ರಿಪ್ಪನ್‌ಪೇಟೆಯಲ್ಲಿ ನಡೆಯುತ್ತಿದ್ದ ಗಣಪತಿ ವಿಸರ್ಜನೆ ವೇಳೆ ಕ್ಷುಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದು ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ನಡೆದಿದೆ. ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಶಿವಮೊಗ್ಗ[ಸೆ.11] ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಯುವಕರ ಮದ್ಯೆ ಹೊಡೆದಾಟ ನಡೆದು ಚಾಕು ಇರಿದ ಘಟನೆ ಪ್ರೀತಿ ಪ್ರೇಮದ ಬಣ್ಣ ಪಡೆದುಕೊಂಡಿದೆ. ಈ ಹೊಡೆದಾಟ ಹುಡುಗಿಯರ ಡ್ಯಾನ್ಸ್ ವಿಷಯದಲ್ಲಿ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದರೂ ಸಹ ಇದರ ಹಿಂದೆ ಪ್ರೀತಿ ಪ್ರೇಮದ ವಾಸನೆ ಕಂಡುಬರುತ್ತಿದೆ.
ಗಣಪತಿ ವಿಸರ್ಜನೆ ವೇಳೆಯಲ್ಲಿ ಸೂರ್ಯ ಮತ್ತು ಕುಮಾರ್ ಎಂಬುವವರಿಗೆ ಧನುಷ್, ಜೋಸೆಫ್ ಹಾಗೂ ಇತರರು ಸೇರಿ ಚಾಕುವಿನಿಂದ ಇರಿದಿದ್ದು, ಅವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಶಿವಮೊಗ್ಗದಲ್ಲಿನ್ನು ಪ್ರತಿದಿನ ವಾಹನ ದಾಖಲೆ ಪರಿಶೀಲನೆ..!
ಇದೊಂದು ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣವೆಂದು ತಿಳಿದುಬಂದರೂ ಸಹ ಈ ಘಟನೆಗೆ ಪ್ರೀತಿಯ ವಾಸನೆ ಮೆತ್ತಿಕೊಂಡಿದೆ. ಒಂದು ವಾರದ ಹಿಂದೆ ಧನುಷ್ ಗೆ ಇದೇ ಪ್ರೀತಿ ಪ್ರೇಮದ ವಿಷಯದಲ್ಲಿ ಬುದ್ದಿವಾದ ಹೇಳಿ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ. ಇಂದು ನಡೆದ ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಧನುಷ್ ಡ್ಯಾನ್ಸ್ ಮಾಡುತ್ತಿದ್ದ ಹುಡುಗಿಯರ ನಡುವೆ ಬಂದು ಡ್ಯಾನ್ಸ್ ಮಾಡಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಜಿಲ್ಲಾ ಸುದ್ದಿಗಳನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ...
ಗಣಪತಿಯ ಮೆರವಣಿಗೆ ಸಮಿತಿಯವರು ಹಾಗೂ ಸೂರ್ಯ ಧನುಷ್ಯನಿಗೆ ಹುಡುಗಿಯರ ಮಧ್ಯೆ ಡ್ಯಾನ್ಸ್ ಮಾಡದಂತೆ ತಡೆದಿದ್ದಾರೆ. ಇದನ್ನ ಮನಸ್ಸಿಗೆ ಹಚ್ಚಿಕೊಂಡ ಧನುಷ್ ಜೋಸೆಫ್ ಮತ್ತು ಇತರರೊಡನೆ ಬಂದು ಸೂರ್ಯನಿಗೆ ಚಾಕುವಿನಿಂದ ಇರಿದಿದ್ದಾನೆ. ಜಗಳ ಬಿಡಿಸಲು ಬಂದ ಕುಮಾರ್ ಗೂ ಚಾಕುವಿನಿಂದ ಇರಿಯಲಾಗಿದೆ. ಜೋಸೆಪ್ ಮತ್ತು ಧನುಷ್ ರನ್ನ ರಿಪ್ಪನ್ ಪೇಟೆ ಪೊಲೀಸ್ ಬಂಧಿಸಿದ್ದಾರೆ.