ಟೀಂ ಇಂಡಿಯಾದ ಟಾಪ್ ಆಟಗಾರನಿಗಿತ್ತು ಬುಕ್ಕಿ ನಂಟು..!

By Web DeskFirst Published Aug 24, 2018, 11:42 AM IST
Highlights

ರನೊಂದಿಗೆ ಸಂಪರ್ಕ ಹೊಂದಿದ್ದಾಗಿ ಒಪ್ಪಿಕೊಂಡಿದ್ದ. ಅವರಿಬ್ಬರ ನಡುವಿನ ದೂರವಾಣಿ ಸಂಭಾಷಣೆಯ ಕ್ಲಿಪ್ ನೀಡುವುದಾಗಿ ಹೇಳಿದ್ದ. ಆದರೆ ಸಮಯದ ಅಭಾವದಿಂದ ತನಿಖೆ ನಡೆಸಲು ಸಾಧ್ಯವಾಗಲಿಲ್ಲ. ಜತೆಗೆ ಕೇವಲ ಐಪಿಎಲ್ ಪ್ರಕರಣದ ತನಿಖೆಯಷ್ಟೇ ನಡೆಸಲು ಆದೇಶ ಇದ್ದಿದ್ದರಿಂದ, 2008-09ರ ಪಂದ್ಯದ ವೇಳೆ ನಡೆದಿದೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ನನಗೆ ಅವಕಾಶ ಸಿಗಲಿಲ್ಲ’ ಎಂದು ಮಿಶ್ರಾ ಹೇಳಿದ್ದಾರೆ.

ನವದೆಹಲಿ[ಆ.24]: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖಾಧಿಕಾರಿ ಬಿ.ಬಿ.ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಅಗ್ರ ಆಟಗಾರನೊಬ್ಬ, 2008-09ರಲ್ಲಿ ಬುಕ್ಕಿ ಜತೆ ಸಂಪರ್ಕ ಹೊಂದಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಆದರೆ ಆಟಗಾರನ ಹೆಸರು ಬಿಚ್ಚಿಟ್ಟಿಲ್ಲ. 

‘ಬುಕ್ಕಿ ತಾನು ಆಟಗಾರನೊಂದಿಗೆ ಸಂಪರ್ಕ ಹೊಂದಿದ್ದಾಗಿ ಒಪ್ಪಿಕೊಂಡಿದ್ದ. ಅವರಿಬ್ಬರ ನಡುವಿನ ದೂರವಾಣಿ ಸಂಭಾಷಣೆಯ ಕ್ಲಿಪ್ ನೀಡುವುದಾಗಿ ಹೇಳಿದ್ದ. ಆದರೆ ಸಮಯದ ಅಭಾವದಿಂದ ತನಿಖೆ ನಡೆಸಲು ಸಾಧ್ಯವಾಗಲಿಲ್ಲ. ಜತೆಗೆ ಕೇವಲ ಐಪಿಎಲ್ ಪ್ರಕರಣದ ತನಿಖೆಯಷ್ಟೇ ನಡೆಸಲು ಆದೇಶ ಇದ್ದಿದ್ದರಿಂದ, 2008-09ರ ಪಂದ್ಯದ ವೇಳೆ ನಡೆದಿದೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ನನಗೆ ಅವಕಾಶ ಸಿಗಲಿಲ್ಲ’ ಎಂದು ಮಿಶ್ರಾ ಹೇಳಿದ್ದಾರೆ.

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರಾಗಿದ್ದ ಎಸ್. ಶ್ರೀಶಾಂತ್, ಅಜಿತ್ ಚಾಂಡೀಲ್ ಹಾಗೂ ಅಂಕಿತ್ ಚೌಹ್ಹಾಣ್ ಅವರನ್ನು ಬಂಧಿಸಲಾಗಿತ್ತು. ಆದರೆ 2008-09ರಲ್ಲಿ ಬುಕ್ಕಿ ಜತೆ ಸಂಪರ್ಕ ಹೊಂದಿದ್ದ ಆ ಟಾಪ್ ಆಟಗಾರ ಯಾರು ಎನ್ನುವ ಮಾಹಿತಿ ಬಹಿರಂಗವಾಗಿಲ್ಲ.

click me!