ಅಂಬಾರಿ ಹೊತ್ತ ಆನೆ ಅಸ್ವಸ್ಥ : ಎದುರಾಗಿದ್ದ ಆತಂಕ ದೂರ

By Kannadaprabha News  |  First Published Oct 9, 2019, 1:27 PM IST

ಅಂಬಾರಿ ಹೊರಬೇಕಿದ್ದ ಆನೆ ಅಸ್ವಸ್ಥಗೊಂಡಿದ್ದು ಕೆಲ ಕಾಲ ಆತಂಕ ಎದುರಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿತು.


ಶಿವಮೊಗ್ಗ [ಅ.09]:  ಈ ಬಾರಿಯ ನಾಡಹಬ್ಬ ದಸರಾ ಮೆರವಣಿಯಲ್ಲಿ ಅಂಬಾರಿ ಹೊತ್ತಿದ್ದ ಸಕ್ರೇಬೈಲಿನ ಸಾಗರ್ ಆನೆಗೆ ಗಂಗಾ ಹಾಗೂ ಭಾನುಮತಿ ಸಾಥ್ ನೀಡಿದವು. 

ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಮೂರ್ತಿ ಹೊತ್ತಿದ್ದ ಸಾಗರ್‌ಗೆ ಮೆರವಣಿಗೆಯಲ್ಲಿ ಹಂಸನೃತ್ಯ, ಕರಡಿ ಮಜಲು, ಕೀಲು ಕುದುರೆ, ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ತಟ್ಟಿರಾಯ, ನಂದಿಕೋಲು, ಕೇರಳ ಚಂಡೆ, ಯಕ್ಷಗಾನ ವೇಷ ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ಮೆರವಣಿಗೆ ಯು ಬನ್ನಿ ಮುಡಿಯುವ ಹಳೇ ಜೈಲು ಆವರಣಕ್ಕೆ ಸಾಗಿಬಂತು. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆನೆ ಅಸ್ವಸ್ಥ : ದಸರಾ ಮೆರವಣಿಗೆಗೆ ಕ್ಷಣ ಗಣನೆ ಇರುವಾಗಲೇ ಜಂಬೂಸವಾರಿ ಹೊರುವ ಸಾಗರ ಭೇದಿ ಯಿಂದ ಅಸ್ವಸ್ಥನಾಗಿದ್ದರಿಂದಾಗಿ ಮುಂದೇನು ಎಂಬ ಯೋಜನೆಯಲ್ಲಿ ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣ ವಾಗಿತ್ತು. 

ನಂತರ ಸಾಗರ್‌ಗೆ ಡಾ. ವಿನಯ್ ಅವರು ಚಿಕಿತ್ಸೆ ನೀಡಿದರು. ನಂತರ ವೈದ್ಯರ, ಮಾವುತರ ಉಪಚಾರದಿಂದ ಚೇತರಿಸಿ ಕೊಂಡ ಸಾಗರ್ 3.5 ಕಿ.ಮೀ ಚಾಮುಂಡೇ ಶ್ವರಿ ವಿಗ್ರಹ ಹೊತ್ತು ಯಾವುದೇ ತೊಂದರೆ ಇಲ್ಲದೆ ಸಂಚರಿಸಿ ಉತ್ಸವವನ್ನು ಯಶಸ್ವಿಗೊಳಿಸಿದೆ.

click me!