BPL ಕಾರ್ಡು ಹೊಂದಿರುವವರೆ ಎಚ್ಚರ!

By Kannadaprabha NewsFirst Published Oct 13, 2019, 12:03 PM IST
Highlights

ಬಿಪಿಎಲ್  ಕಾರ್ಡುದಾರರೆ ಎಚ್ಚರ.. ನಿಮ್ಮಕಾರ್ಡ್ ನಕಲಿಯೇ ಪರೀಕ್ಷಿಸಿಕೊಳ್ಳಿ

ಶಿಕಾರಿಪುರ [ಅ.13]:  ಅರ್ಹತೆ ಇಲ್ಲದಿದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬ ಪತ್ತೆ ಹಚ್ಚುವುದಕ್ಕಾಗಿ ವಿಶೇಷ ಕಾರಾರ‍ಯಚರಣೆ ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣದಲ್ಲಿ ಆರಂಭಿಸಲಾಗಿದ್ದು, ನಾಗರಿಕರು ಸಹಕಾರ ನೀಡಬೇಕು ಎಂದು ತಹಸೀಲ್ದಾರ್‌ ಕವಿರಾಜ್‌ ಮನವಿ ಮಾಡಿದ್ದಾರೆ.

ಪಟ್ಟಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಬಿಪಿಎಲ್‌ ಕಾರ್ಡ್‌ ಇವೆ, ಅನರ್ಹರೂ ಕಾರ್ಡ್‌ ಹೊಂದಿರುವ ಕಾರಣಕ್ಕಾಗಿ ಪತ್ತೆಕಾರ‍್ಯ ಆರಂಭಿಸಲಾಗಿದೆ. ಗ್ರಾಮ ಲೆಕ್ಕಿಗರು, ಪುರಸಭೆ ಸಿಬ್ಬಂದಿ, ರೇಷನ್‌ ಅಂಗಡಿ ಸಿಬ್ಬಂದಿ ಸರ್ವೆ ಕಾರ‍್ಯದಲ್ಲಿ ಭಾಗವಹಿಸಲಿದ್ದಾರೆ. ಮನೆ ಮನೆಗೆ ತೆರಳಿ ದಾಖಲೆ ಸಂಗ್ರಹಿಸುವ ಅವರು ಅನರ್ಹರ ಕಾರ್ಡ್‌ ರದ್ದುಗೊಳಿಸುವ ಜೊತೆಗೆ ಕ್ರಿಮಿನಲ್‌ ಕೇಸ್‌ ದಾಖಲಿಸಲು ಪಟ್ಟಿಯನ್ನು ಮೇಲಾಧಿಕಾರಿ ಕಚೇರಿಗೆ ಸಲ್ಲಿಸಲಿದ್ದಾರೆ. ಈ ಹಿಂದೆ ಅನರ್ಹರು ಕಾರ್ಡ್‌ ಸೆರೆಂಡರ್‌ ಮಾಡುವುದಕ್ಕೆ ಪ್ರಕಟಣೆ ನೀಡಿ ಕಾಲಾವಕಾಶ ನೀಡಿದ್ದು, ಇದೀಗ ತಾಲೂಕು ಆಡಳಿತ ಅನರ್ಹ ಕಾರ್ಡ್‌ ಪತ್ತೆಕಾರ‍್ಯಕ್ಕೆ ಮುಂದಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಮಾಣ ಪತ್ರ:  ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣದ ನಿವಾಸಿಗಳಿಗೆ ಕಂದಾಯ ಇಲಾಖೆ ನೀಡುವ ಜಾತಿ, ಆದಾಯ, ನಿವಾಸಿ, ವಂಶವೃಕ್ಷ ಸೇರಿ ಹಲವು ಬಗೆಯ ಪ್ರಮಾಣ ಪತ್ರ ತಕ್ಷಣವೆ ನೀಡುವುದಕ್ಕಾಗಿ ಕಂದಾಯ ಇಲಾಖೆ ಶಿರಾಳಕೊಪ್ಪ, ಶಿಕಾರಿಪುರ ಪಟ್ಟಣದಲ್ಲಿ ಸರ್ವೇಕಾರ‍್ಯ ನಡೆಸಲಿದೆ. ತಮ್ಮ ಮನೆ ಬಾಗಿಲಿಗೆ ಆಗಮಿಸುವ ಅಧಿಕಾರಿಗಳಿಗೆ ತಮ್ಮ ಕುಟುಂಬದ ಸದಸ್ಯರ ವಿವರ, ಈ ಹಿಂದೆ ಪಡೆದಿರುವ ಜಾತಿ, ಆದಾಯ ಪ್ರಮಾಣ ಪತ್ರ, ರೇಷನ್‌ ಕಾರ್ಡ್‌ ದಾಖಲೆ ನೀಡಬೇಕು ಎಂದು ತಿಳಿಸಿದರು.

ಸಿಬ್ಬಂದಿ ದಾಖಲೆ ವಿವರ ಪಡೆದು ಅದನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸುತ್ತಾರೆ. ನಂತರದಲ್ಲಿ ಪಟ್ಟಣದ ನಿವಾಸಿಗಳು ಜಾತಿ, ಆದಾಯ, ನಿವಾಸಿ ಪ್ರಮಾಣ ಪತ್ರ ತಕ್ಷಣವೆ ಸಿಗುವ ವ್ಯವಸ್ಥೆ ಆಗುತ್ತದೆ. ಈಗ ಯಾವುದೇ ಪ್ರಮಾಣ ಪತ್ರ ಪಡೆಯಲು 21 ದಿನ ಕಾಯುವ ಅನಿವಾರ‍್ಯತೆ ಇದ್ದು, ಅದರಿಂದ ನಾಗರಿಕರು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಅದಕ್ಕಾಗಿ ಹೊಸ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಿದ್ದು, ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

click me!