ವೈಯಕ್ತಿಕ ಕಾರಣಗಳಿಗೆ ಗಂಡ ಹೆಂಡತಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣು| ಕುಟುಂಬದವರೆಲ್ಲಾ ಸೇರಿ ತೋಟಕ್ಕೆ ಊಟಕ್ಕೆ ಹೋಗುವಾಗ ಮಧ್ಯಾಹ್ನ ಗಂಡ ಸಂತೋಷ್ ಮತ್ತು ಹೆಂಡತಿ ಪಾರ್ವತಿ ತಡವಾಗಿ ಬರುವುದಾಗಿ ತಿಳಿಸಿ ಕುಟುಂಬದವರನ್ನ ತೋಟಕ್ಕೆ ಕಳುಹಿಸಿದ್ದರು| ಮನೆಯವರೆಲ್ಲಾ ಊಟ ಮುಗಿಸಿಕೊಂಡು ವಾಪಸ್ ಮನೆಗೆ ಬಂದರೂ ಸಂತೋಷ್ ಮತ್ತು ಪಾರ್ವತಿ ಮನೆಯಿಂದ ಹೊರಬಂದರಲಿಲ್ಲ| ಸಂತೋಷ್ ತಾಯಿ ಕಿಟಕಿಯಿಂದ ನೋಡಿದಾಗ ಇಬ್ಬರೂ ಒಂದೇ ಸೀರೆಗೆ ನೇಣು ಹಾಕಿಕೊಂಡಿದ್ದರು|
ಶಿವಮೊಗ್ಗ(ಅ.14): ವೈಯಕ್ತಿಕ ಕಾರಣಗಳಿಗೆ ಗಂಡ ಹೆಂಡತಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಅ. 13 ರಂದು ನಡೆದಿದೆ ಜಿಲ್ಲೆಯ ಅಗದಳ್ಳಿ ಕ್ಯಾಂಪ್‌ನಲ್ಲಿ ನಡೆದಿದೆ.
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರನ್ನು ಸಂತೋಷ್ ಮತ್ತು ಪಾರ್ವತಿ ಎಂದು ಗುರುತಿಸಲಾಗಿದೆ. ಕುಟುಂಬದವರೆಲ್ಲಾ ಸೇರಿ ತೋಟಕ್ಕೆ ಊಟಕ್ಕೆ ಹೋಗುವಾಗ ಮಧ್ಯಾಹ್ನ ಗಂಡ ಸಂತೋಷ್ ಮತ್ತು ಹೆಂಡತಿ ಪಾರ್ವತಿ ತಡವಾಗಿ ಬರುವುದಾಗಿ ತಿಳಿಸಿ ಕುಟುಂಬದವರನ್ನ ತೋಟಕ್ಕೆ ಕಳುಹಿಸಿದ್ದರು ಎನ್ನಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮನೆಯವರೆಲ್ಲಾ ಊಟ ಮುಗಿಸಿಕೊಂಡು ವಾಪಸ್ ಮನೆಗೆ ಬಂದರೂ ಸಂತೋಷ್ ಮತ್ತು ಪಾರ್ವತಿ ಮನೆಯಿಂದ ಹೊರಬಂದರಲಿಲ್ಲ. ಸಂತೋಷ್ ತಾಯಿ ಕಿಟಕಿಯಿಂದ ನೋಡಿದಾಗ ಇಬ್ಬರೂ ಒಂದೇ ಸೀರೆಗೆ ನೇಣು ಹಾಕಿಕೊಂಡಿದ್ದರು.
ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಅಗದಳ್ಳಿ ಕ್ಯಾಂಪ್‌ನಲ್ಲಿ ಸಂತೋಷ್ ತನ್ನ ಪತ್ನಿ ಪಾರ್ವತಿ ಮತ್ತು ತಾಯಿಯೊಂದಿಗೆ ವಾಸವಾಗಿದ್ದರು. ಮದುವೆ ಆಗಿ ಒಂದುವರೆ ವರ್ಷ ಆಗಿತ್ತು ಮಕ್ಕಳಿರಲಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂತೋಷ್ ಅವರ ಸಹೋದರ ಈಶ್ವರ್ ಅವರು, ನನಗೂ ವಿಷಯ ಗೊತ್ತಿರಲಿಲ್ಲ. ಆದರೆ ತನ್ನ ಸಹೋದರ ಮತ್ತು ಅತ್ತಿಗೆ ಈ ರೀತಿ ಮಾಡಿಕೊಳ್ಳಲು ವೈಯಕ್ತಿಕ ಸಮಸ್ಯೆಯೇ ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.