ರಾತ್ರಿ ಕಸ ಎಸೆಯುವವರನ್ನೇ ಕಾಯ್ತಾರೆ ಇವ್ರು : ಎಚ್ಚರ !

By Kannadaprabha News  |  First Published Oct 19, 2019, 12:14 PM IST

ಕಸದ ಗಾಡಿಗೆ ಕಸ ನೀಡದೇ ರಾತ್ರಿ ವೇಳೆ ರಸ್ತೆ ಬದಿ ಕಸ ಎಸೆಯುತ್ತೀರಾ ? ಹಾಗಾದ್ರೆ ಎಚ್ಚರ. ಇವರು ನಿಮ್ಮನ್ನೇ ಕಾಯುತ್ತಾ ಇರ್ತಾರೆ 


ಶಿವಮೊಗ್ಗ (ಅ.19):  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಅಸಮರ್ಪಕವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸ್ವಚ್ಛತೆ ವಿಷಯದಲ್ಲಿ ಕಣ್ಣಿಗೆ ಕಾಣುವಂತಹ ಬದಲಾವಣೆ ಉಂಟಾಗಬೇಕು ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ, ಕಸ ವಿಲೇವಾರಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ಸೂಚನೆ ನೀಡಿದರು.

Tap to resize

Latest Videos

ರಾತ್ರಿ ಕಸ ಎಸೆಯುವವರ ವಿರುದ್ಧ ಕಾರ್ಯಾಚರಣೆ

ಮುಂಜಾನೆ ಬರುವ ನಗರಪಾಲಿಕೆ ಕಸದ ವಾಹನಕ್ಕೆ ಕಸ ಕೊಡದ ಕೆಲವರು ರಾತ್ರಿ ವೇಳೆಯಲ್ಲಿ ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುವವರ ವಿರುದ್ಧ ಪಾಲಿಕೆ ಅಧಿಕಾರಿಗಳು ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಗುರುವಾರ ರಾತ್ರಿ ನಗರದ ವಿವಿಧ ಭಾಗಗಳಲ್ಲಿ ವಿವಿಧ ತಂಡಗಳಲ್ಲಿ ಗಸ್ತು ತಿರುಗಿದ ಪಾಲಿಕೆ ಅಧಿಕಾರಿಗಳು ಸುಮಾರು 20 ಪ್ರಕರಣಗಳನ್ನು ಪತ್ತೆ ಹಚ್ಚಿದರು.

ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು... 

ಮೊದಲ ಬಾರಿಗೆ ಇವರಿಗೆ ಎಚ್ಚರಿಕೆ ನೀಡಿ ಬಿಡಲಾಗಿದೆ. ಈ ರೀತಿ ಮಾಡದಂತೆ ಬುದ್ದಿ ಹೇಳಲಾಗಿದೆ. ಪುನಃ ಇದೇ ರೀತಿಯ ತಪ್ಪನ್ನು ಮಾಡಿದರೆ ಅವರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಬಡಾವಣೆಗಳಲ್ಲಿ ನಿತ್ಯ ಈ ರೀತಿಯ ಬೀಟಿಂಗ್‌ ಮಾಡಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿದ್ದು, ರಾತ್ರಿ ಕಸ ಹಾಕುವವರು ಎಚ್ಚೆತ್ತುಕೊಳ್ಳಬೇಕಾಗಿದೆ. ಬದಲಾಗಿ ಮುಂಜಾನೆ ಬರುವ ಕಸದ ಗಾಡಿಗೆ ಕಸ ನೀಡುವ ಜಾಗೃತಿಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ಹೇಳಿದರು.

click me!