ಇನ್ನೂ ಸಂದೇಶ ಕಳುಹಿಸದ ವಿಕ್ರಂ, ಪ್ರಜ್ಞಾನ್‌: ಚಂದ್ರನ ಮೇಲಿರುವ ಲ್ಯಾಂಡರ್‌, ರೋವರ್‌ ಎಬ್ಬಿಸಲು ಇಂದು ಇಸ್ರೋ ಯತ್ನ

By Kannadaprabha News  |  First Published Sep 23, 2023, 8:43 AM IST

ಸೆಪ್ಟೆಂಬರ್ 22ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾದ ಕಾರಣ ಲ್ಯಾಂಡರ್‌ ಮತ್ತು ರೋವರ್‌ಗಳು ಅಲ್ಲಿಂದ ಯಾವುದಾದರೂ ಸಂದೇಶ ಕಳುಹಿಸಬಹುದು ಎಂಬ ನಿರೀಕ್ಷೆಯಲ್ಲಿ ಇಸ್ರೋ ಇತ್ತು. ಆದರೆ ಶುಕ್ರವಾರ ಯಾವುದೇ ಸಂದೇಶ ರವಾನೆಯಾಗಿಲ್ಲ.


ನವದೆಹಲಿ (ಸೆಪ್ಟೆಂಬರ್ 23, 2023): ಸುಮಾರು 16 ದಿನಗಳ ಕಾಲ ಚಂದ್ರನ ಮೇಲ್ಮೈನಲ್ಲಿ ಸ್ಲೀಪ್‌ಮೋಡ್‌ನಲ್ಲಿದ್ದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಪ್ರಯತ್ನವನ್ನು ಇಸ್ರೋ ವಿಜ್ಞಾನಿಗಳು ಒಂದು ದಿನ ಮುಂದೂಡಿದ್ದಾರೆ. ಹೀಗಾಗಿ ಶುಕ್ರವಾರ ಸಂಜೆ ನಡೆಯಬೇಕಿದ್ದ ಪ್ರಯತ್ನ ಶನಿವಾರ ನಡೆಯಲಿದೆ. ಹಲವು ಕಾರಣಗಳಿಂದಾಗಿ ಶನಿವಾರಕ್ಕೆ ಮುಂದೂಡಲಾಯಿತು ಎಂದು ಇಸ್ರೋ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೆಪ್ಟೆಂಬರ್ 22ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾದ ಕಾರಣ ಲ್ಯಾಂಡರ್‌ ಮತ್ತು ರೋವರ್‌ಗಳು ಅಲ್ಲಿಂದ ಯಾವುದಾದರೂ ಸಂದೇಶ ಕಳುಹಿಸಬಹುದು ಎಂಬ ನಿರೀಕ್ಷೆಯಲ್ಲಿ ಇಸ್ರೋ ಇತ್ತು. ಆದರೆ ಶುಕ್ರವಾರ ಯಾವುದೇ ಸಂದೇಶ ರವಾನೆಯಾಗಿಲ್ಲ. ಹೀಗಾಗಿ ಅವುಗಳನ್ನು ಎಬ್ಬಿಸುವ ಪ್ರಕ್ರಿಯೆಯನ್ನು ಶನಿವಾರ ನಡೆಸಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Tap to resize

Latest Videos

undefined

ಇದನ್ನು ಓದಿ: ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲೂ ದೇಸಿ ಜಿಪಿಎಸ್ ನಾವಿಕ್‌ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌!

‘ಸೆಪ್ಟೆಂಬರ್ 22ರಂದು ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಏಳಿಸಲು ನಾವು ಯೋಜನೆ ರೂಪಿಸಿದ್ದೆವು. ಆದರೆ ಹಲವು ಕಾರಣಗಳಿಂದ ಇದನ್ನು ಶನಿವಾರಕ್ಕೆ ಮುಂದೂಡಲಾಗಿದೆ. ಇವುಗಳನ್ನು ಮತ್ತೆ ಸಕ್ರಿಯಗೊಳಿಸಲು ನಮ್ಮ ಬಳಿ ಯೋಜನೆಯಿದೆ. ಈ ಬಾರಿ ರೋವರನ್ನು ಸುಮಾರು 300ರಿಂದ 350 ಮೀ. ದೂರ ಸಾಗುವಂತೆ ಮಾಡಲಿದ್ದೇವೆ. ಈಗಾಗಲೇ ರೋವರ್‌ನಿಂದ ಪಡೆದುಕೊಂಡಿರುವ ಮಾಹಿತಿಯನ್ನು ಆಧರಿಸಿ ನಮ್ಮ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ’ ಎಂದು ಸ್ಪೇಸ್‌ ಅಪ್ಲಿಕೇಶನ್‌ ಕೇಂದ್ರದ ನಿರ್ದೇಶಕ ನಿಲೇಶ್‌ ದೇಸಾಯಿ ಹೇಳಿದ್ದಾರೆ.

ಇದನ್ನೂ ಓದಿ: Explainer: ಬೆಂಕಿ ಚೆಂಡು ಸೂರ್ಯನ ಮೇಲೆ ಸಾಫ್ಟ್‌ ಲ್ಯಾಂಡಿಂಗ್ ಮಾಡುತ್ತಾ ಇಸ್ರೋ ಆದಿತ್ಯ ಎಲ್ 1 ಮಿಷನ್?

ಚಂದ್ರನ ದಕ್ಷಿನ ಧ್ರುವದ ಮೇಲೆ ಸುರಕ್ಷಿತವಾಗಿ ಇಳಿದ ಬಳಿಕ 10 ದಿನಗಳ ಕಾಲ ಕೆಲಸ ಮಾಡಿದ್ದ ರೋವರನ್ನು 2 ದಿನ ಮೊದಲೇ ಸ್ಲೀಪ್‌ಮೋಡ್‌ಗೆ ಹಾಕಲಾಗಿತ್ತು. ಇದೀಗ ಶನಿವಾರ ರೋವರ್‌ ಸಕ್ರಿಯಗೊಂಡರೆ ಮತ್ತೆ 13 ದಿನಗಳ ಕಾಲ ಕಾರ್ಯ ನಿರ್ವಹಿಸಲಿದೆ.

ಇದನ್ನೂ ಓದಿ: ಇಸ್ರೋ ಸೂರ್ಯಶಿಕಾರಿಯ ಕಂಪ್ಲೀಟ್‌ ಡೀಟೇಲ್ಸ್‌ ಹೀಗಿದೆ: ಅಧ್ಯಯನದ ಬಗ್ಗೆ ಇಲ್ಲಿದೆ ವಿವರ..

ಇದನ್ನೂ ಓದಿ: ನಾಸಾ ಪಾರ್ಕರ್‌ ಸೋಲಾರ್‌ ಪ್ರೋಬ್‌ಗೂ ಇಸ್ರೋ ಆದಿತ್ಯ ಎಲ್‌ - 1 ಮಿಷನ್‌ಗೂ ವ್ಯತ್ಯಾಸವೇನು? ಇಲ್ಲಿದೆ ವಿವರ..

click me!