ಸಾಗರದಿಂದ ಸೊರಬಕ್ಕೆ ಹೊರಟ ಹೈಸ್ಕೂಲ್ ವಿದ್ಯಾರ್ಥಿನಿ ನಿಗೂಢ ಕಣ್ಮರೆ

By Web Desk  |  First Published Oct 17, 2019, 7:37 PM IST

ಸೊರಬದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಬಾಲಕಿ ನಾಪತ್ತೆ/ ಸೊರಬ ಪೊಲೀಶ್ ಠಾಣೆಯಲ್ಲಿ ಪ್ರಕರಣ ದಾಖಲು/ ರಜೆ ಮುಗಿಸಿ ಸಾಗರದ ಮನೆಯಿಂದ ಸೊರಬದ ಹಾಸ್ಟೆಲ್ ಗೆ ತೆರಳುತ್ತೇನೆ ಎಂದಿದ್ದವಳು ನಾಪತ್ತೆ


ಶಿವಮೊಗ್ಗ(ಅ.17)ಸೊರಬ ಪಟ್ಟಣದ ಹೊರವಲಯದ ಅಮರಜ್ಯೋತಿ ಆಂಗ್ಲ ಮಾಧ್ಯಮ ಹೈಸ್ಕೂಲ್‌ನಲ್ಲಿ 9ನೇ ತರಗತಿ ಅಧ್ಯಯನ ಮಾಡುತ್ತಿದ್ದ ಅನುಷಾ ವಾಸ್ (14) ನಾಪತ್ತೆಯಾಗಿದ್ದಾಳೆ

ಮೂಲತಃ ಸಾಗರದ ಎನ್‌ಎನ್ ನಗರದ ನಿವಾಸಿಯಾಗಿದ್ದ ಹುಡುಗಿ ದಸರಾ ರಜೆ ಮುಗಿಸಿ ಶಾಲೆಗೆ ತೆರಳುವುದಾಗಿ ತಿಳಿಸಿದ್ದು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಆಕೆಯ ತಾಯಿ ಮರಿಯಾವಾಸ್ ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

ವಿಷಯ ಗೊತ್ತಾಗಿದ್ದು ಹೇಗೆ? : ಅಮರಜ್ಯೋತಿ ಸಹ ಶೈಕ್ಷಣಿಕ ಸಂಸ್ಥೆಗಳ ಅಡಿಯಲ್ಲಿ ಅಮರಜ್ಯೋತಿ ಸಂಯುಕ್ತ ಪದವಿ ಕಾಲೇಜ್, ಅಮರ ಜ್ಯೋತಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ಗಳು ಒಂದೇ ಆವರಣದಲ್ಲಿದ್ದು, ವಿದ್ಯಾರ್ಥಿನಿಯರಿಗೆ ಮರಿಯಾ ಬೋರ್ಡಿಗ್ ವಿದ್ಯಾರ್ಥಿನಿಯರ ನಿಲಯದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಎಂಥಾ ಸಾವು ಮಾರ್ರೆ.. ಹೆಣ್ಮಕ್ಕಳ ಒಳಉಡುಪು ಕಳ್ಳತನ ಮಾಡ್ತಾರೆ!

ಸುಮಾರು 80 ವಿದ್ಯಾರ್ಥಿನಿಯರು ಈ ವಸತಿ ನಿಲಯದಲ್ಲಿ ತಂಗಿದ್ದಾರೆ. ಹಾಸ್ಟೆಲ್‌ನ ಸಿಸ್ಟರ್ ಹಿಲ್ಡಗಾರ್ಡ್‌ಗೆ ತಮ್ಮ ಪುತ್ರಿ ಬಂದಿರುವುದನ್ನು ದೃಢಪಡಿಸಿಕೊಳ್ಳಲು ಕರೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದ್ದು, ಇತ್ತ ಮನೆಗೂ ಬಾರದೇ, ಶಾಲೆಗೂ ತೆರಳದೇ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ.

ವಿದ್ಯಾರ್ಥಿನಿ ಪತ್ತೆಗೆ ತಂಡ ರಚನೆ: ವಿದ್ಯಾರ್ಥಿನಿ ಅನುಷಾ ನಿಗೂಢವಾಗಿ ನಾಪತ್ತೆಯಾಗುತ್ತಿದ್ದಂತೆ ಪೊಲೀಸರು ತಂಡವನ್ನು ರಚಿಸಿ, ಅನುಷಾ ಸಾಗರದಿಂದ ಸೊರಬಕ್ಕೆ ಆಗಮಿಸಿದ ಬಸ್, ಬಸ್ ನಿಲ್ದಾಣದ ಸಿಸಿ ಕ್ಯಾಮೆರಾಗಳು ಹಾಗೂ ಆಟೋ ನಿಲ್ದಾಣ ಮತ್ತು ಶಾಲೆಯಲ್ಲಿಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅನುಷಾ ತಾಯಿ ಮರಿಯಾವಾಸ್ ನೀಡಿದ ದೂರಿನನ್ವಯ ಆಕೆ ಮನೆಯಿಂದ ತೆರಳುವಾಗ ಗುಲಾಬಿ ಬಣ್ಣದ ಚೂಡಿದಾರ ಮತ್ತು ಗುಲಾಬಿ ಬಣ್ಣದ ವೇಲ್ ಧರಿಸಿದ್ದಾರೆ. 4.5 ಅಡಿ ಎತ್ತರ, ಗೋಧಿ ಬಣ್ಣ, ದುಂಡು ಮುಖ, ಕನ್ನಡ ಮತ್ತು ಇಂಗ್ಲೀಷ್ ಸರಾಗವಾಗಿ ಮಾತನಾಡಬಲ್ಲವಳಾಗಿದ್ದು, ಈಕೆಯ ಬಗ್ಗೆ ತಿಳಿದುಬಂದಲ್ಲಿ ತಕ್ಷಣವೇ ದೂ:08184272210, ಮೊ: 9480803368 ಅಥವಾ 9480803339ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

 

click me!