ಟೀಂ ಇಂಡಿಯಾ ಈ ದಿನವನ್ನು ಮರೆಯಲು ಸಾಧ್ಯವೇ..? ಇಂದಿನ ಆ ದಿನ ಟೀಂ ಇಂಡಿಯಾ ಕನಸು ಭಗ್ನವಾಗಿತ್ತು...!

By Suvarna Web DeskFirst Published Mar 23, 2018, 5:41 PM IST
Highlights

ಸೂಪರ್ ಸಿಕ್ಸ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಒಮ್ಮೆ ಮುಗ್ಗರಿಸಿದ್ದು ಬಿಟ್ಟರೆ, ಫೈನಲ್'ವರೆಗೆ ಅಜೇಯವಾಗಿ ಮುನ್ನುಗ್ಗಿತ್ತು. ಆದರೆ ಫೈನಲ್'ನಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವ ಮೂಲಕ ಎರಡನೇ ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನವಾಯಿತು.

ಮೇ.23-2003 ರ ಈ ದಿನವನ್ನು ಪ್ರಾಯಶಃ ಟೀಂ ಇಂಡಿಯಾದ ಕಟ್ಟಾ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಆ ದಿನ ದಾದಾ ಹುಡುಗರ ಕನಸು ಭಗ್ನವಾದ ದಿನ.

ಹೌದು, 1983ರಲ್ಲಿ ಟೀಂ ಇಂಡಿಯಾ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಕಪಿಲ್ ದೇವ್ ನಾಯಕತ್ವದಲ್ಲಿ ಬಲಿಷ್ಠ ವೆಸ್ಟ್'ಇಂಡಿಸ್ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅದೇ ರೀತಿಯ ಕನಸು ಹೊತ್ತು ಸೌರವ್ ಗಂಗೂಲಿ ನೇತೃತ್ವದಲ್ಲಿ ಟೀಂ ಇಂಡಿಯಾ 2003ರ ವಿಶ್ವಕಪ್'ನಲ್ಲಿ ಪಾಲ್ಗೊಂಡಿತ್ತು.

ಸೂಪರ್ ಸಿಕ್ಸ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಒಮ್ಮೆ ಮುಗ್ಗರಿಸಿದ್ದು ಬಿಟ್ಟರೆ, ಫೈನಲ್'ವರೆಗೆ ಅಜೇಯವಾಗಿ ಮುನ್ನುಗ್ಗಿತ್ತು. ಆದರೆ ಫೈನಲ್'ನಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವ ಮೂಲಕ ಎರಡನೇ ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನವಾಯಿತು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು. ಆ ಬಳಿಕ 2011ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ ವಿಶ್ವಕಪ್ ಸೋಲಿನ ಕೊರಗನ್ನು ಮರೆಸಿತು.

click me!