ರಾಹುಲ್, ವಿಜಯ್ ಬದಲಿಗೆ ಈ ಮೂವರು ಆರಂಭಿಕರಾಗಬಹುದು..!

By Web DeskFirst Published Aug 16, 2018, 5:43 PM IST
Highlights

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸತತ ಎರಡು ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ವಿಶ್ವದ ನಂಬರ್ ಒನ್ ಟೆಸ್ಟ್ ತಂಡವಾಗಿರುವ ಟೀಂ ಇಂಡಿಯಾ ಜಯದ ಕನವರಿಕೆಯಲ್ಲಿದೆ. ಆದರೆ ಟೀಂ ಬ್ಯಾಟಿಂಗ್’ನಲ್ಲಿ ಪದೇ ಪದೇ ಎಡವುತ್ತಿದೆ. ಅದರಲ್ಲೂ ಆರಂಭಿಕ ಬ್ಯಾಟ್ಸ್’ಮನ್’ಗಳು ಉತ್ತಮ ಜತೆಯಾಟವಾಡಲು ವಿಫಲವಾಗುತ್ತಿರುವುದು ಭಾರತದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿದೆ.

ಬೆಂಗಳೂರು[ಆ.16]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸತತ ಎರಡು ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ವಿಶ್ವದ ನಂಬರ್ ಒನ್ ಟೆಸ್ಟ್ ತಂಡವಾಗಿರುವ ಟೀಂ ಇಂಡಿಯಾ ಜಯದ ಕನವರಿಕೆಯಲ್ಲಿದೆ. ಆದರೆ ಟೀಂ ಬ್ಯಾಟಿಂಗ್’ನಲ್ಲಿ ಪದೇ ಪದೇ ಎಡವುತ್ತಿದೆ. ಅದರಲ್ಲೂ ಆರಂಭಿಕ ಬ್ಯಾಟ್ಸ್’ಮನ್’ಗಳು ಉತ್ತಮ ಜತೆಯಾಟವಾಡಲು ವಿಫಲವಾಗುತ್ತಿರುವುದು ಭಾರತದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿದೆ. ಶಿಖರ್ ಧವನ್, ಮುರಳಿ ವಿಜಯ್ ಹಾಗೂ ಕೆ.ಎಲ್ ರಾಹುಲ್ ಸೇರಿದಂತೆ ಎಲ್ಲರೂ ವಿಫಲರಾಗುತ್ತಿದ್ದಾರೆ. ಹೀಗಾಗಿ ಈ ಕೆಳಗಿನ ಮೂವರು ಕ್ರಿಕೆಟಿಗರು ಮೂರನೇ ಟೆಸ್ಟ್’ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಬಹುದು...

#3. ರವಿಚಂದ್ರನ್ ಅಶ್ವಿನ್

ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಆರಂಭಿಕ ಆಟಗಾರನೇ ಎಂಬ ಆಯ್ಕೆ ನಿಮಗೆ ಅಚ್ಚರಿ ಮೂಡಿಸಬಹುದು. ಆದರೆ ವಿರಾಟ್ ಕೊಹ್ಲಿ ಬಳಿಕ ಲಾರ್ಡ್ಸ್ ಟೆಸ್ಟ್’ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ್ದು ಅಶ್ವಿನ್ ಮಾತ್ರ. 
ಇದುವರೆಗೆ 60 ಟೆಸ್ಟ್ ಪಂದ್ಯಗಳಲ್ಲಿ 30ರ ಸರಾಸರಿಯಲ್ಲಿ 2248 ರನ್ ಕಲೆಹಾಕಿದ್ದಾರೆ. ಐಪಿಎಲ್’ನಲ್ಲೂ ಕೆಲವೊಂದು ಉತ್ತಮ ಇನ್ನಿಂಗ್ಸ್ ಕಟ್ಟಿರುವ ಅಶ್ವಿನ್ ಆರಂಭಿಕನಾಗಿ ಕಣಕ್ಕಿಳಿದು ತಂಡಕ್ಕೆ ಬ್ಯಾಟಿಂಗ್’ನಲ್ಲಿ ಕಾಣಿಕೆ ನೀಡಿದರೆ, ನಂತರ ಬರುವ ಬ್ಯಾಟ್ಸ್’ಮನ್’ಗಳಿಗೆ ಹೆಚ್ಚು ಅನುಕೂಲವಾಗಲಿದೆ.

#2. ಚೇತೇಶ್ವರ್ ಪೂಜಾರ
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ನಾಟಿಂಗ್’ಹ್ಯಾಮ್ ಟೆಸ್ಟ್’ನಲ್ಲಿ ಆರಂಭಿಕನಾಗಿ ಕಣಕ್ಕಿಳಿಸುವುದು ಉತ್ತಮ ಆಯ್ಕೆಯಾಗಬಹುದು. ಕೌಂಟಿ ಕ್ರಿಕೆಟ್’ನಲ್ಲಿ ನಾಟಿಂಗ್’ಹ್ಯಾಮ್’ಶೈರ್ ಪರ ಆಡಿದ ಅನುಭವವಿರುವ ಪೂಜಾರ ಅವರಿಗೆ ಈ ಪಿಚ್ ಹೊಸತೇನಲ್ಲ. ತಾಂತ್ರಿಕವಾಗಿ ಬಲಿಷ್ಠರಾಗಿರುವ ಪೂಜಾರ ಇಂಗ್ಲೆಂಡ್ ವೇಗಿಗಳಾದ ಬ್ರಾಡ್ ಹಾಗೂ ಆ್ಯಂಡರ್’ಸನ್ ಅವರನ್ನು ಸಮರ್ಥವಾಗಿ ಎದುರಿಸಬಲ್ಲರು. ಅಲ್ಲದೇ ಹಲವಾರು ಬಾರಿ ಆರಂಭಿಕ ಬ್ಯಾಟ್ಸ್’ಮನ್’ಗಳು ಶೀಘ್ರವಾಗಿ ವಿಕೆಟ್ ಒಪ್ಪಿಸಿದಾಗ ತಂಡಕ್ಕೆ ಚೇತರಿಕೆ ನೀಡುವಲ್ಲೂ ಯಶಸ್ವಿಯಾಗಿದ್ದಾರೆ.

#1. ವಿರಾಟ್ ಕೊಹ್ಲಿ
ಕಳೆದೆರಡು ಟೆಸ್ಟ್’ಗಳಲ್ಲಿ ಭಾರತ ಪರ ಗರಿಷ್ಠ ರನ್ ಕಲೆಹಾಕಿದ ಬ್ಯಾಟ್ಸ್’ಮನ್ ಎಂದರೆ ಅದು ವಿರಾಟ್ ಕೊಹ್ಲಿ. ಚುಟುಕು ಕ್ರಿಕೆಟ್’ನಲ್ಲಿ ಹಲವಾರು ಬಾರಿ ಆರಂಭಿಕನಾಗಿ ಕಣಕ್ಕಿಳಿದು ಯಶಸ್ಸು ಕಂಡಿರುವ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರೆ ಉಳಿದ ಆಟಗಾರರು ನಿರ್ಭೀತಿಯಿಂದ ಬ್ಯಾಟ್ ಬೀಸಬಹುದು. ಆದರೆ ವಿರಾಟ್ ಆರಂಭದಲ್ಲೇ ವಿಫಲವಾದರೆ ತಂಡದ ಜಂಘಾಬಲವೇ ಉಡುಗಿ ಹೋಗುವುದರಲ್ಲಿ ಎರಡು ಮಾತಿಲ್ಲ.

click me!