ಹೊಸನಗರ: ರಾಶ್ ಡ್ರೈವಿಂಗ್ ಮಾಡಿ ಅಪಘಾತ ಮಾಡ್ತಾಳೆ, ಪತ್ನಿ ವಿರುದ್ಧವೇ ದೂರು ಕೊಟ್ಟ ಪತಿ

By Web Desk  |  First Published Nov 27, 2019, 7:50 PM IST

ಅಡ್ಡಾದಿಡ್ಡಿ ಕಾರು ಚಾಲನೆ/ ಪತ್ನಿ ವಿರುದ್ಧವೇ ದೂರು ದಾಖಲಿಸಿದ ಪತಿ/ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಪ್ರಕರಣ/ ತನ್ನ ಕುಟುಂಬಸ್ಥರಿಗೆ ಗಾಯಗಳಾಗಿದ್ದು ಕ್ರಮ ಜರುಗಿಸಬೇಕೇಂದು ಕೋರಿದ ಪತಿರಾಯ


ಹೊಸನಗರ (ನ.27)   ವಾಹನವನ್ನು ಯದ್ವಾತದ್ವಾ ಚಾಲನೆ ಮಾಡಿ ಅಪಘಾತ ಪತ್ನಿಯ ವಿರುದ್ಧವೇ ಪತಿ ಮಹಾಶಯ ದೂರು ದಾಖಲಿಸಿದ್ದಾರೆ.

ಘಟನೆ ಶಿವಮೊಗ್ಗ ಜಿಲ್ಲೆ  ಹೊಸನಗರದಲ್ಲಿ ಮಂಗಳವಾರ ಘಟನೆ ನಡೆದಿದೆ. ನಾಗರಾಜ್ ಎಂಬುವರು ತನ್ನ ಪತ್ನಿ ಮಂಜುಳ  ವಿರುದ್ದ ದೂರು ದಾಖಲಿಸಿದ್ದು, ಪತ್ನಿ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ  ನನ್ನ ಮಗ, ಮಗಳು ಹಾಗೂ ನಾದಿನಿಗೆ ಗಾಯಗಳಾಗಿವೆ. ಈಗಾಗಿ ತನ್ನ ಪತ್ನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಾಗರಾಜ್ ಒತ್ತಾಯಿಸಿದ್ದಾರೆ.

Tap to resize

Latest Videos

ಜಸ್ಟ್ ಬಚಾವ್: ಈ ಅಪಘಾತದ ದೃಶ್ಯಾವಳಿ ಹೇಳುವ ಕತೆ ನೋಡಿ

ಮಂಗಳವಾರ ಬೆಳಿಗ್ಗೆ ಉಡುಪಿಯ ನಿವಾಸಿ ನಾಗರಾಜ್ ತಮ್ಮ ಭಾವ ಪ್ರಭಾಕರ ಮೆಸ್ತಾರವರ ಕಾರಿನಲ್ಲಿ ಸಾಗರದಲ್ಲಿರುವ ತನ್ನ ಪತ್ನಿಯ ಸಹೋದರಿಯ ಮಗಳ ಮನೆಗೆ ತೆರಳುತ್ತಿದ್ದರಂತೆ. ಇವರು ಕುಂದಾಪುರ, ಸಿದ್ದಾಪುರ, ಹೊಸಂಗಡಿ, ನಗರ ಮೂಲಕ ಸಾಗುವಾಗ ಪತ್ನಿ ಮಂಜುಳಾ ಅಜಾಗರೂಕತೆ ಹಾಗೂ ದುಡುಕಿನಿಂದಾಗಿ ಕಾರು ಚಲಾಯಿಸಿದ ಪರಿಣಾಮ ಹೊಸನಗರದ ರಾಮಚಂದ್ರಪುರ ಗ್ರಾಮದ ಶರಾವತಿ ಸೇತುವೆಯ ಬಳಿ ಕಾರು ಹಳ್ಳಕ್ಕೆ ಬಿದ್ದಿದೆ.

ಇನ್ನು ಪತ್ನಿಯ ಅಜಾಗರೂಕತೆಯಿಂದ ಕುಟುಂಬದ ಸದಸ್ಯರಿಗೆ ಗಾಯಗಳಾಗಿವೆ.  ಹೀಗಾಗಿ ಆಕೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಅಂತಾ ನಾಗರಾಜ್ ದೂರು ದಾಖಲಿಸಿದ್ದು, ಎಫ್ಐಆರ್ ಕೂಡ ದಾಖಲಿಸಿದ್ದಾರೆ.

click me!