ನಾಪತ್ತೆಯಾದ ದೇವರ ಕೋಣ 2 ವರ್ಷದ ಬಳಿಕ ಒಲಿದಿದ್ಯಾರಿಗೆ ?

By Web DeskFirst Published Oct 15, 2019, 12:25 PM IST
Highlights

ಎರಡು ವರ್ಷಗಳಿಂದ ಕಾಣೆಯಾದ ದೇವರ ಕೋಣಕ್ಕಾಗಿ ಗ್ರಾಮಸ್ಥರ ನಡುವೆ ಕಿತ್ತಾಟ ನಡೆದಿದ್ದು, ಇದೀಗ ಒಂದು ಗ್ರಾಮಕ್ಕೆ ಒಲಿದಿದೆ

ಶಿವಮೊಗ್ಗ [ಅ.15] :  ಐದು ವರ್ಷಗಳ ಹಿಂದೆ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ದೇವಿಗೆ ಬಿಟ್ಟ ಕೋಣ ಕಾಣೆಯಾಗಿ ಎರಡು ವರ್ಷದ ಬಳಿಕ ದಾವಣಗೆರೆ ಜಿಲ್ಲೆಯ  ಹೊನ್ನಾಳಿ ಬಳಿಯ ಮತ್ತಿಕೊಪ್ಪದ ಬಳಿ ಪತ್ತೆಯಾಗಿದೆ.

ಈ ಕೋಣಕ್ಕೆ ಹಾರನಹಳ್ಳಿ ಮತ್ತು ಬೇಲಿ ಮಲ್ಲೂರು ಗ್ರಾಮಸ್ಥರ ನಡುವೆ ತಿಕ್ಕಾಟ ನಡೆದು. ದೇವರ ಕೋಣಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಳಿಕ ಗ್ರಾಮ ಪಂಚಾಯ್ತಿಯಲ್ಲಿ ಪ್ರಕರಣ ಬಗೆಹರಿದಿದೆ.   

ದೇವರ ಕೋಣದ ವಿಚಾರವಾಗಿ ನಡದ ಗ್ರಾಮಸ್ಥರ ನಡುವಿನ ಗಲಾಟೆ ಇತ್ಯರ್ಥವಾಗಿದ್ದು, ಬಳಿಕ ಹಾರ್ನಳ್ಳಿ ಗ್ರಾಮಸ್ಥರಿಗೆ ಕೋಣ ಒಲಿದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಕೋಣಕ್ಕಾಗಿ ಪಂಚಾಯ್ತಿ ನಡೆದಾಗ ಹಾರನಹಳ್ಳಿ ಯವರು ಕಾಲಿಗೆ ಗೆಜ್ಜೆ ಹಾಗೂ ಹಚ್ಚೆಯ ಮೂಲಕ ಕೋಣ ನಮ್ಮದು ಎಂದು ಪ್ರತಿಪಾದಿಸಿದ ಪರಿಣಾಮ ಕೋಣ ಇವರಿಗೆ ಲಭಿಸಿದೆ. 

ಎರಡು ವರ್ಷಗಳಿಂದ ದೇವರಿಗೆ ಬಿಟ್ಟಿದ್ದ ಈ ಕೋಣ ಕಾಣೆಯಾಗಿತ್ತು. ಸಾಕಷ್ಟು ಹುಡುಕಿದ್ದರೂ ಪತ್ತೆಯಾಗಿರಲಿಲ್ಲ. ಬಳಿಕ ಪತ್ತೆಯಾದ ಕೋಣವನ್ನು ವಶಕ್ಕೆ ಪಡೆದಿರುವ ಹಾರ್ನಳ್ಳಿ ಗ್ರಾಮಸ್ಥರು ಇದೀಗ ಎಕೆ ಕಾಲೋನಿಯಲ್ಲಿ ಇರಿಸಿದ್ದಾರೆ. 

click me!