2100ರ ವೇಳೆಗೆ ಭೂಮಿಯ ಮೇಲೆ ಮಾನವಕುಲ ವಿನಾಶ ಖಂಡಿತ: ಪರಮಾಣು ಯುದ್ಧ, AI ದುರ್ಬಳಕೆ ಕುರಿತು ಲ್ಯಾನ್ಸೆಟ್ ಎಚ್ಚರಿಕೆ

Published : Oct 12, 2026, 02:46 PM IST
Lancet Report

ಸಾರಾಂಶ

ಕೃತಕ ಬುದ್ಧಿಮತ್ತೆಯ ದುರ್ಬಳಕೆ ಮತ್ತು ಅಣು ಯುದ್ಧಗಳಿಂದ 2100ರ ವೇಳೆಗೆ ಮಾನವ ಜನಾಂಗವೇ ನಿರ್ನಾಮವಾಗುವ ಅಪಾಯವಿದೆ ಎಂದು 'ದ ಲ್ಯಾನ್ಸೆಟ್' ವರದಿ ಎಚ್ಚರಿಸಿದೆ. ಮುಂದಿನ 75 ವರ್ಷಗಳಲ್ಲಿ ಮಾನವನ ಅಸ್ತಿತ್ವಕ್ಕೆ ಧಕ್ಕೆ ತರುವ 17 ಮಹಾ ಸಂಕಟಗಳನ್ನು ಈ ವರದಿಯಲ್ಲಿ ಗುರುತಿಸಲಾಗಿದೆ.

ಬೆಂಗಳೂರು (ಅ.12): ಕೃತಕ ಬುದ್ಧಿಮತ್ತೆಯ (AI) ಅಪಾಯಕಾರಿ ದುರ್ಬಳಕೆ ಹಾಗೂ ಭೀಕರ ಅಣು ಯುದ್ಧಗಳ (Nuclear Conflict) ಕಾರಣದಿಂದಾಗಿ 2100 ರ ವೇಳೆಗೆ ಭೂಮಂಡಲದಿಂದ ಮಾನವ ಜನಾಂಗವೇ ಸಂಪೂರ್ಣವಾಗಿ ನಿರ್ನಾಮಗೊಳ್ಳುವ (Human Extinction) ತೀವ್ರ ಆತಂಕ ಎದುರಾಗಿದೆ. ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆ 'ದ ಲ್ಯಾನ್ಸೆಟ್' (The Lancet) ನಡೆಸಿದ ಜಾಗತಿಕ ಅಪಾಯಗಳ ಸಮಗ್ರ ಮೌಲ್ಯಮಾಪನ ವರದಿಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ಮುಂದಿನ 75 ವರ್ಷಗಳಲ್ಲಿ ಮಾನವನ ಆರೋಗ್ಯ, ಜಾಗತಿಕ ಸುಸ್ಥಿರತೆ ಹಾಗೂ ಅಸ್ತಿತ್ವಕ್ಕೆ ತೀವ್ರ ಧಕ್ಕೆ ತರಬಲ್ಲ ಒಟ್ಟು 17 ಮಹಾ ಸಂಕಟಗಳನ್ನು ಗುರುತಿಸಿರುವ ಲ್ಯಾನ್ಸೆಟ್ ಕಮಿಷನ್, ಈ ಸಾಲಿನಲ್ಲಿ ಅಣು ಸಮರ ಮತ್ತು ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನೇ ಅತ್ಯಂತ ಅಪಾಯಕಾರಿ ಅಗ್ರಸ್ಥಾನದಲ್ಲಿಸಿದೆ.

ಅಣು ಸಮರ ಮತ್ತು ಎಐ ಜೈವಿಕ ಅಸ್ತ್ರಗಳ 'ಅಪೋಕಲಿಪ್ಸ್'

ವರದಿಯ ಪ್ರಕಾರ, "ಎಐ ದುರ್ಬಳಕೆಯ ಮೂಲಕ ನಿರ್ಮಿಸಲಾಗುವ ಜೈವಿಕ ಅಸ್ತ್ರಗಳು (Bioweapons) ಹಾಗೂ ಬೃಹತ್ ಅಣು ಸಮರಗಳಿಂದ ಉಂಟಾಗುವ 'ಅಣು ಕ್ಷಾಮ'ವು (Nuclear Famine) ಮುಂದಿನ 75 ವರ್ಷಗಳಲ್ಲಿ ಮಾನವಕುಲವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಭೀಕರ ಶಕ್ತಿಯನ್ನು ಹೊಂದಿವೆ' ಎಂದಿದೆ.

ಅಣು ಯುದ್ಧ ಸಂಭವಿಸಿದರೆ ವಾತಾವರಣದ ಮೇಲ್ಭಾಗಕ್ಕೆ ಭಾರಿ ಪ್ರಮಾಣದ ವಿಷಕಾರಿ ಕಣಗಳು ಚಿಮ್ಮಿ, ಸೂರ್ಯನ ಬೆಳಕನ್ನೇ ತಡೆದು ಜಗತ್ತಿನಾದ್ಯಂತ ಸಸ್ಯವರ್ಗ ನಾಶವಾಗಿ ತೀವ್ರ ಕ್ಷಾಮ ಉಂಟಾಗಲಿದೆ. ಈ ಅಪಾಯಗಳ ಸಾಧ್ಯತೆ ತೀರಾ ಕಡಿಮೆಯಿದ್ದರೂ, ಇವು ಸಂಭವಿಸಿದರೆ ಉಂಟಾಗುವ ಹಾನಿಯ ಪ್ರಮಾಣವು 'ಸಂಪೂರ್ಣ ಮಾನವಕುಲಕ್ಕೆ ಮಹಾ ವಿನಾಶ' (Apocalypse) ತರಲಿದೆ ಎಂದು ಲ್ಯಾನ್ಸೆಟ್‌ನ ಸಂಪಾದಕೀಯ ಎಚ್ಚರಿಸಿದೆ.

17 ಪ್ರಮುಖ ಮಹಾ ಸಂಕಟಗಳು ಹಾಗೂ DALYs ಲೆಕ್ಕಾಚಾರ

ಪ್ರಸ್ತುತ ದಿನಗಳ ವಿದ್ಯಮಾನಗಳ ಆಧಾರದ ಮೇಲೆ, ರೋಗ, ವೈಕಲ್ಯ ಅಥವಾ ಅಕಾಲಿಕ ಮರಣದಿಂದಾಗಿ ಎಷ್ಟು ವರ್ಷಗಳ 'ಆರೋಗ್ಯಕರ ಮಾನವ ಜೀವಿತಾವಧಿ' ನಷ್ಟವಾಗುತ್ತದೆ ಎಂಬುದನ್ನು ಅಳೆಯುವ 'ಡಾಲಿ' (DALYs - Disability-Adjusted Life Years) ಮಾದರಿಯನ್ನು ಬಳಸಿ 17 ಪ್ರಮುಖ ಅಪಾಯಗಳನ್ನು ಕಮಿಷನ್ ಪಟ್ಟಿ ಮಾಡಿದೆ. 1 ಶತಕೋಟಿಗಿಂತಲೂ ಹೆಚ್ಚು ಡಾಲಿ (DALYs) ನಷ್ಟ ಉಂಟುಮಾಡಬಲ್ಲ ಪ್ರಮುಖ ಜಾಗತಿಕ ಅಪಾಯಗಳು.

  • ಕೃತಕ ಬುದ್ಧಿಮತ್ತೆಯ (AI) ಅತ್ಯಂತ ಅಪಾಯಕಾರಿ ದುರ್ಬಳಕೆ
  • ಅಣು ಸಮರ ಮತ್ತು ತತ್ಪರಿಣಾಮದ ಕ್ಷಾಮ
  • ತೀವ್ರ ಜಾಗತಿಕ ವಾಯು ಮಾಲಿನ್ಯ (Air Pollution)
  • ಆಂಟಿಮೈಕ್ರೋಬಿಯಲ್ ನಿರೋಧಕತೆ (AMR - ಔಷಧಿಗಳು ಕೆಲಸ ಮಾಡದಿರುವುದು)
  • ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ (Childhood Malnutrition)
  • ಹವಾಮಾನ ವೈಪರೀತ್ಯ ಮತ್ತು ಮುರಿದುಬೀಳುತ್ತಿರುವ ಪರಿಸರ ವ್ಯವಸ್ಥೆ (Climate Breakdown)
  • ಸಾಂಪ್ರದಾಯಿಕ ಯುದ್ಧಗಳು ಹಾಗೂ ಸಶಸ್ತ್ರ ಸಂಘರ್ಷಗಳು
  • ಬಡ ದೇಶಗಳಿಗೆ ಶ್ರೀಮಂತ ರಾಷ್ಟ್ರಗಳು ನೀಡುವ ವಿದೇಶಿ ನೆರವು ಕಡಿತ
  • ಅತಿಯಾದ ಮದ್ಯಪಾನ ಹಾಗೂ ಧೂಮಪಾನ
  • ರಕ್ತದೊತ್ತಡ (High Blood Pressure), ಬೊಜ್ಜು (Obesity) ಹಾಗೂ ಕಳಪೆ ಮಾನಸಿಕ ಆರೋಗ್ಯ
  • ಆದಾಯ ಅಸಮಾನತೆ ಹಾಗೂ ಕಡಿಮೆ ಶಿಕ್ಷಣ ಮಟ್ಟ
  • ನೈಸರ್ಗಿಕವಾಗಿ ಉದ್ಭವಿಸುವ ಮಾರಕ ಸಾಂಕ್ರಾಮಿಕ ರೋಗಗಳು (Pandemics)

ಬಡ ರಾಷ್ಟ್ರಗಳಿಗೆ ವೈದ್ಯಕೀಯ ನೆರವು ಕಡಿತದ ಭಾರಿ ಪರಿಣಾಮ

ಅಮೆರಿಕ (US) ಹಾಗೂ ಬ್ರಿಟನ್ (UK) ಸೇರಿದಂತೆ ಜಗತ್ತಿನ ಪ್ರಮುಖ ದಾನಿ ಶ್ರೀಮಂತ ರಾಷ್ಟ್ರಗಳು ಕಳೆದ ವರ್ಷದಲ್ಲಿ ಬಡ ದೇಶಗಳಿಗೆ ನೀಡುತ್ತಿದ್ದ ಜಾಗತಿಕ ಆರೋಗ್ಯ ನೆರವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಈ ಅಂತರರಾಷ್ಟ್ರೀಯ ವೈದ್ಯಕೀಯ ನೆರವು ಕಡಿತದಿಂದಾಗಿ 2100 ರ ವೇಳೆಗೆ ಬರೋಬ್ಬರಿ 1.5 ಶತಕೋಟಿ ವರ್ಷಗಳ ಆರೋಗ್ಯಕರ ಜೀವನ ನಷ್ಟವಾಗಲಿದ್ದು, ಶೇಕಡಾ 70 ರಷ್ಟು ಭಾರಿ ಹೊಡೆತ ಆಫ್ರಿಕಾದ ಉಪ-ಸಹಾರನ್ ಪ್ರದೇಶಕ್ಕೆ ಬೀಳಲಿದೆ.

ಪರಿಹಾರವಿಲ್ಲದ ಸಮಸ್ಯೆಯಲ್ಲ, ತಕ್ಷಣದ ಕ್ರಮ ಅಗತ್ಯ

ಯುನಿವರ್ಸಿಟಿ ಕಾಲೇಜ್ ಲಂಡನ್‌ನ (UCL) ಪ್ರೊಫೆಸರ್ ಇಬ್ರಾಹಿಂ ಅಬುಬಕರ್ ಮಾತನಾಡಿ, "ಜನರನ್ನು ಭಯಬೀಳಿಸುವುದು ನಮ್ಮ ಉದ್ದೇಶವಲ್ಲ. ಈ ಪ್ರತಿಯೊಂದು 17 ಅಪಾಯಗಳಿಗೂ ಪರಿಣಾಮಕಾರಿ 'ನೈಜ ಪರಿಹಾರ ಮಾರ್ಗಗಳು' (Realistic route to act) ಇವೆ. ಜಾಗತಿಕ ನಾಯಕರು ಹಾಗೂ ನೀತಿ ನಿರೂಪಕರು ತಕ್ಷಣವೇ ಸೂಕ್ತ ನಿರ್ಧಾರ ತಳೆದರೆ ಈ ಮಹಾ ಆಪತ್ತನ್ನು ತಡೆಯಬಹುದು" ಎಂದಿದ್ದಾರೆ. ಹವಾಮಾನ ವೈಪರೀತ್ಯದ ತಾಪಮಾನ ಏರಿಕೆಯನ್ನು 4.4 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲು ಬಿಡದೆ, 1.8 ಡಿಗ್ರಿ ಸೆಲ್ಸಿಯಸ್‌ಗೆ ನಿಯಂತ್ರಿಸಿದರೆ ಬರೋಬ್ಬರಿ 1.89 ಶತಕೋಟಿ ವರ್ಷಗಳ ಆರೋಗ್ಯಕರ ಜೀವಿತಾವಧಿಯನ್ನು ಉಳಿಸಬಹುದು ಎಂದು ವರದಿ ಹೇಳಿದೆ.

ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುಯೇಷನ್ (IHME) ನಿರ್ದೇಶಕ ಹಾಗೂ ಕಮಿಷನ್ ಸಹ-ಅಧ್ಯಕ್ಷ ಪ್ರೊ. ಕ್ರಿಸ್ಟೋಫರ್ ಮುರ್ರೆ ಮಾತನಾಡಿ, ಬರ್ಲಿನ್‌ನಲ್ಲಿ ನಡೆಯಲಿರುವ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ (World Health Summit) 35 ಜಾಗತಿಕ ತಜ್ಞರನ್ನೊಳಗೊಂಡ ಈ ವರದಿಯನ್ನು ಮಂಡಿಸಲಾಗುತ್ತಿದ್ದು, ಪ್ರತಿವರ್ಷ ನೂತನ ದತ್ತಾಂಶಗಳೊಂದಿಗೆ ಈ ಅಪಾಯಗಳನ್ನು ಮರುಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದ್ದಾರ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಹಂದಿಗಳು ಚರಂಡಿ ಅಥವಾ ಕೆಸರಿನಲ್ಲಿ ಬಿದ್ದು ಹೊರಳಾಡೋದು ಏಕೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ!
ರಸ್ತೆ ಹಾಕಲು ಬಳಸುವ ಕಪ್ಪು ಡಾಂಬರು ಹೇಗೆ ತಯಾರಾಗುತ್ತೆ ಗೊತ್ತಾ? ದಿನ ಬಳಕೆ ವಿಜ್ಞಾನ ನೀವೂ ತಿಳಿಯಿರಿ!