FIH ಹಾಕಿ ಫೈನಲ್ಸ್: ಭಾರತ-ಜಪಾನ್‌ ಸೆಮೀಸ್‌ ಫೈಟ್

By Web Desk  |  First Published Jun 14, 2019, 10:36 AM IST

ಭಾರತ-ಜಪಾನ್ ತಂಡಗಳ ನಡುವಿನ ಪಂದ್ಯ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸುವ ತಂಡಗಳು ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಪ್ರವೇಶಿಸಲಿವೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ,,,


ಭುವನೇಶ್ವರ(ಜೂ.14): ಎಫ್‌ಐಎಚ್‌ ಹಾಕಿ ಸೀರೀಸ್‌ ಫೈನಲ್ಸ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡ, ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಜಪಾನ್‌ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ ದುರ್ಬಲ ಎದುರಾಗಳಿಗಳ ವಿರುದ್ಧ ದೊಡ್ಡ ಅಂತರಗಳಲ್ಲಿ ಗೆದ್ದು ಬೀಗಿದ್ದ ಭಾರತಕ್ಕೆ, ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಲಿದೆ. ಆದರೆ ಮನ್‌ಪ್ರೀತ್‌ ಸಿಂಗ್‌ ಪಡೆಗೆ ತವರಿನ ಲಾಭ ಸಿಗಲಿದೆ.

ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸುವ ತಂಡಗಳು ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಪ್ರವೇಶಿಸಲಿವೆ. 2020ರ ಒಲಿಂಪಿಕ್ಸ್‌ ಜಪಾನ್‌ನಲ್ಲೇ ನಡೆಯಲಿರುವ ಕಾರಣ, ಆತಿಥೇಯ ರಾಷ್ಟ್ರಕ್ಕೆ ನೇರ ಪ್ರವೇಶ ಸಿಗಲಿದೆ. ಹೀಗಾಗಿ, ಈ ಪಂದ್ಯ ಜಪಾನ್‌ಗಿಂತ ಹೆಚ್ಚಾಗಿ ಭಾರತಕ್ಕೆ ಮಹತ್ವದೆನಿಸಿದೆ.

Tap to resize

Latest Videos

ಇತ್ತೀಚೆಗೆ ನಡೆದಿದ್ದ ಅಜ್ಲಾನ್‌ ಶಾ ಟೂರ್ನಿಯಲ್ಲಿ ಮನ್‌ಪ್ರೀತ್‌ ಪಡೆ ಜಪಾನ್‌ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಕಳೆದ ವರ್ಷ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ನಲ್ಲೂ ಭಾರತ ಜಪಾನ್‌ ವಿರುದ್ಧ ಜಯಭೇರಿ ಬಾರಿಸಿತ್ತು.
 

click me!