
ಭೂಮಿ ತನ್ನ ಅಕ್ಷೆಯ ಮೇಲೆ ಒಂದು ಸುತ್ತು ತಿರುಗಲು 24 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಹಗಲು ಹಾಗೂ ರಾತ್ರಿ ಸಂಭವಿಸುತ್ತದೆ. ಇನ್ನು ಭೂಮಿ ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು 365 ದಿನ ತೆಗೆದುಕೊಳ್ಳುತ್ತದೆ. ಆದರೆ ನಮ್ಮ ಅನುಭವಕ್ಕೆ ಬರುವುದಿಲ್ಲ. ದಿನವಿಡಿ ನಾವು ಎಚ್ಚರವಿದ್ದರೂ ಭೂಮಿ ತಿರುಗುವ ಅನುಭವಕ್ಕೆ ಬರುವುದಿಲ್ಲ. ಆದರೆ ನಮ್ಮ ಅನುಭವಕ್ಕೆ ಬರುವಂತೆ ಭೂಮಿ ತಿರುಗುವಿಕೆಯನ್ನು ಸೆರೆ ಹಿಡಿಯಲಾಗಿದೆ. ನದಿಯಲ್ಲಿ ಕ್ಯಾಮೆರಾ ಇಟ್ಟು 24 ಗಂಟೆಯಲ್ಲಿ ಭೂಮಿ ಹೇಗೆ ತಿರುಗುತ್ತೆ, ತಿರುಗುವಿಕೆಯ ವೇಗ ಎಲ್ಲವನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.
ಭೂಮಿ ತಿರುಗುವಿಕೆಯನ್ನು ಸ್ಪಷ್ಟವಾಗಿ ಚಿತ್ರೀಕರಿಸಲು ಫೋಟೋಗ್ರಾಫರ್ ತನ್ನ ಹೈಕ್ವಾಲಿಟಿ ಕ್ಯಾಮೆರಾವನ್ನು ನದಿಯಲ್ಲಿ ಫಿಕ್ಸ್ ಮಾಡಿದ್ದಾನೆ. ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರು ಶಾಂತವಾಗಿ ಹರಿಯುತ್ತಿದೆ. ಕಲ್ಲುಗಳು, ಬಂಡೆಗಳ ನಡುವೆ ನದಿ ನೀರು ಹರಿಯುತ್ತಿರುವ ಕಡೆ ಕ್ಯಾಮೆರಾ ಫಿಕ್ಸ್ ಮಾಡಿದ್ದಾನೆ. ನದಯಿ ಹರಿವು ಹಾಗೂ ಆಗಸವೂ ಸ್ಪಷ್ಟವಾಗಿ ಸೆರೆಯಾಗುವಂತೆ ಕ್ಯಾಮೆರಾ ಇಡಲಾಗಿದೆ. ನದಿ, ಪಕ್ಕದಲ್ಲಿರುವ ಪೊದೆಗಳು, ದೂರದ ಕಾಡು ಹಾಗೂ ಆಗಸ ಸ್ವಷ್ಟವಾಗಿ ಗೋಚರಿಸುವಂತೆ ಕ್ಯಾಮೆರಾ ಇಟ್ಟು ರೆಕಾರ್ಡ್ ಆನ್ ಮಾಡಲಾಗಿದೆ.
ಒಂದು ಇಡೀ ದಿನ ಅಂದರೆ 24 ಗಂಟೆ ಕ್ಯಾಮೆರಾ ರೆಕಾರ್ಡ್ ಆನ್ ಮಾಡಲಾಗಿದೆ. ಇಡೀ ದಿನ ಭೂಮಿಯ ತಿರುಗುವಿಕೆ ವೇಗ, ಅಕ್ಷದಲ್ಲಿ ಸುತ್ತುವ ಆಕಾರ ಸೇರಿದಂತೆ ಎಲ್ಲವೂ ಈ ವಿಡಿಯೋದಲ್ಲಿ ಸೆರೆಯಾಗಿದೆ. ಸೂರ್ಯನ ಬೆಳಕು ಹರಿದು ಬಳಿಕ ಸಂಜೆಯಾಗುತ್ತಿದ್ದಂತೆ ಸೂರ್ಯ ಭೂಮಿಯಿಂದ ದೂರ ಸರಿಯುತ್ತಿರುವಂತೆ ಗೋಚರಿಸುತ್ತದೆ. ಬಳಿಕ ಕತ್ತಲು ಆವರಿಸಿಕೊಳ್ಳುತ್ತದೆ. ಲಕ್ಷಾಂತರ ನಕ್ಷತ್ರಗಳು, ಚಂದ್ರನ ಪ್ರಕಾಶ, ಆಕಾಶಕಾಯಗಳು ದೂರ ದೂರ ಸರಿಯುವಂತೆ ಗೋಚರಿಸುತ್ತದೆ. ಕತ್ತಲು ದೂರವಾಗಿ ಬೆಳಕು ಹರಿಯುತ್ತದೆ. ಇಡೀ ದಿನದಲ್ಲಿ ಭೂಮಿಯ ತಿರುಗುವಿಕೆ ಸ್ಪಷ್ಟವಾಗಿ ಸೆರೆ ಹಿಡಿಯಲಾಗಿದೆ.
ಈ ದೃಶ್ಯದಲ್ಲಿ ಆಗಸ ತಿರುಗುವಂತೆ ಭಾಸವಾಗುತ್ತದೆ. ಆದರೆ ಅಸಲಿಗೆ ಭೂಮಿ ತಿರುಗುವಿಕೆ. ಭೂಮಿ ತಿರುಗುವಾಗ ನಮ್ಮ ಅನುಭವಕ್ಕೆ ಬರುವುದಿಲ್ಲ ಯಾಕೆ ಅನ್ನೋ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಭೂಮಿ ಒಂದೇ ವೇಗದಲ್ಲಿ ತಿರುಗುತ್ತದೆ. ವೇಗ ಹೆಚ್ಚು ಕಡಿಮೆ ಆಗುವುದಿಲ್ಲ. ಜೊತೆಗೆ ಭೂಮಿಯ ಜೊತೆಗೆ ಇಡೀ ಪರಿಸರವೂ ಚಲಿಸುತ್ತದೆ. ಅಂದರೆ ಗಾಳಿ, ನೀರು, ನಾವು ಸೇರಿದಂತೆ ಭೂಮಿಯ ಎಲ್ಲವೂ ತಿರುಗುತ್ತದೆ. ಹೀಗಾಗಿ ನಮ್ಮ ಅನುಭವಕ್ಕೆ ಬರುವುದಿಲ್ಲ.
ಹಲವು ವಿಜ್ಞಾನಿಗಳು ವಿಡಿಯೋ ಮೂಲಕ ಭೂಮಿ ತಿರುಗುವಿಕೆ ಸೇರಿದಂತೆ ಹಲವು ಕೌತುಗಳನ್ನು ಸೆರೆ ಹಿಡಿದಿದ್ದಾರೆ. ಭಾರತದ ವಿಜ್ಞಾನಿಗಳು ಲಡಾಖ್ ಪ್ರದೇಶದಲ್ಲಿ ಕ್ಯಾಮೆರಾ ಇಟ್ಟು ಭೂಮಿ ತಿರುಗುವಿಕೆ ಸೆರೆ ಹಿಡಿದಿದ್ದರು. ಇದೀಗ ನದಿಯಲ್ಲಿ ಕ್ಯಾಮೆರಾ ಇಟ್ಟು ಅದ್ಭುತ ದೃಶ್ಯ ಸೆರೆ ಹಿಡಿಯಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.