ಭೂಮಿಯಲ್ಲಿ ಸೊಳ್ಳೆಗಳೇ ಇಲ್ಲವೆಂದಾದರೆ ಏನಾಗುತ್ತೆ? ವಿಜ್ಞಾನಿಗಳು ಕೊಟ್ಟ ಅಚ್ಚರಿಯ ಉತ್ತರ!

By Suvarna News  |  First Published Mar 20, 2022, 9:14 AM IST

* ಸೊಳ್ಳೆಗಳಿಂದ ಅನೇಕ ರೋಗಗಳು ಹರಡುವ ಭೀತಿ

* ಸೊಳ್ಳೆಗಳೇ ಇಲ್ಲವೆಂದಾದರೆ ಏನಾಗುತ್ತೆ?

* ಅಬ್ಬಬ್ಬಾ ಮನುಷ್ಯನೇ ನಾಳೆ ಇಲ್ಲವಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವಿಜ್ಞಾನಿಗಳು


ಹೋಳಿ ಹಬ್ಬ ಮುಗಿದು ಬೇಸಿಗೆ ಕಾಲ ಶುರುವಾಗಿದೆ. ಈ ಮಧ್ಯೆ, ದೇಶದಲ್ಲಿ ಸೊಳ್ಳೆಗಳಿಂದ ಉಂಟಾಗುವ ರೋಗಗಳು ಹರಡಲು ಪ್ರಾರಂಭಿಸಿವೆ. ಆಸ್ಪತ್ರೆಗಳಲ್ಲಿ ಡೆಂಗ್ಯೂ, ಚಿಗುನ್‌ಗುನ್ಯಾ, ಮಲೇರಿಯಾ ಇತ್ಯಾದಿ ರೋಗಿಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಸೊಳ್ಳೆಗಳ ಕಾಟದಿಂದ ಪ್ರಪಂಚದಲ್ಲಿ ಎಷ್ಟೋ ಮಂದಿ ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಿಂದ ತುರಿಕೆಯಂತಹ ಸಮಸ್ಯೆಯಾದರೂ ಕಾಡುತ್ತದೆ. ಜೊತೆಗೆ ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳು ಬರುತ್ತವೆ. ಹೀಗಿರುವಾಗ ಸೊಳ್ಳೆಗಳ ನಿರ್ಮೂಲನೆ ಮಾಡಿದರೆ ಏನಾಗಬಹುದು ಎಂಬ ಪ್ರಶ್ನೆ ಕಿರಿಯರಿಂದ ಹಿರಿಯರ ಮನಸ್ಸಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ಕಾಡಿದ್ದುಂಟು.  ಹಾಗಾದ್ರೆ ಈ ವಿಷಯದಲ್ಲಿ ವಿಜ್ಞಾನ, ವಿಜ್ಞಾನಿಗಳು ಏನು ಹೇಳುತ್ತಾರೆ?

ಸೊಳ್ಳೆಗಳಿಂದಾಗಿ ಪ್ರಪಂಚದಲ್ಲಿ ಹೆಚ್ಚು ಸಾವು

Latest Videos

undefined

ಸೊಳ್ಳೆಗಳಿಂದ ತೊಂದರೆಗೀಡಾದ ಜನಸಾಮಾನ್ಯರು, ಸೊಳ್ಳೆಗಳಿಂದ ದೂರವಿರಲು ಬಯಸಿದರೂ, ವೈಜ್ಞಾನಿಕ ಅಧ್ಯಯನಗಳಿಗಾಗಿ ಅವುಗಳನ್ನು ಸಾಕಲಾಗುತ್ತದೆ. ಈ ಮೂಲಕ ಅವುಗಳ ಬಗ್ಗೆ ಸಂಶೋಧನೆ ಮಾಡಲಾಗುತ್ತದೆ. ಜಗತ್ತಿನಲ್ಲಿ ಹೆಚ್ಚಿನ ಸಾವುಗಳು ಸೊಳ್ಳೆಗಳಿಂದ ಸಂಭವಿಸುತ್ತವೆ ಎಂಬುವುದ ಅಚ್ಚರಿಯ ವಿಚಾರವಾದರೂ ನಿಜ. ಸೊಳ್ಳೆಗಳ ಶಕ್ತಿಯನ್ನು ತೋರಿಸಲು, ಸೊಳ್ಳೆಗಳಿಂದ ಮೃತಪಟ್ಟ ಅಲೆಕ್ಸಾಂಡರ್ ಸಾವಿನ ಉದಾಹರಣೆಯನ್ನು ಜನರು ನೀಡುತ್ತಾರೆ.

ಸೊಳ್ಳೆಗಖೆಂದರೇನು? ಹೇಗೆ ಹುಟ್ಟಿಕೊಳ್ಳುತ್ತವೆ?

ಸೊಳ್ಳೆಗಳು ಕೀಟ ಗುಂಪಿನ ಜೀವಿಗಳಾಗಿವೆ, ಅವು ನೊಣಗಳಂತಹ ಹಾರುವ ಜೀವಿಗಳಾಗಿವೆ, ಇದರಲ್ಲಿ ವಯಸ್ಕರು ಲಾರ್ವಾ ಎಂದು ಕರೆಯಲ್ಪಡುವ ಮರಿ ಸೊಳ್ಳೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾಣುತ್ತವೆ. ವಯಸ್ಕ ಸೊಳ್ಳೆಗಳು ಎರಡು ರೆಕ್ಕೆಗಳನ್ನು ಹೊಂದಿರುತ್ತವೆ, ಜೇನುನೊಣಗಳಂತೆ ನಾಲ್ಕು ಅಲ್ಲ. ಅನೇಕ ಜಾತಿಯ ಸೊಳ್ಳೆಗಳು ತಮ್ಮ ಮೊಟ್ಟೆಗಳನ್ನು ಇಡಲು ಪ್ರಾಣಿಗಳು ಮತ್ತು ಮನುಷ್ಯರ ರಕ್ತವನ್ನು ಹೀರುತ್ತವೆ.

ಹೆಣ್ಣು ಸೊಳ್ಳೆಗಳು ಮಾತ್ರ ಕಚ್ಚುತ್ತವೆ

ನಾವು ಸೊಳ್ಳೆಗಳು ಎಂದು ಕರೆಯುವ ವಾಸ್ತವವಾಗಿ 3500 ವಿವಿಧ ರೀತಿಯ ಕೀಟಗಳಿವೆ. ಎಲ್ಲಾ ವಿಭಿನ್ನವಾಗಿ ವರ್ತಿಸುತ್ತವೆ. ಹೆಚ್ಚಿನ ಸೊಳ್ಳೆಗಳು ರಾತ್ರಿಯಲ್ಲಿ ಸಕ್ರಿಯವಾಗಿರುತ್ತವೆ ಮತ್ತು ಇನನ್ಉ ಕೆಲವು ಹಗಲಿನಲ್ಲಿ ಸಕ್ರಿಯವಾಗಿರುತ್ತವೆ. ಹೀಗಿದ್ದರೂ ಹೆಣ್ಣು ಸೊಳ್ಳೆಗಳು ಮಾತ್ರ ಕಚ್ಚುತ್ತವೆ ಎಂದು ಎಲ್ಲರಿಗೂ ತಿಳಿದಿಲ್ಲ. ಹೌದು ಮೊಟ್ಟೆ ಇಡಲು ರಕ್ತದ ಅವಶ್ಯಕತೆ ಇದೆ, ಹೀಗಾಗಿ ಹೆಣ್ಣು ಸೊಳ್ಳೆಗಳಷ್ಟೇ ಕಚ್ಚುತ್ತವೆ. ಅದೇ ಸಮಯದಲ್ಲಿ, ಗಂಡು ಸೊಳ್ಳೆಗಳು ಸಸ್ಯಗಳ ಮಾಡಿ ರಸವನ್ನು ಕುಡಿಯುತ್ತವೆ.

ರೋಗಗಳು ಹೇಗೆ ಹರಡುತ್ತವೆ?

ಹೆಣ್ಣು ಸೊಳ್ಳೆಯು ಸೋಂಕಿತ ವ್ಯಕ್ತಿಯನ್ನು ಕಚ್ಚಿದಾಗ ಮತ್ತು ಅವನ ರಕ್ತವನ್ನು ಹೀರಿ ನಂತರ ಇನ್ನೊಬ್ಬ ವ್ಯಕ್ತಿಯನ್ನು ಕಚ್ಚಿದಾಗ ಸೋಖು ಹರಡುತ್ತದೆ. ಹಾಗಾಗಿಯೇ ರೋಗಗಳು ಹರಡುತ್ತವೆ. ಎಲ್ಲಾ ಸೊಳ್ಳೆಗಳಲ್ಲಿ, ಕೇವಲ 40 ವಿಧದ ಹೆಣ್ಣುಗಳು ಅಪಾಯಕಾರಿ ಏಕೆಂದರೆ ಅವು ಮನುಷ್ಯರಿಗೆ ರೋಗಗಳನ್ನು ಹರಡಲು ಕೆಲಸ ಮಾಡುತ್ತವೆ.

ಸೊಳ್ಳೆಗಳಿಂದ ಭೀತಿ

ಪ್ರಪಂಚದಲ್ಲಿ ಕಡಿಮೆ ಪ್ರಮಾಣದ ಸೊಳ್ಳೆಗಳು ಅಪಾಯಕಾರಿಯಾಗಿದ್ದರೂ, ಈ ಸೊಳ್ಳೆಗಳು ಮಲೇರಿಯಾ ಮತ್ತು ಇತರ ಮಾರಣಾಂತಿಕ ಕಾಯಿಲೆಗಳನ್ನು ಹರಡುತ್ತವೆ. ಪ್ರಪಂಚದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಆಫ್ರಿಕಾ, ಏಷ್ಯಾ ದಕ್ಷಿಣ ಮತ್ತು ಅಮೆರಿಕಾದಲ್ಲಿ ಸಾವಿರಾರು ಮಿಲಿಯನ್ ಜನರು ಸೊಳ್ಳೆಯಿಂದ ಹರಡುವ ರೋಗಗಳಿಂದ ಬಳಲುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಇಂತಹ ಪರಿಸ್ಥಿತಿಯಲ್ಲಿ ಮಲೇರಿಯಾ ಹರಡುವಿಕೆ ಕೊನೆಗೊಂಡರೆ ಜಗತ್ತು ಹೆಚ್ಚು ಆರೋಗ್ಯಕರವಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ.

ಆದರೆ ಸೊಳ್ಳೆಗಳ ಅಗತ್ಯವಿಲ್ಲ ಎನ್ನಲು ಸಾಧ್ಯವಿಲ್ಲ

ಸೊಳ್ಳೆಗಳು ಕಣ್ಮರೆಯಾದರೆ, ಅವುಗಳು ಇಲ್ಲವೆಂದಾದರೆ ಸಮಸ್ಯೆಯೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ರೋಗಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹಲವರು ಯೋಚಿಸಬಹುದು. ಆದರೆ ಸೊಳ್ಳೆಗಳು ಬಹಳ ಮುಖ್ಯ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೊಳ್ಳೆಗಳು ಅನೇಕ ಪ್ರಕ್ರಿಯೆಗಳಲ್ಲಿ ಉಪಯುಕ್ತವಾಗಿವೆ. ಸೊಳ್ಳೆಗಳು ಜೀವಿಗಳು ಆಹಾರಕ್ಕಾಗಿ ಪರಸ್ಪರ ಅವಲಂಬಿಸಿರುವ ಪರಿಸರ ವ್ಯವಸ್ಥೆಯ ಭಾಗವಾಗಿದೆ. ಇವುಗಳು ಕಣ್ಮರೆಯಾದರೆ ಅಸಮತೋಲನ ಉಂಟಾಗುತ್ತದೆ. ಅಂತಿಮವಾಗಿ ಇದು ಮಾನವಕುಲಕ್ಕೇ ಕಂಟಕವಾಗಬಹುದು ಎಂದಿದ್ದಾರೆ ವಿಜ್ಞಾನಿಗಳು. 

click me!