ಬಿಜೆಪಿ ಟಾಪ್ ಲೀಡರ್ ಸೇವಕ: ನೋಡಿ ಲಾಸ್ಟ್ ಲೀಡರ್ ಧಿಮಾಕ!

By Web Desk  |  First Published Oct 12, 2019, 3:44 PM IST

ಮರವಿದ್ದರೆ ಬದುಕು, ಮರವಿದ್ದರೆ ಆಯುಷ್ಯ ಮತ್ತು ಹಸಿರೇ ಉಸಿರು ಅಂತೆಲ್ಲ ತಮ್ಮ ನಾಯಕ ನರೇಂದ್ರ ಮೋದಿ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಬಿಜೆಪಿ ಕಾರ್ಯಕರ್ತ ಮರ ಕಡಿಯುತ್ತೇನೆ ಏನ್ ಮಾಡ್ತೀಯಾ ಮಾಡು ಎಂದು ಅರಣ್ಯ ಅಧಿಕಾರಿಗಳಿಗೆ ಅವಾಜ್ ಹಾಕಿರುವ ಘಟನೆ ನಡೆದಿದೆ.


ಶಿವಮೊಗ್ಗ, (ಅ.12): ಮರ ಬೆಳೆಸಿ, ಅರಣ್ಯ ಉಳಿಸಿ ಅಂತೆಲ್ಲಾ ಬಿಜೆಪಿ ಟಾಪ್ ಲೀಡರ್  ಸಾರಿ-ಸಾರಿ ಹೇಳುತ್ತಿದ್ದಾರೆ. ಆದ್ರೆ, ಇಲ್ಲೊಬ್ಬ  ಲಾಸ್ಟ್ ಲೀಡರ್  ಅರಣ್ಯ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾನೆ.

ಶಿವಮೊಗ್ಗದ ಶಂಕರ ವಲಯ ಅರಣ್ಯ ವ್ಯಾಪ್ತಿಯ ಅರಣ್ಯಾಧಿಕಾರಿಗೆ ಬಿಜೆಪಿ ಯುವ ಮುಖಂಡನೋರ್ವ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದು ಕಡೆ ತಮ್ಮದೇ ಪಕ್ಷದ ನಾಯಕ ನರೇಂದ್ರ ಮೋದಿ ನಾನು ಪ್ರದಾನ ಸೇವಕ ಅಂತೆಲ್ಲ ಸ್ವತಃ ಅವರೇ ಕಸಗೂಡಿಸುತ್ತಾರೆ. ಆದ್ರೆ, ಅದೇ ಪಕ್ಷದ ಯುವ ಮುಖಂಡನೋರ್ವ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಇಂತವರೇ ತಮ್ಮ ಪ್ರದಾನ ಸೇವಕನ ಮರ್ಯಾದೆ ತೆಗೆಯುತ್ತಾರೆ.

ನಡೆದಿದ್ದೇನು?
ಗಾಜನೂರಿನ ಗಣಪತಿ ದೇವಸ್ಥಾನದ ಮುಂಭಾಗದಲ್ಲಿದ್ದ ಮಾವಿನ ಮರವನ್ನು ತುಂಗಾ ಮೇಲ್ದಂಡೆ ಯೋಜನೆಯ ಎಇಇ ಕುಮಾರಸ್ವಾಮಿ ಎಂಬವರು ಕಡಿಸಿದ್ದರು. ಈ ಸಂಬಂಧ ಎಇಇ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ನೋಟಿಸ್ ನೀಡಿತ್ತು.

ಇದರಿಂದ ಆಕ್ರೋಶಗೊಂಡ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿರಾಜ್, ವಲಯ ಅರಣ್ಯಾಧಿಕಾರಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾನೆ. 

‘ನೀನು ಸಸ್ಪೆಂಡ್ ಆಗುವುದು ಗ್ಯಾರಂಟಿ. ಮನೆಗೆ ನುಗ್ಗುತ್ತೇವೆ. ನಾನು ಸಾವಿರ ಮರ ಕಡಿಯುತ್ತೇನೆ, ಏನು ಮಾಡ್ತೀಯಾ ಮಾಡು. ನಮ್ಮದೇ ಸರ್ಕಾರ ಇರೋದು ಸರ್ಕಾರಿ ಸಂಬಳಕ್ಕೆ ಕೆಲಸ ಮಾಡುತ್ತಿರುವ ನಿನಗೆ ಇಷ್ಟೊಂದು ಕೊಬ್ಬಾ’ ಎಂದು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದ ಅಧಿಕಾರಿಗೆ ಅವಾಜ್ ಹಾಕಿದ್ದಾನೆ.

"

ಇದೀಗ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಬಿಜೆಪಿ ಯುವ ಮುಖಂಡನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಲ್ಲದೆ ತುಂಗಾ ನಗರ ಠಾಣೆಯಲ್ಲಿ ಬೆದರಿಕೆ ಹಾಗು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಡಿ ಬಿಜೆಪಿ ಯುವ ಮುಖಂಡ ಗಿರಿರಾಜ್ ವಿರುದ್ಧ ದೂರು ದಾಖಲಾಗಿದೆ.

click me!