ಸಂಚಾರಿ ಪೊಲೀಸರ ಜತೆ ಕಿರಿಕ್‌ : ಇಬ್ಬರು ಯುವಕರ ಅರೆಸ್ಟ್

By Kannadaprabha News  |  First Published Oct 19, 2019, 10:18 AM IST

ಸಂಚಾರಿ ಪೊಲೀಸರ ಜೊತೆಗೆ ಕಿರಿಕ್ ಮಾಡಿಕೊಂಡ ಇಬ್ಬರು ಯುವಕರನ್ನು ಅರೆಸ್ಟ್ ಮಾಡಲಾಗಿದೆ. 


ಚನ್ನಪಟ್ಟಣ [ಅ.19]:  ವಾಹನ ಅಡ್ಡಗಟ್ಟಿದ ಸಂಚಾರಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಇಬ್ಬರು ಯುವಕರು ಇದೀಗ ಸೆರೆಮನೆಗೆ ಸೇರಿದ್ದಾರೆ.

ಸುಪ್ರೀತ್‌(21), ಗಿರೀಶ್‌(24) ಪೊಲೀಸರ ಜತೆ ಜಗಳವಾಡಿ ಸೆರೆಮನೆ ಸೇರಿರುವ ಯುವಕರು. ಪಕ್ಕದ ಮದ್ದೂರು ತಾಲೂಕಿನವರಾದ ಇವರು ಕಾರ್ಯ ನಿಮಿತ್ತ ನಗರಕ್ಕೆ ಆಗಮಿಸಿದ್ದಾರೆ. ಇಲ್ಲಿನ ಪೊಲೀಸ್‌ ಠಾಣೆ ಮುಂಭಾಗ ಹೆಲ್ಮೆಟ್‌ ಇಲ್ಲದೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇವರನ್ನು ಪೊಲೀಸರು ತಡೆದು ದಾಖಲೆ ತೋರಿಸುವಂತೆ ಕೇಳಿದ್ದಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದ​ರಿಂದ ಕುಪಿತಗೊಂಡ ಯುವಕರು ಪೊಲೀಸರ ಜೊತೆ ಜಗಳ ಕಾಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ, ಯುವಕರ ಬಳಿ ವಾಹನದ ದಾಖಲೆ, ಚಾಲನಾ ಪರವಾನಗಿ ಸೇರಿದಂತೆ ಯಾವುದೇ ದಾಖಲೆ ಇರಲಿಲ್ಲ ಎಂದು ಆರೋಪಿಸಿ ಸಂಚಾರಿ ಎಎಸ್‌ಐ ಸುರೇಶ್‌ ನೀಡಿದ ದೂರಿನ ಮೇಲೆ ಕ್ರಮ ಕೈಗೊಂಡಿರುವ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಧೀಶರು ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

click me!