ್ಷದಲ್ಲಿ ಆ ಲಿಸ್ಟ್​​​​​​​​​​​​​​​​​​​​​​​​​​​​​​​​​​​​​ ಸೇರಿಕೊಳ್ಳಲಿದ್ದಾರೆ. ಅದರಲ್ಲಿ ಮೂವರು ಭಾರತೀಯರೂ ಇದ್ದಾರೆ.

ಏಕದಿನ ಕ್ರಿಕೆಟ್​'ನಲ್ಲಿ ಮೊದಲು 10 ಸಾವಿರ ರನ್ ಹೊಡೆದ ಬ್ಯಾಟ್ಸ್​'ಮನ್ ಯಾರು ಅಂದಕ್ಷಣ ಥಟ್​ ಅಂತ ಎಲ್ರೂ ಸಚಿನ್ ತೆಂಡೂಲ್ಕರ್ ಅಂತಾರೆ. ಕ್ರಿಕೆಟ್ ದೇವರು 10 ಸಹಸ್ರ ರನ್ ಹೊಡೆದ್ಮೇಲೆ ಆ ಲಿಸ್ಟ್​ಗೆ 10 ಮಂದಿ ಸೇರಿಕೊಂಡಿದ್ದಾರೆ. ಸದ್ಯಕ್ಕೆ 11 ಆಟಗಾರರ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಹೊಡೆದಿದ್ದಾರೆ. ಈಗ ಈ ಲಿಸ್ಟ್​ಗೆ ಇನ್ನೂ ಐವರು ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಆ ಪಂಚಪಾಂಡವರು ಟೆನ್​​ಡೂಲ್ಕರ್​ ಆಗಲು ಸಜ್ಜಾಗಿದ್ದಾರೆ.

10 ಸಾವಿರ - ಧೋನಿಗೆ ಬೇಕು 242 ರನ್

ಮಹೇಂದ್ರ ಸಿಂಗ್​ ಧೋನಿ ಸದ್ಯಕ್ಕೆ ಸಾಧಿಸಬೇಕಿರುವುದು ಏನು ಇಲ್ಲ. ಆಗ್ಲೇ ವಿಶ್ವ ಕ್ರಿಕೆಟ್​ನಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದ್ರೂ ಅವರು ಒಂಡೇ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಹೊಡೆದ್ರೆ ಅವರ ಹಿರಿಮೆ ಇನ್ನಷ್ಟು ಹೆಚ್ಚಲಿದೆ. ಅದಕ್ಕಾಗಿ ಅವರಿಗೆ ಬೇಕಿರುವುದು ಜಸ್ಟ್​ 242 ರನ್. ಧೋನಿ, ಇದೇ ವರ್ಷ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 10 ಸಾವಿರ ರನ್ ಹೊಡೆದ 12ನೇ ಆಟಗಾರ ಎನಿಸಿಕೊಳ್ಳೋದು ಕನ್ಫರ್ಮ್​.

10 ಸಾವಿರ - ಗೇಲ್​​ಗೆ ಬೇಕು 606 ರನ್

ವೆಸ್ಟ್ ಇಂಡೀಸ್​'ನ ದೈತ್ಯ ಬ್ಯಾಟ್ಸ್​ಮನ್ ಕ್ರಿಸ್​ ಗೇಲ್'​ಗೆ 10 ಸಾವಿರ ರನ್ ವಾಸನೆ ಬಡಿದಿದೆ. ಗೇಲ್ ಕಿರಿಕ್ ಪಾರ್ಟಿ ಆಗಿದ್ದರಿಂದ ಏಕದಿನ ತಂಡದಿಂದ ಕೈಬಿಡಲಾಗಿತ್ತು. ಕೇವಲ ಟಿ20ಗೆ ಸೀಮಿತವಾಗಿದ್ದ ಗೇಲ್'​ರನ್ನ ಇತ್ತೀಚೆಗೆ ಏಕದಿನ ತಂಡಕ್ಕೂ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ್ದಾರೆ. ಈಗ ಅವರು ಇನ್ನು 606 ರನ್ ಹೊಡೆದ್ರೆ 10 ಸಾವಿರ ರನ್ ಕ್ಲಬ್​'ಗೆ ಸೇರಿಕೊಳ್ಳಲಿದ್ದಾರೆ.

10 ಸಾವಿರ - ಎಬಿಡಿಗೆ ಬೇಕು 681 ರನ್

2019ರ ಒಂಡೇ ವರ್ಲ್ಡ್​​​'ಕಪ್ ಆಡ್ಬೇಕು. ಸೌತ್ ಆಫ್ರಿಕಾಗೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಡಬೇಕು. ಹರಿಣಗಳನ್ನ ಚೋಕರ್ಸ್ ಪಟ್ಟದಿಂದ ಕೆಳಗಿಳಿಸಬೇಕು ಅನ್ನೋ ಹಠಕ್ಕೆ ಬಿದ್ದಿರುವ ಎಬಿ ಡಿವಿಲಿಯರ್ಸ್​ ಫೋಕಸ್ ಈಗ ಏಕದಿನ ಕ್ರಿಕೆಟ್ ಮಾತ್ರ. ಟೆಸ್ಟ್ ಕ್ರಿಕೆಟ್​'ಗೆ ಗುಡ್ ಬೈ ಹೇಳಿ, ಹೆಚ್ಚಾಗಿ ಟಿ20 ಕ್ರಿಕೆಟೂ ಆಡದ ಎಬಿಡಿ, ಒಂಡೇ ಕ್ರಿಕೆಟ್​ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಅದ್ಭುತ ಫಾರ್ಮ್​ನಲ್ಲಿರುವ ಡಿವಿಲಿಯರ್ಸ್​ ಇನ್ನು 681 ರನ್ ಹೊಡೆದ್ರೆ 10 ಸಾವಿರ ರನ್ ಸಾಧನೆ ಮಾಡಲಿದ್ದಾರೆ. ಅವರ ಫಾರ್ಮ್​ ನೋಡಿದ್ರೆ ಕೆಲವೇ ದಿನಗಳಲ್ಲಿ ಈ ಮೈಲಿಗಲ್ಲು ಮುಟ್ಟಲಿದ್ದಾರೆ.

10 ಸಾವಿರ - ಕೊಹ್ಲಿಗೆ ಬೇಕು 1233 ರನ್

ಸದ್ಯ ಒಂಡೇ ಕ್ರಿಕೆಟ್​'ನಲ್ಲಿ ವರ್ಲ್ಡ್​​ ನಂಬರ್ ವನ್ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ. 10 ಸಾವಿರ ರನ್ ಬ್ರೇಕ್ ಮಾಡೋ ಲಿಸ್ಟ್​​ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಹೋಗುತ್ತಿರುವ ವೇಗ ನೋಡಿದ್ರೆ ಮುಂದಿನ ವರ್ಷ 10 ಸಹಸ್ರ ರನ್​ ಮುಟ್ಟಲಿದ್ದಾರೆ. ಅದಕ್ಕಾಗಿ ಅವರಿಗೆ ಬೇಕಿರೋದು 1233 ರನ್. 2019ರ ವಿಶ್ವಕಪ್​ ಒಳಗೆಯೇ ಅವರು ಈ ದಾಖಲೆ ಮಾಡಲಿದ್ದಾರೆ.

10 ಸಾವಿರ - ಆಮ್ಲಾಗೆ ಬೇಕು 2814 ರನ್

ಸೌತ್ ಆಫ್ರಿಕಾದ ಓಪನಿಂಗ್ ಬ್ಯಾಟ್ಸ್​ಮನ್​ ಹಶೀಮ್ ಆಮ್ಲಾ 10 ಸಾವಿರ ರನ್​​​​​​ ಕ್ಲಬ್ ಸೇರಲು ತುಂಬಾ ದೂರವೇ ಇದ್ದಾರೆ. ಆದ್ರೆ ಅವರು ಈ ಸಾಧನೆ ಮಾಡೇ ಮಾಡ್ತಾರೆ. ಯಾಕೆ ಗೊತ್ತಾ..? ಅವರ ಫಿಟ್ನೆಸ್ ಮತ್ತು ಫಾರ್ಮ್​ ಅದ್ಭುತವಾಗಿದೆ. ಅವರು ಸಹ 2019ರ ವಿಶ್ವಕಪ್​​ಗೆ ಆಫ್ರಿಕಾದ ಬ್ಯಾಟಿಂಗ್ ಟ್ರಂಪ್​ಕಾರ್ಡ್. ಅವರು ರನ್ ಗಳಿಸುತ್ತಿರುವ ವೇಗ ನೋಡಿದ್ರೆ ವರ್ಲ್ಡ್​​ಕಪ್​​​​​​​​​ನಲ್ಲೇ ಈ ಸಾಧನೆ ಮಾಡಿದ್ರು ಆಶ್ಚರ್ಯವಿಲ್ಲ.

ಈ ಲಿಸ್ಟ್​​'ನಲ್ಲಿ ಪಂಜಾಬ್ ಪುತ್ತರ್​ ಯುವರಾಜ್ ಸಿಂಗ್ ಸಹ ಇದ್ದಾರೆ. ಅವರಿಗೆ 1299 ರನ್ ಬೇಕು. ಆದ್ರೆ ಅವರ ಕೆರಿಯರ್ ಕವಲು ದಾರಿ ಹಿಡಿದಿರೋದ್ರಿಂದ ಅವರಿಂದ ಈ ದಾಖಲೆ ಅಸಾಧ್ಯವೇ ಸರಿ. ಒಟ್ನಲ್ಲಿ ಈ ಐವರು 10 ಸಾವಿರ ರನ್ ಕ್ಲಬ್ ಸೇರಿವುದನ್ನ ನೋಡಲು ವಿಶ್ವ ಕ್ರಿಕೆಟ್ ಜತನದಿಂದ ಕಾಯ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾದ ಟೀಂ ಇಂಡಿಯಾ!
ಕರ್ನಾಟಕದ ಅಭಿಮನ್ಯು ಮಿಥುನ್ ದಾಖಲೆ ಸರಿಗಟ್ಟಿದ ಬೌಲರ್‌, ಟಿ20ಯ ಒಂದೇ ಓವರ್‌ನಲ್ಲಿ ಐದು ವಿಕೆಟ್‌ ವಿಶ್ವದಾಖಲೆ!