ಚಂದ್ರಯಾನ 5 ಮಿಷನ್‌ಗೆ ಸಜ್ಜಾದ ಭಾರತ, ಜಪಾನ್ ಜೊತೆ ಚಂದ್ರನಲ್ಲಿ ನೀರು ಪತ್ತೆ ಹಚ್ಚಲು ಡ್ರಿಲ್

Published : May 16, 2025, 11:31 PM IST
ಚಂದ್ರಯಾನ 5 ಮಿಷನ್‌ಗೆ ಸಜ್ಜಾದ ಭಾರತ, ಜಪಾನ್ ಜೊತೆ ಚಂದ್ರನಲ್ಲಿ ನೀರು ಪತ್ತೆ ಹಚ್ಚಲು ಡ್ರಿಲ್

ಸಾರಾಂಶ

ಚಂದ್ರನ ಸೌತ್ ಪೋಲ್‌ನಲ್ಲಿ ಇಸ್ರೋ ನೀರು ಶೋಧಿಸುವ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ಜಪಾನ್ ಜೊತೆ ಸೇರಿ ಚಂದ್ರನ ಸೌತ್ ಪೊಲ್‌ನಲ್ಲಿ ರಂದ್ರ ಕೊರೆಯಲಿದೆ.

ನವದೆಹಲಿ(ಮೇ.16) ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಚಂದ್ರಯಾನ 4 ಯೋಜನೆ ಪ್ರಗತಿಯಲ್ಲಿದೆ. ಇದರ ನಡುವೆ ಚಂದ್ರಯಾನ 5 ಯೋಜನೆ ಕೂಡ ಚಾಲ್ತಿಯಲ್ಲಿದೆ. ಈ ಚಂದ್ರಯಾನ 5 ಮಿಷನ್ ಜಗತ್ತಿಗೆ ಹಲವು ಅಚ್ಚರಿ ನೀಡುವ ಸಾಧ್ಯತೆ ಇದೆ. ಕಾರಣ ಇದೇ ಮೊದಲ ಬಾರಿಗೆ ಚಂದ್ರನ ಮೇಲೆ ನೀರು ಶೋಧಿಸುವ ಕಾರ್ಯಕ್ಕೆ ಇಸ್ರೋ ಹಾಗೂ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಎಜೆನ್ಸಿ ಜಂಟಿಯಾಗಿ ಈ ಮಿಷನ್ ಕೈಗೆತ್ತಿಕೊಂಡಿದೆ. ಚಂದ್ರನ ಮೇಲೆ ಯಾರೂ ಇಳಿಯದ ಜಾಗ ಸೌತ್ ಪೋಲ್‌ನಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು. ಇದೀಗ ಇದೇ ಜಾಗದಲ್ಲಿ ಭಾರತದ ರಂಧ್ರ ಕೊರೆತು ಚಂದ್ರನ ಮೇಲೆ ನೀರಿನ ಹುಡುಕಾಟ ನಡೆಸಲಿದೆ.

ಭಾರತದ ಇಸ್ರೋ ಹಾಗೂ ಜಪಾನ್‌ನ  ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಎಜೆನ್ಸಿ ಲೂನಾರ್ ಪೋಲಾರ್ ಎಕ್‌ಪ್ಲೋರೇಶನ್ ಮಿಷನ್ ಜಂಟಿಯಾಗಿ ನಡೆಸುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಜೊತೆ ಇಸ್ರೋ ನಡೆಸುತ್ತಿರುವ ಅತ್ಯಂತ ಮಹತ್ವದ ಮಿಷನ್ ಇದಾಗಿದೆ. ಜಪಾನ್ H3 ರಾಕೆಟ್ ಉಡಾವಣೆ ಮಾಡಿ ಈ ಮೂಲಕ ಈ ಸಂಶೋಧನೆ ನಡೆಯಲಿದೆ.

ಚಂದ್ರನ ಮೇಲೆ ನೀರು ಇದೆಯಾ? 
ಚಂದ್ರನ ಮೇಲೆ ನೀರು ಇದೆಯಾ ಅನ್ನೋದು ಪತ್ತೆ ಹೆಚ್ಚೋದು ಈ ಮಿಷನ್ ಪ್ರಮುಖ ಉದ್ದೇಶ. ಹಾಗಂತ ಚಂದ್ರನ ಮೇಲಿನ ಕಣಗಳ ಅಧ್ಯಯನ ನಡೆಸುವ ಮಿಷನ್ ಇದಲ್ಲ. ಇದು ಭೂಮಿಯಲ್ಲಿ ಅಂತರ್ಜಲ ತೆಗೆಯಲು ಹೇಗೆ ಬೋರ್‌ವೆಲ್ ಅಥವಾ ಭಾವಿ ಕೊರೆಯಲಾಗುತ್ತದೋ, ಅದೇ ರೀತಿ ಚಂದ್ರನಲ್ಲೂ ರಂಧ್ರ ಕೊರೆದು ನೀರು ಇದೆಯಾ ಅನ್ನೋದು ಪತ್ತೆ ಹಚ್ಚಲಾಗುತ್ತದೆ. ನೀರು ಅಥವಾ ನೀರಿನ ಮಂಜುಗಡ್ಡೆ ಚಂದ್ರನಲ್ಲಿ ಇದೆಯಾ ಅನ್ನೋದು ಈ ಮಿಷನ್ ಮೂಲಕ ಬಹಿರಂಗವಾಗಲಿದೆ.

ಚಂದ್ರಯಾನ 5ನಲ್ಲಿ 6.5 ಟನ್ ಪೇಲೋಡ್
ಚಂದ್ರಯಾನ 5 ಮಿಷನ್‌ನಲ್ಲಿ ಪೇಲೋಡ್ ಸಾಮರ್ಥ್ಯ ಬರೋಬ್ಬರಿ 6.5 ಟನ್ . ಇದರಲ್ಲಿ 250 ಕೆಜಿ ತೂಕದ ರೋವರ್ ಕೂಡ ಸೇರಿದೆ. ಚಂದ್ರಯಾನ 3ಯಲ್ಲಿ ಬಳಸಿದ ಪ್ರಗ್ಯಾನ್ ರೋವರ್‌ಗಿಂತ 10 ಪಟ್ಟು ಹೆಚ್ಚು ತೂಕದ ರೋವರ್‌ನ್ನು ಚಂದ್ರಯಾನ 5 ಮಿಷನ್‌ನಲ್ಲಿ ಬಳಕೆ ಮಾಲಾಗುತ್ತಿದೆ.  ಇದರ ಜೊತೆಗೆ ನೀರು ಪತ್ತೆ ಹಚ್ಚುವ ಸಾಧನ,ರೇಡಾರ್, 1.5 ಮೀಟರ್ ಡ್ರಿಲ್ಲರ್, ನೀರು ಸಿಕ್ಕರೆ ಅದರ ಗುಣಟ್ಟ ಪರೀಕ್ಷಿಸುವ ತಂತ್ರಜ್ಞಾನಗಳು ಸೇರಿದಂತೆ ಅಧ್ಯಯನಕ್ಕೆ ಬೇಕಾದ ಎಲ್ಲವೂ ಇರಲಿದೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ