1.8 ಮಿಲಿಯನ್ ವರ್ಷಗಳ ಹಿಂದಿನ ಆನೆ ಹಲ್ಲು ಸಮುದ್ರ ತಟದಲ್ಲಿ ಪತ್ತೆ, ಜೀವಿಗಳ ರಹಸ್ಯಕ್ಕೆ ರೋಚಕ ತಿರುವು

Published : Jun 29, 2026, 09:49 PM IST
Elephant

ಸಾರಾಂಶ

ತಾಯಿ ಜೊತೆ ಸಮುದ್ರ ತೀರದಲ್ಲಿ ಸಾಗುತ್ತಿದ್ದ 11ರ ಬಾಲಕನಿಗೆ ದೈತ್ಯ ಗಾತ್ರದ ಹಲ್ಲೊಂದು ಪತ್ತೆಯಾಗಿದೆ. ಈ ಹಲ್ಲು ಬರೋಬ್ಬರಿ 1.8 ಮಿಲಿಯನ್ ವರ್ಷಗಳ ಹಿಂದಿನ ಆನೆಯ ಹಲ್ಲು ಅನ್ನೋದು ಪರೀಕ್ಷೆಯಲ್ಲಿ ಸಾಬೀತಾಗಿದೆ. ಇದೀಗ ಜೀವಿಗಳ ಉಗಮ, ರಹಸ್ಯಗಳ ಕುರಿತ ಅಧ್ಯಯನಕ್ಕೆ ರೋಚಕ ತಿರುವು ಸಿಕ್ಕಿದೆ.

ಲಂಡನ್ (ಜೂ.29) ಭೂಮಿಯಲ್ಲಿ ಮೊದಲು ಪರಿಸರದ ಉಗಮ, ಪ್ರಾಣಿಗಳ ಉಗಮ, ಮಂಗನಿಂದ ಮಾನವ ಹೀಗೆ ಜೀವ ಸಂಕುಲ ಬೆಳೆಯುತ್ತಾ ಹೋಗಿದೆ. ಇದೀಗ ಈ ಉಗಮ, ಜೀವಿಗಳ ಇರುವಿಕೆ ಕುರಿತು ಮಹತ್ವದ ದಾಖಲೆಯೊಂದು ಪತ್ತೆಯಾಗಿದೆ. 11ರ ಬಾಲಕ ತಾಯಿ ಜೊತೆ ಸಮುದ್ರ ತೀರದಲ್ಲಿ ಸಾಗುತ್ತಿದ್ದ ವೇಳೆ ಆನೆಯ ಹಲ್ಲೊಂದು ಪತ್ತೆ ಹಚ್ಚಿದ್ದಾನೆ. ಈ ಹಲ್ಲು ಬರೋಬ್ಬರಿ 1.8 ಮಿಲಿಯನ್ ವರ್ಷಗಳ ಹಿಂದಿನ ದೈತ್ಯ ಆನೆಯ ಹಲ್ಲಾಗಿದೆ ಅನ್ನೋದು ಪರೀಕ್ಷೆಯಲ್ಲಿ ಸಾಬೀತಾಗಿದೆ. ಬರೋಬ್ಬರಿ 1.8 ಮಿಲಿಯನ್ ವರ್ಷಗಳ ಹಿಂದಿನ ಪ್ರಾಣಿಗಳ ಇರುವಿಕೆ ಕುರಿತು ಮಹತ್ವದ ಮಾಹಿತಿ ನೀಡಿದೆ.

ಸಮಯ ಕಳೆಯಲು ತೆರಳಿದ ಕುಟುಂಬಕ್ಕೆ ಸಿಕ್ಕಿದ ಅಚ್ಚರಿ

ಭೂಮಿಯಲ್ಲಿ ಪ್ರಾಣಿಗಳ ಇರುವಿಕೆ, ಉಗಮ ನಾವು ಊಹಿಸಿದ ವರ್ಷಗಳಿಗಿಂತಲೂ ಹಿಂದಕ್ಕೆ ಕೊಂಡೊಯ್ಯುತ್ತಿದೆ ಅನ್ನೋದಕ್ಕೆ ಈ ಆನೆಯ ಹಲ್ಲು ಸಾಕ್ಷಿಯಾಗಿದೆ. ಇಂಗ್ಲೆಂಡ್‌ನ ಸಪೋಲ್ಕ್ ಕೌಂಟಿ ಬಳಿ ಇರುವ ಈಸ್ಟ್ ಲೇನ್ ಸಮುದ್ರ ತೀರದಲ್ಲಿ 11ರ ಬಾಲಕ ಚಾರ್ಲಿ ಆರ್ಚರ್ಡ್ ಲಿಸ್ಲೆ ತನ್ನ ತಾಯಿ ಎಲೀನರ್ ಹಾಗೂ ತಂದೆ ಜೇಮಿ ಜೊತೆ ವಿಹರಿಸುತ್ತಿದ್ದ. ಸಮುದ್ರ ತೀರದಲ್ಲಿ ಸಮಯ ಕಳೆಯಲು ಕುಟುಂಬ ತೆರಳಿತ್ತು. ಚಾರ್ಲಿಗೆ ಆನೆಗಳೆಂದರೆ ಇಷ್ಟ. ಹೀಗಾಗಿ ಆನೆಯ ಮ್ಯೂಸಿಯಂ ಸೇರಿದಂತೆ ಹಲವು ಸಂಗ್ರಾಹಲಯಗಳಿಗೆ ತೆರಳಿ ವೀಕ್ಷಿಸಿದ್ದ. ಬೀಚ್‌ನಲ್ಲಿ ತೆರಳುತ್ತಿದ್ದಂತೆ ವಿಶೇಷ ವಸ್ತುವೊಂದು ಬಾಲಕನ ಕಣ್ಣಿಗೆ ಬಿದ್ದಿದೆ. ಕಲ್ಲಿನಂತಿದ್ದ ವಿಶೇಷ ವಸ್ತುವನ್ನು ತೆಗೆದ ಚಾರ್ಲಿಗೆ ಅಚ್ಚರಿಯಾಗಿತ್ತು. ಪೋಷಕರು ಇದು ಯಾವುದೋ ಪ್ರಾಣಿಯ ಹಲ್ಲು ಅನ್ನೋದು ಗೊತ್ತಾಗಿದೆ. ಆರಂಭದಲ್ಲಿ ಡೈನೋಸಾರ್ ಹಲ್ಲುಗಳಾಗಿರಬಹುದಾ ಅನ್ನೋ ಅನುಮಾನವೂ ವ್ಯಕ್ತವಾಗಿತ್ತು.

ಪರೀಕ್ಷಿಸಿ ಸ್ಫೋಟಕ ಮಾಹಿತಿ

ಚಾರ್ಲಿ ಪೋಷಕರು ಈ ಹಲ್ಲಿನ ಫೋಟೋ ತೆಗೆದು ಲಂಡನ್‌ನ ಪಳಿಯುಳಿಕೆ ತಜ್ಞ ಪ್ರೊಫೆಸರ್ ಆ್ಯಡ್ರಿಯನ್ ಲಸ್ಟರ್‌ಗೆ ಕಳುಹಿಸಲಾಗಿದೆ. ಈ ಫೋಟೋ ಪರಿಶೀಲಿಸಿದ ವಿಜ್ಞಾನಿಗಳು ಇದು ಆನೆಯ ಹಲ್ಲು ಎಂದು ಹೇಳಿದ್ದಾರೆ. ಬಳಿಕ ಹಲ್ಲನ್ನು ತರುವಂತೆ ಸೂಚಿಸಿದ್ದಾರೆ. ಹೀಗಾಗಿ ಸಮುದ್ರ ತೀರದಲ್ಲಿ ಸಿಕ್ಕ ವಿಶೇಷ ಕಲ್ಲಿನಂತಿದ್ದ ವಸ್ತುವನ್ನ ಚಾರ್ಚಿ ಪೋಷಕರು ಪ್ರೊಫೆಸರ್‌ಗೆ ತಲುಪಿಸಿದ್ದಾರೆ. ಬಳಿಕ ಅಧ್ಯಯನ ಆರಂಭಗೊಂಡಿದೆ. ತಜ್ಞರ ತಂಡ ಆನೆಯ ಹಲ್ಲಿನ ಕುರಿತ ಅಧ್ಯಯನ ಆರಂಭಿಸಿತ್ತು. ಮೊದಲು ಹಲ್ಲನ್ನು ಹಲವು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅಚ್ಚರಿಯ ಫಲಿತಾಂಶ ಲಭ್ಯವಾಗಿದೆ. ಭೂಮಿಯ ಮೇಲಿದ್ದ ದೈತ್ಯ ಆನೆ ತಳಿಯ ಹಲ್ಲು ಅನ್ನೋದು ಸಾಬೀತಾಗಿದೆ. ಇಷ್ಟೇ ಬರೋಬ್ಬರಿ 1.8 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದ ಆನೆ ಅನ್ನೋದು ಸಾಬೀತಾಗಿದೆ. ಅನಾಂಕಸ್ ಅರ್ವರ್ನೆನ್ಸಿಸ್ ಅನ್ನೋ ದೈತ್ಯ ಆನೆ ತಳಿಯ ಹಲ್ಲು ಎಂದು ಸಂಶೋಧಕರು ಹೇಳಿದ್ದಾರೆ.

ಸಮುದ್ರದಲ್ಲಿನ ಮರಳು ಹಾಗೂ ಮಣ್ಣಿನ ಸವೆತದಿಂದ ನೀರಿನೊಳಗೆ ಹುದುಗಿ ಹೋಗಿದ್ದ ಹಲ್ಲು ಪತ್ತೆಯಾಗಿದೆ. ಅನಾಂಕಸ್ ಅರ್ವರ್ನೆನ್ಸಿಸ್ ದೈತ್ಯ ಆನೆ ತಳಿಗಳು ಇಂದಿನ ಆಫ್ರಿಕನ್ ಆನೆಗಳ ಪೂರ್ವಜ ವಂಶಕ್ಕೆ ಸೇರಿದೆ ಎಂದು ತಜ್ಞರು ಹೇಳಿದ್ದಾರೆ. ಈ ಆನೆಗಳು 8 ಅಡಿಗಿಂತ ಹೆಚ್ಚು ಎತ್ತರ, ಬರೋಬ್ಬರಿ 6 ಟನ್ ತೂಕ ಹೊಂದಿರುತ್ತಿತ್ತು ಎಂದಿದ್ದಾರೆ.

ಇದೀಗ ಅಧ್ಯಯನಕಾರರ ತಂಡ ಬ್ರಿಟನ್ ಕಡಲ ತೀರದಲ್ಲಿ ಬಿಡುಬಿಟ್ಟಿದೆ. ಇಲ್ಲಿನ ಕಾಡು, ಬೆಟ್ಟ ಪ್ರದೇಶಗಳಲ್ಲಿ ಹುಡುಕಾಟ ಶುರು ಮಾಡಿದೆ. ಇಲ್ಲಿ ಸಿಗುವ ಪಳೆಯುಳಿಕೆಗಳು ಜೀವ ಸಂಕುಲದ ಇತಿಹಾಸದಲ್ಲೇ ಹೊಸ ತಿರುವು ನೀಡುವ ಸಾಧ್ಯತೆ ಇದೆ ಎಂಬು ವಿಜ್ಞಾನಿಗಳು ಹೇಳಿದ್ದಾರೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Loneliness: ಸಾವಿರಾರೂ ಜನರ ನಡುವಿದ್ದರೂ ಏಕಾಂಗಿ ಭಾವನೆ! ನಿಮ್ಮನ್ನೂ ಕಾಡುತ್ತಿದೆಯಾ ಈ ಸೈಲೆಂಟ್ ಮಹಾಮಾರಿ? ಪರಿಹಾರವೇನು?
ಮಹಾ ಪಿರಮಿಡ್ ಬರಿ ಸಮಾಧಿಯಲ್ಲ, ಖಗೋಳದ ಗಣಿತ ಕಣಜ! ಚಂದ್ರ, ಗ್ರಹಗಳ ಲೆಕ್ಕ, ಹೊಸ ಸಿದ್ಧಾಂತದಿಂದ ಶಾಕಿಂಗ್ ಸತ್ಯ ಬಯಲು!