ಕ್ರಿಕೆಟಿಗರು ವಯಸ್ಸು ಬದಲಿಸಿದರೆ 2 ವರ್ಷ ನಿಷೇಧ!

By Web DeskFirst Published Nov 28, 2018, 10:56 AM IST
Highlights

ವಯೋಮಿತಿ ಬದಲಿಸಿ ತಂಡಕ್ಕೆ ಸೇರಿಕೊಂಡರೆ ಕ್ರಿಕೆಟಿಗರಿಗೆ ಕಾದಿದೆ ಸಂಕಷ್ಟ. ಬಿಸಿಸಿಐನಿಂದ ಹೊಸ ನೀತಿ ಜಾರಿ. ನೂತನ ನಿಯಮದ ಸಾರಾಂಶ ಏನು? ಇಲ್ಲಿದೆ ಹೆಚ್ಚಿನ ವಿವರ.

ಮುಂಬೈ(ನ.28): ಕ್ರೀಡೆಯಲ್ಲಿ ವಯಸ್ಸು ಬದಲಿಸಿ ಅರ್ಹತೆ ಗಿಟ್ಟಿಸಿಕೊಳ್ಳುವುದು, ತಂಡಕ್ಕೆ ಎಂಟ್ರಿ ಕೊಡುವುದು ಸಾಮಾನ್ಯವಾಗಿದೆ. ಇದು ಕ್ರಿಕೆಟ್‌ನಲ್ಲೂ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಬಿಸಿಸಿಐ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತಂದಿದೆ.

ಕ್ರಿಕೆಟಿಗರು ವಯೋಮಿತಿ ಬದಲಿಸಿದರೆ 2 ವರ್ಷ ನಿಷೇಧ ವಿಧಿಸಲು ಬಿಸಿಸಿಐ ಮುಂದಾಗಿದೆ. ಹುಟ್ಟಿದ ದಿನಾಂಕ, ವಯಸ್ಸು ಬದಲಿಸಿ ಬಿಸಿಸಿಐನ ಯಾವುದೇ ಟೂರ್ನಿ, ಯಾವುದೇ ಪಂದ್ಯ ಆಡಿದರೆ  2  ವರ್ಷ ನಿಷೇಧದ ಶಿಕ್ಷೆಯನ್ನ ಜಾರಿಗೊಳಿಸಿದೆ.

ವಯಸ್ಸು ಬದಲಿಸಿ ಸಿಕ್ಕಿಬಿದ್ದರೆ  ಬಿಸಿಸಿಐ ಕ್ಷಮಿಸಲ್ಲ. ಹೀಗಾಗಿ ಕ್ರಿಕೆಟಿಗರು ಎಚ್ಚರ ವಹಿಸಬೇಕು. ಇಷ್ಟೇ ಅಲ್ಲ ಇದು ಶಿಸ್ತಿನ ಪಾಠ ಎಂದು ಬಿಸಿಸಿಐ ಹೇಳಿದೆ. ವಯಸ್ಸು ಬದಲಿಸಿ ತಂಡ ಸೇರಿಕೊಳ್ಳುವುದು ಅಪರಾಧ ಎಂದು ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದರು.

click me!