Temporary Marriage: ಈ ದೇಶದಲ್ಲಿ ಯಾರೇ ಮದುವೆಯಾದ್ರೂ 15 ದಿನಕ್ಕೆ ಡಿವೋರ್ಸ್;‌ ಜೀವನಾಂಶ ಕೂಡ ಕೊಡ್ಬೇಡಕಿಲ್ಲ!

Published : Apr 14, 2026, 08:00 AM IST
temporary marriage

ಸಾರಾಂಶ

Temporary Marriage: ಇಲ್ಲಿ ಮದುವೆಯಾದ 15 ದಿನಕ್ಕೇ ಡಿವೋರ್ಸ್, ಆಮೇಲೆ ಇನ್ನೊಂದು ಮದುವೆ! ಹೌದು, ಈ ದೇಶದಲ್ಲಿ ಈ ರೀತಿ ಪದ್ಧತಿ ಇದೆ, ಹಾಗಾದರೆ ಆ ದೇಶ ಯಾವುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಜೀವನದಲ್ಲಿ ಮದುವೆ ಅನ್ನೋದು ಒಮ್ಮೆ ಮಾತ್ರ ಬರುವ ಸುಂದರ ಕ್ಷಣ. ಆದರೆ ಇಲ್ಲೊಂದು ದೇಶದಲ್ಲಿ ಮದುವೆಯಾದ 15 ದಿನಗಳಲ್ಲೇ ದಂಪತಿ ಬೇರೆಯಾಗುತ್ತಾರೆ. ಏನಿದು ವಿಚಿತ್ರ ಸಂಪ್ರದಾಯ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹದಿನೈದು ದಿನದ ಕಾಂಟ್ರ್ಯಾಕ್ಟ್!‌

ಒಂದು ದೇಶದಲ್ಲಿ ಇದಕ್ಕೆ ತದ್ವಿರುದ್ಧವಾದ ಪದ್ಧತಿ ಇದೆ. ಇಲ್ಲಿ ಜನ ತಮಗೆ ಇಷ್ಟವಾದಷ್ಟು ಬಾರಿ ಮದುವೆಯಾಗಬಹುದು. ವಿಚ್ಛೇದನಕ್ಕೆ ಯಾವುದೇ ವಿಶೇಷ ಕಾನೂನು ಇಲ್ಲ. ಬೇರೆಯಾದ ನಂತರ ಹೆಂಡತಿಗೆ ಗಂಡ ಜೀವನಾಂಶ ನೀಡುವ ಅಗತ್ಯವೂ ಇಲ್ಲ. ಕಾಂಟ್ರಾಕ್ಟ್ ಮುಗಿದ ತಕ್ಷಣ ಸಂಬಂಧವೂ ಮುಗಿಯುತ್ತದೆ. ಅಷ್ಟಕ್ಕೂ ಈ ವಿಚಿತ್ರ ಪದ್ಧತಿ ಇರುವುದು ಎಲ್ಲಿ? ಇಲ್ಲಿದೆ ವಿವರ.

ತಾತ್ಕಾಲಿತ ವಿವಾಹ ಒಪ್ಪಂದ

ಪ್ರವಾಸಿ ಕೇಂದ್ರವಾಗಿ ವಿಶ್ವಪ್ರಸಿದ್ಧಿ ಪಡೆದ ಇಂಡೋನೇಷ್ಯಾದ ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಪುಂಚಾಕ್‌ನಂತಹ ಪರ್ವತ ಪ್ರದೇಶಗಳಲ್ಲಿ ಈ ಕಾಂಟ್ರಾಕ್ಟ್ ಮದುವೆಗಳು ಹೆಚ್ಚು. ಇದಕ್ಕೆ ಹಲವು ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿವೆ. ಅರೇಬಿಕ್ ಭಾಷೆಯಲ್ಲಿ 'ಮುತ್ತಾ' ಎಂದರೆ ಸಂತೋಷ ಅಥವಾ ಸುಖ. ಇದು ತಾತ್ಕಾಲಿಕ ವಿವಾಹ ಒಪ್ಪಂದ. ಅಂದರೆ, ಮದುವೆಗೂ ಮುನ್ನವೇ ಎಷ್ಟು ದಿನ ಒಟ್ಟಿಗೆ ಇರಬೇಕು ಎಂದು ಇಬ್ಬರೂ ಒಪ್ಪಂದ ಮಾಡಿಕೊಳ್ಳುತ್ತಾರೆ. ಆ ಅವಧಿ ಮುಗಿದ ತಕ್ಷಣ ಬೇರೆಯಾಗುತ್ತಾರೆ.

ಪ್ರವಾಸಕ್ಕೆ ಬಂದೋರು ಮದುವೆ ಆಗಬಹುದು!

ಈ ಪ್ರದೇಶಕ್ಕೆ, ವಿಶೇಷವಾಗಿ ಮಧ್ಯಪ್ರಾಚ್ಯದಿಂದ ಪ್ರವಾಸಿಗರು ಬರುತ್ತಾರೆ. ಅವರು ಇಲ್ಲಿಗೆ ಪ್ರವಾಸಕ್ಕೆ ಬಂದಾಗ ಸ್ಥಳೀಯ ಮಹಿಳೆಯರನ್ನು ಮದುವೆಯಾಗುತ್ತಾರೆ. ಇಲ್ಲಿರುವಷ್ಟು ದಿನ ಆಕೆಗೆ ಗಂಡನಾಗಿರುತ್ತಾರೆ. ಹೊರಡುವಾಗ, ತಮಗೆ ಪತ್ನಿಯಾಗಿದ್ದಕ್ಕೆ ಹಣ ಕೊಟ್ಟು ಹೋಗುತ್ತಾರೆ.

ಇಲ್ಲಿಯ ಕಾನೂನು ಹೇಗಿದೆ?

ಇಂಡೋನೇಷ್ಯಾದ ಅಧಿಕೃತ ಕಾನೂನಿನ ಪ್ರಕಾರ ಈ ಕಾಂಟ್ರಾಕ್ಟ್ ಮದುವೆಗಳಿಗೆ ಯಾವುದೇ ಕಾನೂನುಬದ್ಧತೆ ಇಲ್ಲ. ಬಡತನವೇ ಇದಕ್ಕೆಲ್ಲಾ ಪ್ರಮುಖ ಕಾರಣ. ಒಂದು ಮದುವೆಗೆ ಮಹಿಳೆಯರು ಸುಮಾರು $300 ರಿಂದ $500 ಡಾಲರ್ ಪಡೆಯುತ್ತಾರೆ. ಭಾರತದಲ್ಲಿ ಮದುವೆಯನ್ನು ಏಳು ಜನ್ಮದ ಬಂಧ ಎಂದರೆ, ಇಲ್ಲಿ ಅದು ಕೆಲವೇ ದಿನಗಳ ಒಪ್ಪಂದವಷ್ಟೇ.

 

PREV
Read more Articles on
click me!

Recommended Stories

50 ವರ್ಷಕ್ಕಿಂತ ಮುಂಚೆ ಗಂಡ-ಹೆಂಡ್ತಿ ನಡುವೆ ದೈಹಿಕ ಸಂಬಂಧ ಕಡಿಮೆಯಾದ್ರೆ ಆಗೋ ಸಮಸ್ಯೆ ಒಂದಾ ಎರಡಾ?
ಕನ್ನಡದ ಈ ಮೇರನಟರು 'ಸ್ತ್ರೀ' ಪಾತ್ರದಲ್ಲಿ ನಟಿಸಿದ್ದಾರೆ; ಯಾವ ಚಿತ್ರದಲ್ಲಿ ಯಾರು ನೋಡಿ!