
ನವದೆಹಲಿ : ಬೆಂಗಳೂರು ಮೂಲದ ಸ್ಟಾರ್ಟಪ್ ದಿಗಂತರ, ಭವಿಷ್ಯದ ಚಂದ್ರಯಾನಗಳಿಗೆ ಹಾನಿ ಮಾಡಬಹುದಾದ ಬಾಹ್ಯಾಕಾಶ ಶಿಲಾ ಅವಶೇಷಗಳನ್ನು ಪತ್ತೆಹಚ್ಚಲು ಚಂದ್ರನ ಸುತ್ತಲಿನ ಕಕ್ಷೆಯ ನಕ್ಷೆಯನ್ನು ರಚಿಸಲು ಜಪಾನಿನ ಐಸ್ಪೇಸ್ ಇಂಕ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಶುಕ್ರವಾರ ಘೋಷಿಸಿದೆ.
ಎರಡೂ ಸಂಸ್ಥೆಗಳು ಸೇರಿ ಸಾವಿರಾರು ಉಪಗ್ರಹಗಳಿಂದ ತುಂಬಿರುವ ಭೂಮಿಯ ಕೆಳ ಕಕ್ಷೆಯ ಗೂಗಲ್ ಮ್ಯಾಪ್ ರಚಿಸಲಿವೆ. ಚಂದ್ರ ಮತ್ತು ಭೂಮಿಯ ನಡುವಿನ ವಾತಾವರಣವನ್ನು ಪರೀಕ್ಷಿಸಿ, ಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಕೆಲಸ ಮಾಡಲಿವೆ.
ಇದು ಭವಿಷ್ಯದ ಚಂದ್ರಯಾನ ಯೋಜನೆಗಳಿಗೆ ನೆರವಾಗಲಿವೆ.‘ದಿಗಂತರ ಮತ್ತು ಐಸ್ಪೇಸ್‌ನ ಸಂಯೋಜನೆಯ ಮೂಲಕ, ಚಂದ್ರನ ಸುತ್ತ ದೀರ್ಘಕಾಲೀನ ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಸಂಪನ್ಮೂಲ ಬಳಕೆಗೆ ಅಡಿಪಾಯ ಹಾಕುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ದಿಗಂತರ ಹೇಳಿಕೆ ನೀಡಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಜಪಾನ್ ಭೇಟಿ ವೇಳೆ ಈ ಪಾಲುದಾರಿಕೆಯನ್ನು ಅಂತಿಮಗೊಳಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.