* ವೈದ್ಯ ಲೋಕದಲ್ಲೊಂದು ಅಚ್ಚರಿಯ ಸಂಶೋಧನೆ
* ಸತ್ತ ಮೇಲೂ ನೂರಾರು ವರ್ಷಗಳ ಕಾಲ ಶವವನ್ನ ಹಾಗೆ ಇಟ್ಟುಕೊಳ್ಳಬಹುದಾದ ಪ್ರಯೋಗ
* ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ರಾವ್ ರವರ ಯಶಸ್ವಿ ಸಾಧನೆ.
ವರದಿ: ಟಿ.ಮಂಜುನಾಥ್, ಹೆಬ್ಬಗೋಡಿ, ಬೆಂಗಳೂರು
ಆನೇಕಲ್, (ಮೇ.06) : ಮಾನವ ಸಹಜವಾಗಿ ಸದಾ ಒಂದಲ್ಲ ಒಂದು ರೀತಿಯ ಅವಿಷ್ಕಾರದಲ್ಲಿ ತೋಡಗಿರುತ್ತಾನೆ, ಸಾಧನೆ ಎಂಬುದು ಕಠಿಣವಾದರೂ ಛಲ ಬಿಡದೇ ಬೆನ್ನತ್ತಿದ್ದಾಗ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ, ವೈದ್ಯಕೀಯ ಲೋಕ ಅನ್ನೋದೆ ಹಾಗೆ ಸಾಕಷ್ಟು ಅಚ್ಚರಿಯ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಅದೇ ರೀತಿ ಇಲ್ಲೊಂದು ಪ್ರಯೋಗ ನಡೆದಿದ್ದು ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದೆ.
ಇಡೀ ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಸತ್ತ ಶವವನ್ನ ಕೊಳೆಯಲು ಬಿಡದೆ ವಾಸನೆ ಬಾರದೆ ಸಂರಕ್ಷಣೆ ಮಾಡಿಡುವ ಸಂಶೋಧನೆ ಮಾಡಲಾಗಿದೆ. ನಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡ್ರು ಸಹ ಅವರನ್ನ ನಮ್ಮ ಜೊತೆಯಲ್ಲಿ ಇಟ್ಟುಕೊಳ್ಳಬಹುದಾದ ಸಾಧನೆ ಮಾಡುವಲ್ಲಿ ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ರಾವ್ ಯಶಸ್ವಿಯಾಗಿದ್ದಾರೆ..
undefined
ಕಾಲ್ಪನಿಕ ಹುಡುಗಿಯನ್ನು ಮದುವೆಯಾದ ವ್ಯಕ್ತಿ..! ಅರೆ ಇದು ಹೇಗೆ ಸಾಧ್ಯ ?.
ರಾಸಾಯನಿಕ ಬಳಸಿ ನೂರು ವರ್ಷ ಸತ್ತ ದೇಹ ಇಡಬಹುದು
ಸಹಜ ಮನುಷ್ಯರ ರೀತಿ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಕಾಲ್ಮೇಲೆ ಕಾಲು ಹಾಕಿಕೊಂಡು ಕುಳಿತಿರೋ ವ್ಯಕ್ತಿ, ಇವರ ಜೊತೆ ಮತ್ತಿಬ್ಬರು ವ್ಯಕ್ತಿಗಳು ಕುಳಿತು ಏನೋ ಡಿಸ್ಕರ್ಸ್ ಮಾಡುತ್ತಿರುವ ರೀತಿಯಲ್ಲೇ ಟೇಬಲ್ ಮೇಲೊಂದು ಪುಟ್ಟ ಮಗು.. ಈ ಎಲ್ಲಾ ದೃಶ್ಯಗಳನ್ನ ಒಮ್ಮೆಲೇ ನೋಡಿದ್ರೆ ನಿಜಕ್ಕೂ ಇವರು ಜೀವಂತವಾಗಿರುವ ವ್ಯಕ್ತಿಗಳ ಎಂದು ಎನಿಸುತ್ತದೆ, ಆದ್ರೆ ಇದು ನಿಜಕ್ಕೂ ಅಚ್ಚರಿಯೇ ಸರಿ. ಹೌದು ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿನ ಫೋರೆನ್ಸಿಕ್ ತಜ್ಞ ಡಾ.ದಿನೇಶ್ ರಾವ್ ಈ ಹೊಸ ತಂತ್ರಜ್ಞಾನವನ್ನ ಕಂಡು ಹಿಡಿದಿದ್ದಾರೆ. ಸತ್ತ ಮೇಲೂ ಮನುಷ್ಯನ ದೇಹವನ್ನ ನೂರಾರು ವರ್ಷಗಳ ಕಾಲ ಹಾಗೆ ಇಡಬಹುದಾದ ಒಂದು ಸಂಶೋಧನೆ ಮಾಡುವಲ್ಲಿ ಡಾ.ದಿನೇಶ್ ರಾವ್ ಯಶಸ್ಸಿಯಾಗಿದ್ದಾರೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಈ ರೀತಿಯ ಪ್ರಯೋಗ ಮಾಡಿದ್ದರು ಸಹ ಆ ಎಲ್ಲಾ ಪ್ರಯೋಗಗಳಿಗಿಂತ ಸತ್ತವರ ಶವ ಸಂರಕ್ಷಣೆಯಲ್ಲಿ ವಿಶ್ವದ ವಿಶಿಷ್ಟ ತಂತ್ರವಾಗಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಮುಂಬಲ್ಮಿಂಗ್ ಹೆಸರಿನ ನೂತನ ತಂತ್ರಜ್ನಾನವನ್ನು 2003 ರಿಂದ ನಿತಂತರವಾಗಿ ಸತ್ತ ಪ್ರಾಣಿ, ಪಕ್ಷಿ, ಹಾವು, ಕಪ್ಪೆಗಳ ಮೇಲೆ ಪ್ರಯೋಗ ಮಾಡುತ್ತಾ ಬರಲಾಗಿದೆ. ಸಣ್ಣ ಮಕ್ಕಳಿದ್ದಾಗ ಸತ್ತವರನ್ನು ಹೂಳುವಾಗ, ಬೆಂಕಿಯಲ್ಲಿ ಹಾಕಿದಾಗ ಮನುಷ್ಯನಲ್ಲಿಯೂ ಈ ಪ್ರಯೋಗವನ್ನು ಮಾಡಬೇಕು ಎಂದು ಡಾ.ದಿನೇಶ್ ಸಂಶೋಧನೆ ಮಾಡಲು ಪ್ರಾರಂಭಿಸಿದರು. 18 ಬಗೆಯ ವಿವಿಧ ರಾಸಾಯನಿಕ ಬಳಸಿ, ವ್ಯಕ್ತಿ ಸತ್ತಾಗ ಅವರ ಶವದ ಮೇಲೆ ಈ ರಾಸಾನಿಕವನ್ನು ಪ್ಯಯೋಗ ಮಾಡಿ 2018 ರಲ್ಲಿ ಮನುಷ್ಯನ ಮೇಲೆ ಪ್ರಯೋಗ ಮಾಡಿದಾಗ ಮುಂಬಲ್ಮಿಂಗ್ ಹೆಸರಿನ ಸಂಶೋಧನೆ ಯಶಸ್ವಿಯಾಯಿತು. ಬಳಿಕ 2019 ರಲ್ಲಿ ಹುಟ್ಟಿದ ಮಗುವಿನ ಮೇಲೆಯೂ ಪ್ರಯೋಗ ಮಾಡಲಾಗಿತ್ತು, ಸದ್ಯ ಮೂರು ಜನ ವ್ಯಕ್ತಿಗಳ ಶವ ಹಾಗೂ ಒಂದು ಮಗುವಿನ ಶವವನ್ನು ಆಕ್ಸ್ ಪರ್ಡ್ ಕಾಲೇಜಿನಲ್ಲಿ ಇಡಲಾಗಿದ್ದು, ನೂರು ವರ್ಷವಾದರೂ ಈ ಶವಗಳು ಸತ್ತರು ಸಹ ನಮ್ಮ ಜೊತೆಯೇ ಇರುತ್ತವೆ ಎಂದರು.
ವೈದ್ಯಕೀಯ ವಿದ್ಯಾರ್ಥಿನಿ, ಇಂತಹ ಆವಿಷ್ಕಾರವನ್ನು ಕಂಡು ಹಿಡಿಯುವ ಮೂಲಕ ಪ್ರಪಂಚದಲ್ಲೇ ಮೊದಲ ಬಾರಿಗೆ ಇಂತಹ ವಿಭಿನ್ನವಾಗಿ ಪ್ರಯೋಗವನ್ನು ಮಾಡಿರುವುದು ನಮ್ಮ ಕಾಲೇಜಿಗೆ ಸಂದ ಗೌರವವಾಗಿದೆ. ನನ್ನ ತಾಯಿಗೆ ಮಗಳು ಡಾಕ್ಟರ್ ಆಗಬೇಕೇನ್ನುವ ಆಸೆ ಇತ್ತು. ಆದರೆ ಕಳೆದ ವರ್ಷ ಅವರು ಮೃತ ಮಟ್ಟಿದ್ದು, ಈ ಅಂತ್ರಜ್ಞಾನದ ಬಗ್ಗೆ ಗೊತ್ತಿದ್ದರೆ ನನ್ನ ತಾಯಿಯನ್ನು ಕಣ್ಣ ಮುಂದೆ ಇಟ್ಟುಕೊಳ್ಳುತ್ತಿದ್ದೆ ಎಂದು ಕಣ್ಣೀರು ಹಾಕಿದರು.
ಒಟ್ಟಿನಲ್ಲಿ ಫೋರೆನ್ಸಿಕ್ ತಜ್ಞ ದಿನೇಶ್ ರಾವ್ ಅವರ ಈ ಹೊಸ ತಂತ್ರಜ್ಞಾನ ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದು ಮುಂದಿನ ದಿನಗಳಲ್ಲಿ ಇದು ಹೇಗೆ ಪ್ರಯೋಜನ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.