ಬಾಬಾ ಸಾಹೇಬ ಅಂಬೇಡ್ಕರರ ಪ್ರತಿ ನಡೆಯಲ್ಲೂ ದೇಶಪ್ರೇಮ ಕಿಚ್ಚು

ಭಾರತದ ಬಹುಪಾಲು ಮೂಲಭೂತ ಸಮಸ್ಯೆಗಳಿಗೆ ಅಂಬೇಡ್ಕರರ ಸಂದೇಶವನ್ನು, ಬೋಧನೆಗಳನ್ನು ಮೂಲ ರೂಪದಲ್ಲಿ ತಲುಪಿಸುವುದು ಪರಿಹಾರದ ಕಾರ್ಯವಾಗುತ್ತದೆ. ‘ನಾನು ಮೊದಲು ಭಾರತೀಯ ಕಡೆಗೂ ಭಾರತೀಯ’ ಎಂಬ ಉದ್ಗೋಷ ಮಾಡಿದ ಏಕೈಕ ಭಾರತೀಯ ಅದು ಬಾಬಾ ಸಾಹೇಬರು’
 

Patriotism shines in Dr BR Ambedkar every move Dr Sudhakar Hosalli Article gvd

ಡಾ। ಸುಧಾಕರ ಹೊಸಳ್ಳಿ, ಮೈಸೂರು.

ಏಪ್ರಿಲ್ ತಿಂಗಳು ಸಹಜವಾಗಿ ಅಂಬೇಡ್ಕರರ ಸ್ಮರಣೆ, ಅವರ ಕುರಿತಾದ ಚರ್ಚೆ, ಸಂವಾದ, ಕಾರ್ಯಕ್ರಮ, ಕಾರ್ಯಗಾರ ಸಮ್ಮೇಳನ ಹೆಚ್ಚಿರುತ್ತದೆ. ಸಾಮಾಜಿಕ ಸಮಾನತೆಯ ಮಹಾತ್ಮನ ಜನ್ಮ ಮಾಸದ ಕಾರಣಕ್ಕಾಗಿ, ಭಾರತ ಹೀಗೆ ಎಲ್ಲೆಡೆ ಅಂಬೇಡ್ಕರರನ್ನೇ ಅವಗಾಹನೆ ಮಾಡಿಕೊಳ್ಳುತ್ತದೆ. ಮುಂದುವರೆದು, ಸಮ -ಸಮಾಜದ ನಿರ್ಮಾಣಕ್ಕೆ ಅಂಬೇಡ್ಕರರ ಹೋರಾಟ ಮತ್ತು ಹಾಕಿಕೊಟ್ಟ ಆದರ್ಶಗಳನ್ನು ಚರ್ಚಿಸುವ, ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಆ ದಿಸೆಡೆಗೆ ಸಮಾಜವನ್ನು ಕೊಂಡೊಯ್ಯುವ ಪ್ರಯತ್ನಗಳು ಹೆಮ್ಮೆಯಿಂದಲೇ ಸಾಗುತ್ತವೆ.

Latest Videos

ಯುವಕರು, ಮಹಿಳೆಯರು ಸಮಾಜವನ್ನು ಒಟ್ಟುಗೂಡಿಸುವ ಹೊಣೆಗಾರಿಕೆ ಮೂಡಿಸಿಕೊಳ್ಳುತ್ತಾರೆ. ಇಷ್ಟೆಲ್ಲ ಒಳಿತುಗಳ ನಡುವೆ ಭಾರತವನ್ನು ತುಂಡಾಗಿಸುವ, ಸಮಾಜವನ್ನು ವಿಘಟಿಸುವ, ಇತಿಹಾಸದ ಪ್ರಮಾದವನ್ನು ವೈಭವಿಕರಿಸುವುದರ ಮುಖಾಂತರ ಭಾರತ ಚೂರಾಗುವಂತೆ ಯೋಚಿಸುವ, ಯೋಜಿಸುವ ಒಂದು ವರ್ಗವು ಜಾಗೃತವಾಗಿಯೇ ಇರುತ್ತದೆ. ಹಾಗಾಗಿ, ಪ್ರಜ್ಞಾವಂತ ಭಾರತೀಯ ಅಂಬೇಡ್ಕರರ ಸದಾಶಯಗಳನ್ನು ಸಂಶೋಧನಾತ್ಮಕವಾಗಿ ಸಮಾಜ ಮುಟ್ಟಿಸುವ ಜವಾಬ್ದಾರಿ ಮೆರೆಯಬೇಕು, ಇಲ್ಲವಾದರೆ ಭಾರತದ ಪ್ರಗತಿ ದೇಶದ ಸಮಗ್ರತೆ ಹಾಗೂ ನೆಲಮೂಲ ಸಂಸ್ಕೃತಿಯ ಬೇರುಗಳನ್ನು ಶಿಥಿಲಗೊಳಿಸುವ ಅಪಾಯ ಇದ್ದೇ ಇರುತ್ತದೆ.

ಕತ್ತಲ ಕೂಪದಲ್ಲಿ ಇದ್ದ ಮಹಿಳೆಗೆ ‘ಸ್ವಾಭಿಮಾನ’ ಕೊಟ್ಟ ದಾದಾ ಸಾಹೇಬ್‌

ಭಾರತದ ಬಹುಪಾಲು ಮೂಲಭೂತ ಸಮಸ್ಯೆಗಳಿಗೆ ಅಂಬೇಡ್ಕರರ ಸಂದೇಶವನ್ನು, ಬೋಧನೆಗಳನ್ನು ಮೂಲ ರೂಪದಲ್ಲಿ ತಲುಪಿಸುವುದು ಪರಿಹಾರದ ಕಾರ್ಯವಾಗುತ್ತದೆ. ‘ನಾನು ಮೊದಲು ಭಾರತೀಯ ಕಡೆಗೂ ಭಾರತೀಯ’ ಎಂಬ ಉದ್ಗೋಷ ಮಾಡಿದ ಏಕೈಕ ಭಾರತೀಯ ಅದು ಬಾಬಾ ಸಾಹೇಬರು’ ನಾಡಿನ ಕುರಿತು, ತಾಯಿ ನೆಲದ ಬಗೆಗೆ ಅಂಬೇಡ್ಕರರ ಅದಮ್ಯ ನಿಲುವನ್ನು ಯುವಕರು, ಮಕ್ಕಳಿಗೆ ದರ್ಶಿಸುವ ನಡೆಯು ಅಂಬೇಡ್ಕರ್ ಅವರಿಗೆ ಸಲ್ಲಿಸಬಹುದಾದ ಬಹುದೊಡ್ಡ ಗೌರವವೇ. ಅಂದು 1942ನೇ ಇಸವಿ, ಫೆಬ್ರವರಿ ತಿಂಗಳಲ್ಲಿ, ಬಾಂಬೆಯ ವಾಗ್ಗೆ ಸಭಾಭವನದಲ್ಲಿ ಬೇಸಿಗೆ ಭಾಷಣ ಸರಣಿಯ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ‘ಪಾಕಿಸ್ತಾನದ ಮೇಲೆ ಚಿಂತನೆಗಳು’ ಎಂಬ ವಿಷಯದ ಕುರಿತು ಮಾತನಾಡುವಾಗ, ‘ಚರಿತ್ರೆಯನ್ನು ಮರೆತುಬಿಡಿ ಎಂದು ಜನಗಳಿಗೆ ಹೇಳುವುದು ತಪ್ಪಾಗುತ್ತದೆ.

ಯಾರು ಚರಿತ್ರೆಯನ್ನು ಮರೆಯುತ್ತಾರೋ ಅವರು ಚರಿತ್ರೆಯನ್ನು ಸೃಷ್ಟಿ ಮಾಡಲಾರರು, ಭಾರತದ ಸೈನ್ಯದಲ್ಲಿ ಮುಸಲ್ಮಾನರ ಸಂಖ್ಯೆ ಅಥವಾ ಪ್ರಾಮುಖ್ಯತೆಯನ್ನು ಕೆಳಗೆ ತರಬೇಕಾದರೆ ಮತ್ತು ಸೈನ್ಯ ಕ್ಷೇಮವಾಗಿ ಇರಬೇಕಾದರೆ ಪ್ರತಿಕೂಲವಾದ ಧಾತುವನ್ನು ಹೊರಗಡೆ ಬಿಟ್ಟು ಬಿಡುವುದೇ ಬುದ್ಧಿವಂತಿಕೆ’ ಎಂಬ ಸಲಹೆ ನೀಡಿದರು. ಇದು ರಾಷ್ಟ್ರೀಯತೆಯನ್ನು ಹೃದಯವಂತರಾಳದಲ್ಲಿ ಪ್ರತಿಷ್ಠಾಪಿಸಿಕೊಂಡ ವ್ಯಕ್ತಿ ಒಬ್ಬರು ಪ್ರಕಟ ಮಾಡಬಹುದಾದ ಉತ್ಕೃಷ್ಟ ಭಾವನೆ. ನಾವು ನಮ್ಮ ದೇಶವನ್ನು ರಕ್ಷಣೆ ಮಾಡುತ್ತವೆ, ಪಾಕಿಸ್ತಾನ ತನ್ನ ಮುಸ್ಲಿಂ ಚಕ್ರಾಧಿಪಥ್ಯವನ್ನು ಭಾರತದ ಮೇಲೆ ವಿಸ್ತರಿಸುತ್ತದೆ ಎಂಬ ತಪ್ಪು ತಿಳುವಳಿಕೆಯನ್ನು ಇಟ್ಟುಕೊಳ್ಳಬೇಡಿ, ಹಿಂದುಗಳು ಅದನ್ನು ಮಣ್ಣು ನೆಕ್ಕುವ ಹಾಗೆ ಮಾಡುತ್ತಾರೆ, ಎಂದಿದ್ದರು. ಕೆಲವು ವಿಷಯಗಳ ಕುರಿತು ಸವರ್ಣೀಯ ಹಿಂದೂಗಳೊಂದಿಗೆ ನನ್ನ, ಭಿನ್ನಾಭಿಪ್ರಾಯವೂ ಇದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ, ಆದರೆ ನಮ್ಮ ತಾಯಿ ನೆಲದ ರಕ್ಷಣೆಗಾಗಿ, ಪ್ರಾಣ ಕೊಡಲು ಸಿದ್ಧನಿದ್ದೇನೆ ಎಂದು ನಿಮ್ಮ ಮುಂದೆ ಪ್ರತಿಜ್ಞೆ ಮಾಡುತ್ತೇನೆ ಎಂದು ಘೋಷಿಸಿ ಬಿಟ್ಟರು.

ಇದು ತನ್ನ ನೆಲದ ಬಗ್ಗೆ ಭಾರತಾಂಬೆಯ ಸುಪುತ್ರನೊಬ್ಬನು ತೆಗೆದುಕೊಳ್ಳಬಹುದಾದ ಗರಿಷ್ಠ ಪ್ರತಿಜ್ಞೆಯಾಗಿದೆ. ಹೈದರಾಬಾದ್ ಪ್ರೋಗ್ರೆಸಿವ್ ಗ್ರೂಪ್‌ನ ಆಶ್ರಯದಲ್ಲಿ ದಿನಾಂಕ 24- 5- 1950ರಂದು ಸಭೆಯಲ್ಲಿ ಮಾತನಾಡುತ್ತಾ, ‘ಭಾರತದ ಸಂವಿಧಾನವು ಪ್ರಜೆಗಳಿಗೆ ಹೆಚ್ಚಿನ ಮೂಲಭೂತ ಹಕ್ಕುಗಳನ್ನು ಕಲ್ಪಿಸಿದೆ. ಆದಾಗಿಯೂ ರಾಷ್ಟ್ರದ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೋಸ್ಕರ ಮೂಲಭೂತ ಹಕ್ಕುಗಳ ಮೇಲೆ ಕೆಲವೊಂದು ಮಿತಿಗಳನ್ನು ಹೇರಿದ್ದೇನೆ’ ಎನ್ನುವಾಗ, ವೈಯಕ್ತಿಕ ಸ್ವಾತಂತ್ರ್ಯವೂ ರಾಷ್ಟ್ರದ ಪರಮಾಧಿಕಾರವನ್ನು ಮೀರಿ ನಿಲ್ಲಬಾರದು ಎನ್ನುವ ಕಟು ಸಂದೇಶ ನೀಡಿದ್ದರು.

ಅಮೆರಿಕದ ಪ್ರಖ್ಯಾತ ವಿಶ್ವವಿದ್ಯಾನಿಲಯವಾದ ಕೊಲಂಬಿಯಾ ವಿವಿಯು 1950ರಲ್ಲಿ ತೆಗೆದುಕೊಂಡ ಒಂದು ಅಸಾಧಾರಣ ತೀರ್ಮಾನದಂತೆ ಭಾರತದ ಸಂವಿಧಾನ ರಚನೆಯ ಶ್ರೇಷ್ಠ ಕಾರ್ಯಕ್ಕಾಗಿ, ಅಂಬೇಡ್ಕರ್ ರಿಗೆ ಎಲ್‌ಎಲ್‌ಡಿ ಪದವಿಯನ್ನು ಪ್ರಧಾನ ಮಾಡಿ ಗೌರವಿಸಬೇಕೆಂದು ನಿರ್ಣಯಿಸಿತು. ಇದೇ ವಿವಿಯ ವಿದ್ಯಾರ್ಥಿಯಾಗಿದ್ದ ತಮಗೆ ಇಂತದ್ದೊಂದು ಗೌರವ ಲಭಿಸುವ ಮಾಹಿತಿ ಅಂಬೇಡ್ಕರನ್ನು ಅತೀವ ಸಂತಸದಲ್ಲಿ ಸಂಸ್ಥಾಪಿಸಿತು. ಈ ಪದವಿಯನ್ನು ಪಡೆದುಕೊಳ್ಳಲು ಅಂಬೇಡ್ಕರರು ಅಮೆರಿಕಕ್ಕೆ ತೆರಳಬೇಕಾದ ಅಗತ್ಯವಿದ್ದ ಸಂದರ್ಭವದು, ಆಗತಾನೆ ಸಂವಿಧಾನದ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಭಾರತ ಸರ್ಕಾರದ ಮುಂದೆ ಅನೇಕ ಸಮಸ್ಯೆಗಳು ಉಲ್ಬರ್ಣಿಸಿದ್ದವು. ಅವುಗಳಲ್ಲಿ ಬಹು ಮುಖ್ಯವಾಗಿ ಸಾಂವಿಧಾನಿಕ ಸಮಸ್ಯೆಗಳು ಹೆಚ್ಚಾಗಿದ್ದವು, 

ಅವುಗಳನ್ನು ಅಂಬೇಡ್ಕರ್ ಅವರ ನಿಪುಣತೆಯಿಂದಲೇ ಪರಿಹರಿಸಬೇಕಾಗಿದ್ದು ತಾವು ವಿಶ್ವವಿದ್ಯಾನಿಲದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಅತ್ಯಂತ ವಿನೀತವಾಗಿ ವಿಶ್ವವಿದ್ಯಾನಿಲಯಕ್ಕೆ ತಿಳಿಯಪಡಿಸಿದರು. ಅವರ ಅನುಪ ಸ್ಥಿತಿಯಲ್ಲೇ ಪದವಿ ಪ್ರಧಾನಕ್ಕೆ ವಿವಿ ಸಿದ್ಧವಾಗಿದ್ದರೂ, ತಾನೇ ಖುದ್ದಾಗಿ ಬಂದು ಒಂದೆರಡು ವರ್ಷಗಳಲ್ಲಿ ಪದವಿ ಸ್ವೀಕರಿಸುತ್ತೇನೆ ಎಂಬಂತೆ ಅಂಬೇಡ್ಕರರ ಆಶಯದಂತೆ ಪದವಿ ಪ್ರಧಾನ ಸಮಾರಂಭವನ್ನು ಮುಂದೂಡಲಾಯಿತು. ಈ ನಡವಳಿಕೆ ಸದಾಕಾಲ ಅಂಬೇಡ್ಕರರ ಹೃದಯದಲ್ಲಿ ದೇಶದ ಹಿತಾಸಕ್ತಿಯೇ ಆದ್ಯವಾಗಿರುತ್ತದೆ ಎಂಬುದನ್ನು ಮತ್ತೊಮ್ಮೆ ಧೃಡಪಡಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತಾಂಬೆಯ ಬಂಧನ ಮುಕ್ತಕ್ಕೆ ಅಂಬೇಡ್ಕರ್ ಅವರ ಮನಸ್ಸು ಅದೆಷ್ಟು?

ಅಂಬೇಡ್ಕರ್‌ ಕನಸನ್ನು ರಾಜ್ಯದಲ್ಲಿ ನಾವು ನನಸು ಮಾಡುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ

ಹಪಹಪಿಸಿತ್ತು ಎನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿ, 20 ವರ್ಷಗಳ ಕಾಲ ಕಾಂಗ್ರೆಸ್ ವಿರುದ್ಧ ಹೋರಾಡಿದ್ದ ಅಂಬೇಡ್ಕರರು ‘ನೀವು ಸ್ವರಾಜ್ಯಕ್ಕಾಗಿ ಹೋರಾಡುತ್ತಿದ್ದೀರಿ, ನಿಮ್ಮ ಜೊತೆ ಸೇರಲು ನಾನು ಸಿದ್ಧ. ನಿಮಗಿಂತ ಚೆನ್ನಾಗಿ ನಾನು ಹೋರಾಡಬಲ್ಲೆ ಎಂದು ನಿಮಗೆ ಭರವಸೆ ಕೊಡುತ್ತೇನೆ. ಆದರೆ ನನ್ನದು ಒಂದು ಷರತ್ತು ಇದೆ. ಸ್ವರಾಜ್ಯದಲ್ಲಿ ನನ್ನ ಪಾಲು ಎಷ್ಟೆಂದು ಹೇಳಿ, ನಿಮಗೆ ಅದನ್ನು ತಿಳಿಸಲು ಇಷ್ಟವಿಲ್ಲದಿದ್ದರೆ ನನ್ನ ಬೆನ್ನ ಹಿಂದೆ ಬ್ರಿಟಿಷರೊಡನೆ ರಾಜಿ ಮಾಡಿಕೊಳ್ಳಬೇಕೆಂದಿದ್ದರೆ ನೀವಿಬ್ಬರೂ ನರಕಕ್ಕೆ ಹೋಗಿ’ ಎಂದು ಬ್ರಿಟಿಷರು ಮತ್ತು ಕಾಂಗ್ರೆಸ್ ವಿರುದ್ಧ ಆರ್ಭಟಿಸಿದ್ದರು. ಅಂಬೇಡ್ಕರರು ಹೇಗೆ? ತನ್ನ ನೆಲದ ಬಗೆಗೆ ಅಭಿಮಾನುಷ ಅಕ್ಕರೆ, ಅಭಿಮಾನ ಹೆಮ್ಮೆ ಆದರಗಳನ್ನು ಹೊಂದಿದ್ದರು, ಹಾಗೆಯೇ ಯುವಕರು ಭಾರತವನ್ನು ತಮ್ಮೊಳಗೂ ಪ್ರತಿಷ್ಠಾಪಿಸಿಕೊಂಡರೆ ಭಾರತದ ಅಭಿವೃದ್ಧಿಪಥ ಎಲ್ಲ ಸಂಕೋಲೆಗಳನ್ನು ಮೀರಿ ನಿಲ್ಲಲು ಸಾಧ್ಯವಾಗುತ್ತದೆ ಎಂಬುದು ನಿರ್ವಿವಾದ.

(ಆಧಾರ- ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಪುಟ ಸಂಖ್ಯೆ 91, 456, 458, 659 ಸಂಪುಟ- 18.)

vuukle one pixel image
click me!