ಫಿಫಾ ವಿಶ್ವಕಪ್ ಕಣದಲ್ಲಿರುವ ಅತ್ಯಂತ ಹಿರಿಯ-ಕಿರಿಯ ಆಟಗಾರರ ವಯಸ್ಸೆಷ್ಟು?

First Published Jun 1, 2018, 3:37 PM IST
Highlights

ಫಿಫಾ ವಿಶ್ವಕಪ್ ಫುಟ್ಬಾಲ್ 2018 ಹಲವು ವಿಶೇಷತೆಗಳಿಂದ ಕೂಡಿದೆ. ಈ ಬಾರಿ ವಿಶ್ವಕಪ್ ಕಣದಲ್ಲಿರುವ ಅತ್ಯಂತ ಹಿರಿಯ ಆಟಗಾರನ ವಯಸ್ಸು 45. ಇನ್ನು ಕಿರಿಯ ಆಟಗಾರನ ವಯಸ್ಸು ಕೇವಲ 19. 

ಬೆಂಗಳೂರು(ಜೂನ್.1): ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ವಿಶ್ವವೇ ಕಾತರದಿಂದ ಕಾಯುತ್ತಿದೆ. ಜೂನ್ 14 ರಿಂದ ಆರಂಭಗೊಳ್ಳಲಿರುವ ಫಿಫಾ ವಿಶ್ವಕಪ್ ಹಲವು ವಿಶೇಷತೆಗಳಿಂದ ಕೂಡಿದೆ. ರಶ್ಯಾದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ 32 ತಂಡಗಳು ಪಾಲ್ಗೊಳ್ಳಲಿದೆ. ಈ ಬಾರಿಯಾ ವಿಶ್ವಕಪ್‌ ಕಣದಲ್ಲಿರುವ ಅತ್ಯಂತ ಹಿರಿಯ ಹಾಗೂ ಕಿರಿಯ ಆಟಗಾರರ ವಯಸ್ಸು ಕೇಳಿದರೆ ನೀವು ಅಚ್ಚರಿ ಪಡುತ್ತೀರಿ.

ಈಜಿಪ್ಟ್ ಫುಟ್ಬಾಲ್ ತಂಡದ ನಾಯಕ ಹಾಗು ಗೋಲುಕೀಪರ್ ಎಸ್ಸಾಮ್ ಎಲ್-ಹ್ಯಾಡರಿ, 2018ರ ಫಿಫಾ ವಿಶ್ವಕಪ್ ಕೂಟದಲ್ಲಿರುವ ಅತೀ ಹಿರಿಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಸ್ಸಾಮ್ ವಯಸ್ಸು 45. ಜನವರಿ 15, 1973ರಲ್ಲಿ ಹುಟ್ಟಿದ ಎಸ್ಸಾಮ್ ಇದೀಗ ಫಿಫಾ ವಿಶ್ವಕಪ್ ಫುಟ್ಬಾಲ್ ಆಡುತ್ತಿರುವ  ಹಿರಿಯ ಆಟಗಾರ ಅನ್ನೋ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಎಸ್ಸಾಮ್‌ಗಿಂತ ಮೊದಲು 2014ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 43 ವರ್ಷದ ಕೊಲಂಬಿಯಾದ ಫರೀದ್ ಮೊಂಡ್ರಾಗನ್ ವಿಶ್ವಕಪ್ ಫುಟ್ಬಾಲ್ ಆಡಿದ ಹಿರಿಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ಇನ್ನು ಫ್ರೆಂಚ್ ತಂಡದ ಕೈಲಿಯನ್ ಎಮ್‌ಬಾಪೆ ಅತೀ ಕಿರಿಯ ಫುಟ್ಬಾಲ್ ಪಟು ಅನ್ನೋ ಹಿರಿಮೆಗೆ ಪಾತ್ರರಾಗಿದ್ದಾರೆ. ಕೈಲಿಯನ್ ವಯಸ್ಸು ಕೇವಲ 19. ಡಿಸೆಂಬರ್ 20, 1998ರಲ್ಲಿ ಹುಟ್ಟಿದ ಕೈಲಿಯನ್ ಕಿರಿಯ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕೈಲಿಯನ್ ಈ ಬಾರಿ ವಿಶ್ವಕಪ್ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರ. ಆದರೆ ಫಿಫಾ ಫುಟ್ಬಾಲ್ ಆಡಿದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ನಾರ್ತನ್ ಐರ್ಲೆಂಡ್ ತಂಡದ ನಾರ್ಮನ್ ವೈಟ್‌ಸೈಡ್ ಪಾತ್ರರಾಗಿದ್ದಾರೆ. 17 ವರ್ಷದಲ್ಲಿ ನಾರ್ಮನ್ ವೈಟ್‌ಸೈಡ್ 1982ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. 

ಫಿಫಾ ವಿಶ್ವಕಪ್ ಫುಟ್ಬಾಲ್ 2018ರ ವೇಳಾಪಟ್ಟಿ ಹಾಗೂ ಪಂದ್ಯದ ಸಮಯ​​​​​​​

click me!