2018ರ IPL ಡೇಟ್ ಫಿಕ್ಸ್: ಆರಂಭದಲ್ಲೇ IPLಗೆ ಎದುರಾಯ್ತು ವಿಘ್ನ

Published : Oct 28, 2017, 03:27 PM ISTUpdated : Apr 11, 2018, 12:57 PM IST
2018ರ IPL ಡೇಟ್ ಫಿಕ್ಸ್: ಆರಂಭದಲ್ಲೇ IPLಗೆ ಎದುರಾಯ್ತು ವಿಘ್ನ

ಸಾರಾಂಶ

ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಲು ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿ ಸಜ್ಜಾಗುತ್ತಿದೆ. ಆದ್ರೆ ಪ್ರತಿ ಟೂರ್ನಿಯಂತೆ 2018ರ ಟೂರ್ನಿ ಆರಂಭಕ್ಕೂ ಮುನ್ನವೇ ವಿಘ್ನ ಎದುರಾಗಿದೆ. ಹಾಗಾದ್ರೆ ಐಪಿಎಲ್ ಎದುರಾಗಿರೋ ವಿಘ್ನ ಏನು? ಇಲ್ಲಿದೆ ವಿವರ  

ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿಗೆ ತಯಾರಿಗಳು ಈಗಾಗಲೇ ಆರಂಭಗೊಂಡಿದೆ. ಐಪಿಎಲ್ ಟೈಟಲ್ ಹರಾಜು, ಪ್ರಸಾರದ ಹಕ್ಕು. ಹೀಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ, ಇದೀಗ 2018ರ ಐಪಿಎಲ್ ಟೂರ್ನಿಗೆ ವಿಘ್ನ ಎದುರಾಗಿದೆ.

ಹತ್ತು ಆವೃತ್ತಿಗಳಲ್ಲಿ ಫ್ರಾಂಚೈಸಿಗಳು ಆಟಗಾರರನ್ನ ಉಳಿಸಿಕೊಳ್ಳೋ ಅವಕಾಶವಿತ್ತು. ಇದೀಗ ನಿಮಯದ ಪ್ರಕಾರ, ಎಲ್ಲಾ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. ಆದ್ರೆ ಐಪಿಎಲ್ ಗರ್ವನಿಂಗ್ ಕೌನ್ಸಿಲ್, ಹನ್ನೊಂದನೇ ಆವೃತ್ತಿಗೂ ಮೂವರು ಆಟಗಾರರನ್ನ ಉಳಿಸಿಕೊಳ್ಳೋ ಯೋಜನೆಯನ್ನ ಫ್ರಾಂಚೈಸಿ ಮಾಲೀಕರ ಮುಂದಿಟ್ಟಿದೆ.

ಮೂವರನ್ನ ರಿಟೈನ್ ಮಾಡಿಕೊಳ್ಳೋ ಚಿಂತನೆಗೆ ಒಂದೆಡೆ ಭಾರಿ ವಿರೋಧ ವ್ಯಕ್ತವಾಗಿದೆ. ಐಪಿಎಲ್ ಫ್ರಾಂಚೈಸಿಯೊಂದು ರಿಟೈನ್ ನಿಯಮವನ್ನ ಸಾರಸಗಟಾಗಿ ತಿರಸ್ಕರಿಸಿದೆ. ಹಲವು ಫ್ರಾಂಚೈಸಿಗಳು ರಿಟೈನ್ ನಿಯಮಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇದೀಗ ಪರ ವಿರೋಧದಿಂದಾಗಿ ಬಿಸಿಸಿಐ ರಿಟೈನ್ ಪ್ಲಾನ್ ಯಶಸ್ವಿಯಾಗಿ ಜಾರಿಯಾಗೋದು ಅನುಮಾವಾಗಿದೆ.

ಏಪ್ರಿಲ್​ 4ರಿಂದ ಐಪಿಎಲ್ ಆರಂಭ

ಪರ ವಿರೋಧದ ನಡುವೆಯೂ ಬಿಸಿಸಿಐ, ಐಪಿಎಲ್​'ಗೆ ಮೂಹೂರ್ತ ಫಿಕ್ಸ್ ಮಾಡಿದೆ. 2018ರ ಎಪ್ರಿಲ್ 4ರಿಂದ ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಏಪ್ರಿಲ್ 4ರಂದು ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಒಟ್ಟು 57 ದಿನಗಳ ಕಾಲ ನಡೆಯಲಿರುವ ಐಪಿಎಲ್ ಟೂರ್ನಿ ಮೇ 31 ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ.

ಸಿಎಸ್​ಕೆ-ರಾಜಸ್ಥಾನ ಕಮ್​'ಬ್ಯಾಕ್​

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್​​ನಿಂದ ಕಳೆದೆರಡು ವರ್ಷ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 2018ರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ರಾಜಸ್ಥಾನ ರಾಯಲ್ಸ್ ತಂಡ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಎಮ್ ಎಸ್ ಧೋನಿಗೆ ನಾಯಕ ಪಟ್ಟ ನೀಡಲು ಸಜ್ಜಾಗಿದೆ.

ಬಿಸಿಸಿಐ ನೂತನ ರಿಟೈನ್ ನಿಯಮಕ್ಕೆ ಸಿಎಸ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈ ಮೂಲಕ ಎಮ್ಎಸ್ ಧೋನಿ ಹಾಗು ಪ್ರಮುಖ ಸಿಎಸ್ಕೆ ಆಟಗಾರರನ್ನ ಗುಜರಾತ್ ಹಾಗು ಪುಣೆ ತಂಡದಿಂದ ರಿಟೈನ್ ಮಾಡಿಕೊಳ್ಳಲು ಸಿಎಸ್ಕೆ ಪ್ಲಾನ್ ಮಾಡಿದೆ.

ಗುಜರಾತ್​-ಪುಣೆ 2 ವರ್ಷ ಒಪ್ಪಂದ ಅಂತ್ಯ

ಸಿಎಸ್ಕೆ ಹಾಗು ರಾಜಸ್ಥಾನ ತಂಡದ ನಿಷೇಧದಿಂದ ಕಳೆದೆರಡು ವರ್ಷ ಐಪಿಎಲ್ ಟೂರ್ನಿ ಆಡಿದ್ದ  ಗುಜರಾತ್ ಲಯನ್ಸ್ ಹಾಗು ಪುಣೆ ಸೂಪರ್ ಜೈಂಟ್ಸ್ ತಂಡದ ಒಪ್ಪಂದ ಅಂತ್ಯಗೊಂಡಿದೆ. ಹೀಗಾಗಿ ಮುಂದಿನ ಆವೃತ್ತಿಗಳಲ್ಲಿ ಈ ತಂಡ ಕಣಕ್ಕಿಳಿಯುವಂತಿಲ್ಲ.

ಸಾಲು ಸಾಲು ಸರಣಿ ನಡುವೆ ಇದೀಗ ಐಪಿಎಲ್ ವೇಳಾ ಪಟ್ಟಿ ನಿಗಧಿಯಾಗಿದೆ. ಚುಟುಕು ಮನೊರಂಜನೆಗಾಗಿ ಕಾಯುತ್ತಿದ್ದ ಅಭಿಮಾನಿಗಳ ಸಂತಸ ಇಮ್ಮಡಿಗೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್‌-19 ಏಷ್ಯಾಕಪ್‌: ಪಾಕ್‌ನ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ತಂಡ!
'ಕುಸಿದು ಹೋಗಿದ್ದೆ, ನಾನ್ಯಾವತ್ತೂ ಕ್ರಿಕೆಟ್ ಆಡಬಾರದು ಅಂದುಕೊಂಡಿದ್ದೆ: ಆ ನೋವು ಇನ್ನೂ ಮರೆತಿಲ್ಲ ಎಂದ ರೋಹಿತ್ ಶರ್ಮಾ!