ಸರ್ಕಾರಿ ನೌಕರರಿಗೆ ದೀಪಾವಳಿ ಶಾಕ್ ನೀಡಿದ BSY

By Web Desk  |  First Published Oct 25, 2019, 11:45 PM IST

ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರಿಗೆ ದೀಪಾವಳಿ ರಜೆ ಇಲ್ಲ/ ರಜೆ ರದ್ದು ಮಾಡಲು ಜಿಲ್ಲಾಧಿಕಾರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ/ ನೆರೆ ಪರಿಹಾರದಲ್ಲಿ ಎಲ್ಲರೂ ತೊಡಗಿಕೊಳ್ಳಲು ಸೂಚನೆ


ಶಿವಮೊಗ್ಗ[ಅ. 25]  ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ದೀಪಾವಳಿ ರಜೆ ಇಲ್ಲವಾಗಿದೆ. ಸಿಎಂ ಯಡಿಯೂರಪ್ಪ, ಸೂಚನೆ ಮೇರೆಗೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ನೀಡಿದ್ದ ರಜೆ ರದ್ದು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಳೆ ಅನಾಹುತದ ಅನಿವಾರ್ಯ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ  ಸೂಚನೆ ನೀಡಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದ್ದು ಇನ್ನಷ್ಟು ಕೆಲಸ ಮಾಡಬೇಕಾದ ಅನಿವಾರ್ಯದಲ್ಲಿದೆ.  ಜಿಲ್ಲಾಧಿಕಾರಿ ಜತೆ ನಡೆದ ವಿಡಿಯೋ ಸಂವಾದದಲ್ಲಿ ಸಿಎಂ ರಜೆ ರದ್ದು ಮಾಡಲು ಸೂಚನೆ ನೀಡಿದ್ದಾರೆ.

Tap to resize

Latest Videos

ಸೂಚನೆ ಉಲ್ಲಂಘಿಸಿ ಜಿಲ್ಲಾ ಕೇಂದ್ರ ತೊರೆಯುವ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸಿಎಂ ಖಡಕ್ ಸೂಚನೆ ರವಾನಿಸಿದ್ದಾರೆ.

ಪೇದೆಗಳ ಅಮಾನತು:  ಮಟ್ಕಾ ಬಗ್ಗೆ ಮಾಹಿತಿ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಇಬ್ಬರು ಕ್ರೈಂ ಪೇದೆಗಳನ್ನು ಅಮಾನತು ಮಾಡಲಾಗಿದೆ. ಶಿವಮೊಗ್ಗದ ಕೋಟೆ ಠಾಣೆಯ ಪೇದೆ ರಾಮಕೃಷ್ಣ, ಭದ್ರಾವತಿಯ ಹೊಸಮನೆ ಠಾಣೆಯ ಪೇದೆ ರಂಗನಾಥ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಶಿವಮೊಗ್ಗ ಎಸ್ ಪಿ ಶಾಂತರಾಜ್ ಆದೇಶ ನೀಡಿದ್ದಾರೆ. ಈ ಎರಡು ಠಾಣೆಯ ವ್ಯಾಪ್ತಿಯಲ್ಲಿ ಆಕ್ರಮವಾಗಿ ನಡೆಯುತ್ತಿದ್ದ ಓಸಿ ಅಡ್ಡೆಗಳ ಮೇಲೆ ಎಸ್ಪಿ ಸೂಚನೆ ಮೇರೆಗೆ ಸಿಪಿಐ ಅಭಯ ಪ್ರಕಾಶ್ ದಾಳಿ ನಡೆಸಿ ದಂಗೆಕೋರರ ಬಂಧನ ಮಾಡಿದ್ದರು. ಅದಾದ ಮೇಲೆ ಈ ಆದೇಶ ನೀಡಲಾಗಿದೆ.'

 

click me!