ISRO ಹೊಸ ಹೆಜ್ಜೆ, ಬಾಹ್ಯಾಕಾಶ ಕ್ಷೇತ್ರ ಖಾಸಗೀಕರಣದತ್ತ.. NASA ಹಾದಿಯಲ್ಲಿ ಭಾರತ..!

Published : Aug 16, 2026, 06:50 PM IST
ISRO

ಸಾರಾಂಶ

ಇಸ್ರೋ ತನ್ನ ನೂತನ ಕುಲಶೇಖರಪಟ್ನಂ ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವ ಮೂಲಕ ಬಾಹ್ಯಾಕಾಶ ವಾಣಿಜ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸುತ್ತಿದೆ. ನಾಸಾ ಮತ್ತು ಸ್ಪೇಸ್‌ಎಕ್ಸ್ ಮಾದರಿಯಂತೆ, ಈ ಕ್ರಮವು ಸಣ್ಣ ಉಪಗ್ರಹಗಳ ಉಡಾವಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸಿ ಇಸ್ರೋಗೆ ಹೆಚ್ಚಿನ ಸಂಶೋಧನೆಗೆ ಅವಕಾಶ ಕಲ್ಪಿಸಲಿದೆ.

ಬೆಂಗಳೂರು/ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೊಸ ಯುಗದತ್ತ ಹೆಜ್ಜೆ ಇಟ್ಟಿದೆ. ಸಂಶೋಧನೆ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಭಾರತವು ಮೊದಲ ಬಾರಿಗೆ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗೀಕರಣದತ್ತ ಕೊಂಡೊಯ್ಯುತ್ತಿದೆ. ಇದರ ಮೊದಲ ಹಂತವಾಗಿ ತಮಿಳುನಾಡಿನ ಕುಲಶೇಖರಪಟ್ನಂನಲ್ಲಿ ನಿರ್ಮಿಸಲಾಗುತ್ತಿರುವ ನೂತನ 'ಸ್ಪೇಸ್‌ಪೋರ್ಟ್' (ಬಾಹ್ಯಾಕಾಶ ನಿಲ್ದಾಣ) ಅನ್ನು ಸರ್ಕಾರಿ ಸಂಸ್ಥೆಯಾದ ‘ಇನ್-ಸ್ಪೇಸ್‌’ (IN-SPACe)ಗೆ ಹಸ್ತಾಂತರಿಸಲಾಗಿದೆ.

ಏನಿದು ಕುಲಶೇಖರಪಟ್ನಂ ಪ್ರಾಜೆಕ್ಟ್?

ದೇಶದ ವಾಣಿಜ್ಯ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸಲು ಇಸ್ರೋ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ತಮಿಳುನಾಡಿನ ಕುಲಶೇಖರಪಟ್ನಂನಲ್ಲಿ ಸುಮಾರು 1,200 ಎಕರೆ ವಿಸ್ತೀರ್ಣದಲ್ಲಿ 950 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡನೇ ರಾಕೆಟ್ ಉಡಾವಣಾ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ.

ಇಸ್ರೋ ಇತ್ತೀಚೆಗೆ ಅಭಿವೃದ್ಧಿಪಡಿಸಿದ 'ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್' (SSLV) ಅಥವಾ ಸಣ್ಣ ಉಪಗ್ರಹ ಉಡಾವಣಾ ನೌಕೆಗಳಿಗೆ ಈ ಕೇಂದ್ರವು ಅತ್ಯಂತ ಸೂಕ್ತವಾಗಿದೆ. ಕಡಿಮೆ ವೆಚ್ಚದಲ್ಲಿ, ಕಡಿಮೆ ಸಮಯದಲ್ಲಿ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ಇದು ಸಹಕಾರಿ. ಇಸ್ರೋ ತನ್ನ ಪ್ರಮುಖ ಮತ್ತು ಬೃಹತ್ ಯೋಜನೆಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಡೆಸಲಿದ್ದು ವಾಣಿಜ್ಯ ಮತ್ತು ಸಣ್ಣ ಉಡಾವಣೆಗಳನ್ನು ಕುಲಶೇಖರಪಟ್ನಂಗೆ ವರ್ಗಾಯಿಸಲಿದೆ.

ಈ ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಳ್ಳಲು ಖಾಸಗಿ ಕಂಪನಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಮೂಲಗಳ ಪ್ರಕಾರ ಭಾರತದ ಪ್ರಮುಖ ಖಾಸಗಿ ಬಾಹ್ಯಾಕಾಶ ಕಂಪನಿಗಳಾದ 'ಸ್ಕೈರೂಟ್ ಏರೋಸ್ಪೇಸ್' (Skyroot Aerospace) ಮತ್ತು 'ಅಗ್ನಿಕುಲ್' (Agnikul) ಸೇರಿದಂತೆ ಹಲವು ಸಂಸ್ಥೆಗಳು ಸುಮಾರು 1,000 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿವೆ ಎಂದು ತಿಳಿದುಬಂದಿದೆ. ಟೆಂಡರ್ ಪ್ರಕ್ರಿಯೆಯ ನಂತರ ಸಣ್ಣ ಗಾತ್ರದ ರಾಕೆಟ್ ಉಡಾವಣೆಗಳ ಸಂಪೂರ್ಣ ಜವಾಬ್ದಾರಿಯನ್ನು ಈ ಖಾಸಗಿ ಕಂಪನಿಗಳೇ ನಿರ್ವಹಿಸಲಿವೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ' (NASA) ಹೇಗೆ ತನ್ನ ಸಂಶೋಧನೆಗಳ ಮೇಲೆ ಗಮನಹರಿಸಿ, ಉಡಾವಣಾ ಜವಾಬ್ದಾರಿಗಳನ್ನು ಎಲೋನ್ ಮಸ್ಕ್ ಅವರ 'ಸ್ಪೇಸ್‌ಎಕ್ಸ್' (SpaceX) ನಂತಹ ಖಾಸಗಿ ಸಂಸ್ಥೆಗಳಿಗೆ ನೀಡಿದೆಯೋ, ಅದೇ ಹಾದಿಯಲ್ಲಿ ಭಾರತವೂ ಸಾಗುತ್ತಿದೆ. ಇದರಿಂದ ಇಸ್ರೋಗೆ ಸಂಶೋಧನೆಗೆ ಹೆಚ್ಚಿನ ಸಮಯ ಸಿಗಲಿದ್ದು, ಖಾಸಗಿ ಸಂಸ್ಥೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ವಾಣಿಜ್ಯ ಉಪಗ್ರಹ ಉಡಾವಣಾ ಮಾರುಕಟ್ಟೆಯನ್ನು ವಿಸ್ತರಿಸಲು ಸಹಕಾರಿಯಾಗಲಿವೆ. ಭವಿಷ್ಯದಲ್ಲಿ ಇಸ್ರೋದ ಇನ್ನೂ ಕೆಲವು ಪ್ರಮುಖ ವಿಭಾಗಗಳನ್ನು ಖಾಸಗೀಕರಣಗೊಳಿಸುವ ಸಾಧ್ಯತೆಗಳಿದ್ದು, ಈ ಮೂಲಕ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ 'ಬ್ಯುಸಿನೆಸ್ ಹಬ್' ಆಗಿ ಬೆಳೆಯುವ ಗುರಿ ಹೊಂದಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಜೇಮ್ಸ್ ವೆಬ್ ಟೆಲಿಸ್ಕೋಪ್‌ನ ಅಚ್ಚರಿಯ ಶೋಧ: ಬ್ರಹ್ಮಾಂಡದ ನಿಗೂಢ ಬ್ಲ್ಯಾಕ್ ಹೋಲ್ ಮೇಲೆ ಬೆಳಕು ಚೆಲ್ಲಿದ ವಿಜ್ಞಾನಿಗಳು!
ಮೊದಲ ಗಡಿಯಾರ ತಯಾರಿಸಿದವನಿಗೆ ಸಮಯ ಗೊತ್ತಾಗಿದ್ದು ಹೇಗೆ? ಇತಿಹಾಸದ ರೋಚಕ ಅಧ್ಯಾಯ